Pakistan Train Hijack: ಪಾಕಿಸ್ತಾನದಲ್ಲಿ ಭಯಾನಕ ರೈಲು ಹೈಜಾಕ್: 16 ಉಗ್ರರು ಮಟಾಷ್!

Pakistan Train Hijack: ಪಾಕಿಸ್ತಾನದಲ್ಲಿ ಸಿನಿಮೀಯ ರೀತಿಯಲ್ಲಿ ರೈಲೊಂದನ್ನು ಉಗ್ರರು ವಶಪಡಿಸಿಕೊಂಡು ಅದರಲ್ಲಿದ್ದ ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಇಲ್ಲಿನ ಸೇನೆಯ ರೋಚಕ ಕಾರ್ಯಾಚರಣೆಯ ನಂತರ 16 ಜನ ಉಗ್ರರನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ 450ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಸಿನಿಮೀಯ ರೀತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನೂರಾರು ಜನರನ್ನು ಉಗ್ರರಿಂದ ರಕ್ಷಣೆ ಮಾಡಲಾಗಿದೆ. ಆದರೆ ಈ ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾದಲ್ಲಿ ಚಾಂಪಿಯನ್ಸ್‌ ಟ್ರೋಫಿ ಮುಕ್ತಾಯವಾಗುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ. ಈಗ ಭಾರತ ಅಲ್ಲಿಗೆ ಹೋಗದೆ ಇರುವುದು ಒಳ್ಳೆಯದೇ ಆಯಿತು ಎಂದು ಅಭಿಪ್ರಾಯಪಡಲಾಗುತ್ತಿದೆ.

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮಂಗಳವಾರ ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ವಶಪಡಿಸಿಕೊಂಡಿತ್ತು. ಪ್ರಯಾಣಿಕರು ಮತ್ತು ಸೈನಿಕರು ಸೇರಿದಂತೆ ಬರೋಬ್ಬರಿ 180ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿತ್ತು. ಇನ್ನು ಈ ರೈಲಿನಲ್ಲಿ ಬರೋಬ್ಬರಿ 450 ಜನ ಪ್ರಯಾಣಿಕರು ಇದ್ದರು. ಇಷ್ಟು ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಾತ್ರಿ ಕಳೆದಿದ್ದಾರೆ. ಮಂಗಳವಾರ ಪೂರ್ತಿ ಈ ಕಾರ್ಯಾಚರಣೆ ನಡೆದಿದೆ. ಇನ್ನು ಈ ದಾಳಿಯಲ್ಲಿ ಎಷ್ಟು ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಹಾಗೂ ಎಷ್ಟು ಜನರಿಗೆ ಗಾಯಗಳಾಗಿವೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

Pakistan Train Hijack Cinematic Train Hijack in Pakistan 16 Terrorists killed

ಪಾಕಿಸ್ತಾನದ ಕ್ವೆಟ್ಟಾ ಪ್ರದೇಶದಿಂದ ಪೇಶಾವರಕ್ಕೆ ಜಾಫರ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿತ್ತು. ಏಕಾಏಕಿ ರೈಲಿನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ರೈಲಿನ ಮೇಲೆ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಬಂಡುಕೋರರು ದಾಳಿ ಮಾಡಿದ್ದರು. 450 ಜನರಿಗೂ ಜೀವ ಭಯ ಎದುರಾಗಿತ್ತು. ಕೆಲವು ಗಂಟೆಗಳ ನಂತರ ಉಗ್ರರು ಸಾರ್ವಜನಿಕರನ್ನು ಬಿಡುಗಡೆ ಮಾಡಿದ್ದರು. ಆದರೆ, ಇಲ್ಲಿನ ಭದ್ರತಾ ಸಿಬ್ಬಂದಿಯನ್ನು ಟಾರ್ಗೆಟ್‌ ಮಾಡಿಕೊಂಡರು. 182 ಭದ್ರತಾ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿತ್ತು.

ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದ ನಂತರ 15 ಜನ ಮಕ್ಕಳು, 58 ಪುರುಷರು ಹಾಗೂ 31 ಮಹಿಳೆಯರು ಸೇರಿದಂತೆ ಒಟ್ಟು 104 ಒತ್ತೆಯಾಳುಗಳನ್ನು ರಕ್ಷಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ತೀವ್ರ ಗುಂಡಿನ ಚಕಮಕಿ: ಉಗ್ರರು / ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಆರ್‌) ರೈಲು ಹೈಜಾಕ್‌ ಮಾಡಿದ್ದರ ಹಿಂದಿನ ಉದ್ದೇಶ ಪ್ರತ್ಯೇಕ ಬಲೂಚಿಸ್ತಾನ್. ಹೌದು ಪಾಕಿಸ್ತಾನದಿಂದ ಪ್ರತ್ಯೇಕವಾಗಬೇಕು ಎಂದು ಇಲ್ಲಿನ ಬಲೂಚ್ ಲಿಬರೇಶನ್ ಆರ್ಮಿಯು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಇದೀಗ ಇದರ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ರೈಲುಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಬಾಂಬ್‌ ದಾಳಿಗಳನ್ನು ನಡೆಸುವ ಹಂತಕ್ಕೆ ಈ ಬಂಡುಕೋರರು ತೀವ್ರವಾಗಿದ್ದಾರೆ.

ಇನ್ನು ಈ ರೈಲು ಕಾರ್ಯಾಚರಣೆಯು ತೀವ್ರ ರೋಚಕವಾಗಿತ್ತು. ರೈಲಿನ ಸುತ್ತಲು ಜಮಾಯಿಸಿದ ಸೇನೆಯು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದೆ. ಉಗ್ರರು ಹಾಗೂ ಸೇನೆಯ ನಡುವೆ ನಿರಂತರ ಗುಂಡಿನ ಕಾಳಗವೇ ನಡೆದ ಮೇಲೆ ಎಲ್ಲಾ ಉಗ್ರರನ್ನು ಸೇನೆ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+