Pakistan Train Hijack: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಮಾಡಿ 180 ಪ್ರಯಾಣಿಕರನ್ನು ಒತ್ತೆಯಾಳಾಗಿಸಿಕೊಂಡ ಉಗ್ರರು
ಪಾಕಿಸ್ತಾನದಲ್ಲಿ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನೈಋತ್ಯ ಪಾಕಿಸ್ತಾನದಲ್ಲಿ ಮಂಗಳವಾರ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲಿನ ಮೇಲೆ ದಾಳಿ ಮಾಡಿದ್ದು ಒತ್ತೆಯಿರಿಸಿಕೊಂಡಿದ್ದಾರೆ. ಮಿಲಿಟರಿ ಗ್ರೂಪ್ ಬಲೂಚ್ ಲಿಬರೇಶನ್ ಆರ್ಮಿ ಈ ದಾಳಿ ಮಾಡಿರುವುದಾಗಿ ಹೇಳಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಎಫ್‌ಪಿ ವರಿಯ ಪ್ರಕಾರ, ಒತ್ತೆಯಾಳುಗಳನ್ನು ರಕ್ಷಣೆ ಮಾಡಲು ಯಾವುದೇ ಕಾರ್ಯಾಚರಣೆ ಮಾಡಿದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ. ಜಾಫರ್ ಎಕ್ಸ್‌ಪ್ರೆಸ್, ಒಂಬತ್ತು ಬೋಗಿಗಳಲ್ಲಿ 400 ಪ್ರಯಾಣಿಕರಿದ್ದಾರೆ, ಪಾಕಿಸ್ತಾನದ ನೃಋತ್ಯ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದರಿಂದ ಖೈಬರ್ ಪಖ್ತುನ್ಖವಾದ ಪೇಶಾವರಿಗೆ ಸಾಗುತ್ತಿದ್ದ ರೈಲಿನೆ ಮೇಲೆ ಉಗ್ರರು ಗುಂಡು ಹಾರಿಸಿ ದಾಳಿ ಮಾಡಿದ್ದಾರೆ.

ರೈಲಿನಲ್ಲಿದ್ದ 400ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಉಗ್ರಗಾಮಿಗಳು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಕ್ವೆಟ್ಟಾದ ಹಿರಿಯ ರೈಲ್ವೆ ಸರ್ಕಾರಿ ಅಧಿಕಾರಿ ಮುಹಮ್ಮದ್ ಕಾಶಿಫ್ ಎಎಫ್‌ಪಿಗೆ ತಿಳಿಸಿದ್ದಾರೆ. ಪ್ರಯಾಣಿಕರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದಾರೆ.
ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ದಾಳಿಯನ್ನು ಖಂಡಿಸಿದ್ದು, ಮುಗ್ಧ ಪ್ರಯಾಣಿಕರ ಮೇಲೆ ಗುಂಡು ಹಾರಿಸುವ ಮೃಗಗಳಿಗೆ ಸರ್ಕಾರ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿದ್ದ ಸೈನಿಕರು
ಉಗ್ರರು ರೈಲನ್ನು ಅಪಹರಿಸಿದ್ದು ಸೈನಿಕರನ್ನು ಸೇರಿಸಿ 180 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ. ಪಾಕಿಸ್ತಾನದಿಂದ ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಹೋರಾಡುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ), ರೈಲನ್ನು ಅಪಹರಿಸಿದ್ದು ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ ಎಂದು ಹೇಳಿದೆ. ಈಗಾಗಲೇ ಹಲವು ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಬಿಎಲ್‌ಇ ತಿಳಿಸಿದೆ. ಬಂಧಿಸಿರುವ ಪ್ರತ್ಯೇಕ ಬಲೂಚಿಸ್ತಾನ ಹೋರಾಟಗಾರರನ್ನು ಮತ್ತು ಕಣ್ಮರೆಯಾಗಿರುವ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸರ್ಕಾರಕ್ಕೆ ಬಿಎಲ್‌ಇ 48 ಗಂಟೆಗಳ ಸಮಯ ನೀಡಿದೆ.
ಒಭತ್ತು ಬೋಗಿಗಳಲ್ಲಿ 450ಕ್ಕೂ ಹೆಚ್ಚು ಪ್ರಯಾಣಿಕರಿದ್ದರ ಆದರೆ ಬಳಿಕ ಪಾಕಿಸ್ತಾನಿ ಪಡೆಗಳು ಒತ್ತೆಯಾಳುಗಳಾಗಿದ್ದ 80 ರೈಲು ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದಾರೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಭದ್ರತಾ ಪಡೆಗಳು 43 ಪುರುಷರು, 26 ಮಹಿಳೆಯರು ಮತ್ತು 11 ಮಕ್ಕಳು ಸೇರಿದಂತೆ 80 ಒತ್ತೆಯಾಳುಗಳನ್ನು ಭಯೋತ್ಪಾದಕರಿಂದ ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ, ಉಳಿದ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪಾಕಿಸ್ತಾನಿ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದರೆ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಬಿಎಲ್‌ಎ ವಕ್ತಾರ ಜೀಯಾಂಡ್ ಬಲೋಚ್ ಎಚ್ಚರಿಕೆ ನೀಡಿದ್ದಾರೆ. ಬಿಎಲ್‌ಎ ಯೋಧರು ರೈಲ್ವೆ ಹಳಿಗಳನ್ನು ಸ್ಫೋಟಿಸಿ ಸುರಂಗದೊಳಗೆ ರೈಲನ್ನು ನಿಲ್ಲುವಂತೆ ಮಾಡಿದ್ದು, ಬಳಿಕ ರೈಲಿಗೆ ಹತ್ತಿದ್ದಾರೆ.












Click it and Unblock the Notifications