ಭಾರತದ 100 ಮೀನುಗಾರರನ್ನು ಬಿಡುಗಡೆ ಮಾಡಲಿದೆ ಪಾಕಿಸ್ತಾನ

ಪಾಕಿಸ್ತಾನವು ಭಾರತದ 100 ಮೀನುಗಾರರನ್ನು ಸೋಮವಾರ ಬಿಡುಗಡೆ ಮಾಡಲಿದೆ ಎಂದು ಎರಡೂ ದೇಶಗಳ ರಾಜತಾಂತ್ರಿಕ ಮೂಲಗಳು ಖಚಿತಪಡಿಸಿವೆ. ಪಾಕಿಸ್ತಾನಿ ಅಧಿಕಾರಿಗಳು ಈ ಬಗ್ಗೆ ಖಚಿತ ಪಡಿಸಿದ್ದು, 100 ಮೀನುಗಾರರನ್ನು ಏಪ್ರಿಲ್ ಏಳನೇ ತಾರೀಕು ಅಲ್ಲಿನ ಜೈಲುಗಳಿಂದ ಬಿಡುಗಡೆ ಮಾಡಲಿದ್ದು, ವಾಘಾ ಗಡಿ ಮೂಲಕ ಮರು ದಿನ ಭಾರತಕ್ಕೆ ಹಸ್ತಾಂತರ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಜೈಲುಗಳಲ್ಲಿ ಇರುವ ಮೂನ್ನೂರಾ ಎಂಬತ್ತೈದು ಭಾರತೀಯ ಮೀನುಗಾರರು ಹಾಗೂ ಹತ್ತು ನಾಗರಿಕರನ್ನು ಬಿಡುಗಡೆ ಮಾಡುವಂತೆ ನವದೆಹಲಿಯಲ್ಲಿ ಇರುವ ಪಾಕಿಸ್ತಾನ ಹೈಕಮಿಷನ್ ಗೆ ಭಾರತ ವಿಶೇಷ ಮನವಿ ಸಲ್ಲಿಸಿತ್ತು. ಮೂಲಗಳ ಪ್ರಕಾರ, ಒಟ್ಟು 360 ಕೈದಿಗಳನ್ನು ಬಿಡುಗಡೆ ಮಾಡಲು ಪಾಕ್ ಯೋಜನೆ ರೂಪಿಸಿದೆ. ಅದರಲ್ಲಿ 5 ನಾಗರಿಕರು ಕೂಡ ಒಳಗೊಂಡಿದ್ದಾರೆ.

Pakistan to release 100 Indian fishermen next week

ವಾರ ವಾರವು 100ರ ಸಂಖ್ಯೆಯಂತೆ ಬಿಡುಗಡೆ ಮಾಡಲು ಚಿಂತನೆ ನಡೆದಿದ್ದು, ಕೊನೆ ತಂಡವು ಏಪ್ರಿಲ್ 29ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ಜಲ ಗಡಿಯನ್ನು ಉಲ್ಲಂಘಿಸಿ, ಪಾಕಿಸ್ತಾನ ಪ್ರವೇಶಿಸಿ ಬಂಧನಕ್ಕೊಳಗಾದ ಮೀನುಗಾರರನ್ನು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಎರಡನೇ ಬಾರಿಗೆ. 2010ರಲ್ಲಿ 442 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+