ಪಾಕಿಸ್ತಾನ್ ದಲ್ಲಿ ಮತ್ತೆ ಸ್ಫೋಟ: ಇಬ್ಬರ ದುರ್ಮರಣ
ಇಸ್ತಾಂಬೂಲ್, ನವೆಂಬರ್.25: ಬೇರೆಯವರನ್ನು ಸುಡಲು ಹುಟ್ಟಿಕೊಂಡ ಬೆಂಕಿ ಮೊದಲು ತಾನಿರುವ ಜಾಗವನ್ನೇ ಸುಡುತ್ತದೆ. ಈ ಮಾತು ಪಾಕಿಸ್ತಾನದ ಪಾಲಿಗೆ ಪದೇ ಪದೆ ನಿಜವಾಗುತ್ತಿದೆ. ಉಗ್ರರಿಗೆ ಊಟ ಹಾಕುತ್ತಿರುವ ಪಾಕ್, ಉಗ್ರ ಸಂಘಟನೆಗಳ ನೆಲೆ ಎಂದು ಇಡೀ ವಿಶ್ವವೇ ದೂಷಿಸುತ್ತಿದೆ.
ವಿಶ್ವದ ಎದುರು ತನ್ನನ್ನು ಸಾಚಾ ಎಂದು ಕೊಚ್ಚಿಕೊಳ್ಳುವ ಪಾಕಿಸ್ತಾನ್ ನಲ್ಲಿ ಬಾರಿ ಬಾರಿ ಉಗ್ರ ಚಟುವಟಿಕೆಗಳು ನಡೆಯುತ್ತಲೇ ಇವೆ. ಇಂದೂ ಕೂಡಾ ಅಂಥದ್ದೇ ಮತ್ತೊಂದು ಘಟನೆ ಪಾಕಿಸ್ತಾನ್ ದಲ್ಲಿ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕ್ ಮುಖವಾಡ ಕಳಚಿದೆ.

ಪಾಕಿಸ್ತಾನ್ ನೆಲದಲ್ಲಿ ಉಗ್ರ ಚಟುವಟಿಕೆಗಳು ಸರ್ವೇ ಸಾಮಾನ್ಯ ಅನ್ನೋದಕ್ಕೆ ಇಂದಿನ ದುರ್ಘಟನೆಯೇ ಬೆಸ್ಟ್ ಎಕ್ಸಾಂಪಲ್ ಆಗಿದೆ. ಐಇಡಿ ಬಾಂಬ್ ಸ್ಫೋಟಕ್ಕೆ ಇಬ್ಬರು ಅಮಾಯಕ ಜನರು ಪ್ರಾಣ ಬಿಟ್ಟಿದ್ದಾರೆ.

ಐಇಡಿ ಬಾಂಬ್ ಸ್ಫೋಟಕ್ಕೆ ಎರಡು ಬಲಿ
ಪಾಕಿಸ್ತಾನ್ ನಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ದೇರಾ ಇಸ್ಲಾಂ ಖಾನ್ ಜಿಲ್ಲೆಯ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ಸುಧಾರಿತ ಐಇಡಿ ಬಾಂಬ್ ಸ್ಫೋಟಿಸಲಾಗಿದೆ. ಈ ಸ್ಫೋಟದಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಇನ್ನು, ಸ್ಫೋಟದ ಹಿಂದೆ ಯಾವ ಉಗ್ರ ಸಂಘಟನೆಯಿದೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ.












Click it and Unblock the Notifications