ಮತದಾನದ ದಿನ ಪಾಕಿಸ್ತಾನದಲ್ಲಿ ಸ್ಫೋಟ: 22 ಮಂದಿ ಬಲಿ

ಕ್ವೆಟ್ಟಾ, ಜುಲೈ 25: ಸಾರ್ವತ್ರಿಕ ಚುನಾವಣೆಯ ದಿನ(ಜು.25)ವೇ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಸ್ಫೋಟವೊಂದರಲ್ಲಿ 22 ಮಂದಿ ಬಲಿಯಾಗಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲಿಸ್ ವಾಹನವೊಂದರ ಬಳಿಯಲ್ಲೇ ಸ್ಫೋಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಇನ್ನೊಂದು ಸ್ಫೋಟ ಸಿಂದ್ ಪ್ರಾಂತ್ಯದ ಲರ್ಕಾನಾ ನಗರದಲ್ಲಿ ಸಂಭವಿಸಿದೆ.

ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆಯಾದರೂ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಹಿನ್ನೆಲೆಯಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.

Pakistan polls: Many killed in Quetta blast

ಈ ಸ್ಫೋಟ ಘತನೆಯನ್ನು ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಗಳಾದ ಪಿಟಿಐ ಮುಖಂಡ ಇಮ್ರಾನ್ ಖಾನ್ ಮತ್ತು ಪಿಎಂಎಲ್ -ಎನ್ ಮುಖಂಡ ಶಹ್ಬಾಜ್ ಶರಿಫ್ ಖಂಡಿಸಿದ್ದಾರೆ.

"ಇದು ನಿಜಕ್ಕೂ ಖಂಡನೀಯ ಉಗ್ರ ದಾಳಿ. ಪಾಕಿಸ್ತಾನದ ಶತ್ರುಗಳು ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಹಾಳುಗೆಡವಲು ನೋಡುತ್ತಿದ್ದಾರೆ. ಮುಗ್ಧ ಜೀವಗಳು ಬಲಿಯಾಗಿದ್ದು, ದುಃಖದ ಸಂಗತಿ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಮತದಾನ ಮಾಡುವ ಮೂಲಕ ಭಯೋತ್ಪದಾಕರನ್ನು ಸೋಲಿಸಬೇಕು" ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+