ಪಾಕ್ ನಲ್ಲಿ ಮಸೂದ್ ಅಜರ್ ಸಹೋದರ ಸೇರಿ 44 ಉಗ್ರರು ವಶಕ್ಕೆ

Recommended Video

      Surgical Strike 2: ಪಾಕ್ ನಲ್ಲಿ ಮಸೂದ್ ಅಜರ್ ಸಹೋದರ ಸೇರಿ 44 ಉಗ್ರರು ವಶಕ್ಕೆ | Oneindia Kannada

      ಇಸ್ಲಾಮಾಬಾದ್, ಮಾರ್ಚ್ 05 : ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ್ ಅಜರ್ ನ ಸಹೋದರ ಮಫ್ತಿ ಅಬ್ದುರ್ ರೌಫ್ ಸೇರಿದಂತೆ, ನಿಷೇಧಿತ ಉಗ್ರ ಸಂಘಟನೆಗೆ ಸೇರಿದ 44 ಜನರನ್ನು ಪಾಕಿಸ್ತಾನದಲ್ಲಿ ಮಂಗಳವಾರು ವಶಕ್ಕೆ ತೆಗೆದುಕೊಳ್ಳಲಾಗಿದೆ.

      ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲೇಬೇಕು ಎಂದು ಜಗತ್ತಿನಾದ್ಯಂತ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಿರುವ ಪಾಕಿಸ್ತಾನದ ಅಧಿಕಾರಿಗಳು, ಉಗ್ರ ಸಂಘಟನೆಗಳ ಮೇಲೆ ಮುಗಿಬಿದ್ದಿದೆ. ಈ ಸಂಗತಿಯನ್ನು ಆಂತರಿಕ ಖಾತೆ ರಾಜ್ಯ ಸಚಿವ ಶೆಹರಯಾರ್ ಖಾನ್ ಅಫ್ರೀದಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

      ಪಾಕಿಸ್ತಾನಕ್ಕೆ ಕಳೆದ ವಾರ ಭಾರತ ಸಲ್ಲಿಸಿದ್ದ ಉಗ್ರರ ಪಟ್ಟಿಯಲ್ಲಿ ಮಫ್ತಿ ಅಬ್ದುರ್ ರೌಫ್ ಮತ್ತು ಹಮ್ಮದ್ ಅಜರ್ ಅವರ ಹೆಸರುಗಳಿದ್ದವು. ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಜೈಷ್ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಮೇಲೆ ಭಾರತ ಉಗ್ರರ ಮೇಲೆ ಕ್ರಮ ಜರುಗಿಸಬೇಕೆಂದು ಪಾಕಿಸ್ತಾನವನ್ನು ಒತ್ತಾಯಿಸುತ್ತಲೇ ಇತ್ತು.

      Pakistan takes Masoods brother into preventive custody

      ನಾವು ಯಾವುದೇ ಒತ್ತಡಕ್ಕೆ ಒಳಗಾಗಿ ಈ ಕ್ರಮ ತೆಗೆದುಕೊಂಡಿಲ್ಲ ಎಂದಿರುವ ಅವರು, ಜೈಷ್-ಎ-ಮೊಹಮ್ಮದ್ ಸಂಘಟನೆ ಮಾತ್ರವಲ್ಲ ಎಲ್ಲ ಪಟ್ಟಿಯಲ್ಲಿರುವ ಉಗ್ರ ಸಂಘಟನೆಗಳ ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅಫ್ರೀದಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಎಲ್ಲ ಉಗ್ರ ಸಂಘಟನೆಗಳಿಗೆ ಸೇರಿದ ಆಸ್ತಿಯನ್ನೂ ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ.

      ಪಾಕಿಸ್ತಾನದಲ್ಲಿ ಲಂಗುಲಗಾಮಿಲ್ಲದೆ ಹಬ್ಬಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳ ಮೇಲೆ ಉಗ್ರ ಕ್ರಮ ಜರುಗಿಸಬೇಕೆಂದು ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಪಾಕಿಸ್ತಾನಕ್ಕೆ ಡೆಡ್ ಲೈನ್ ನೀಡಿದ ನಂತರ, ಉಗ್ರ ಸಂಘಟನೆಯ ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+