ಪಾಕಿಸ್ತಾನದ ಆರ್ಥಿಕತೆ ಧೂಳ್.. ಧೂಳ್.. ಶುರುವಾಯ್ತು ಕಿತ್ತಾಟ!

ಇಸ್ಲಾಮಾಬಾದ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಿಯಾಜಿ ವಿರುದ್ಧ ಪಾಕ್ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಆರ್ಥಿಕತೆ ಬೀದಿಗೆ ಬೀಳಲು ಇಮ್ರಾನ್ ನಿರ್ಧಾರಗಳೇ ಕಾರಣ. ಇದೇ ಕಾರಣಕ್ಕೆ ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆ ಕೇಳಿ ಇಮ್ರಾನ್ ಖಾನ್ ಸಿಡಿದೆದ್ದಿದ್ದಾರೆ.

ಪಾಕಿಸ್ತಾನದಲ್ಲಿ ಹಾಲಿ ಪ್ರಧಾನಿ ಹಾಗೂ ಮಾಜಿ ಪ್ರಧಾನಿ ನಡುವೆ ಕಚ್ಚಾಟ ಜೋರಾಗಿದೆ. ಪಾಕಿಸ್ತಾನದ ರಾಜಕಾರಣಿಗಳ ಈ ಬೀದಿ ಜಗಳವನ್ನ ಇಡೀ ಜಗತ್ತೇ ನೋಡುತ್ತಿದೆ. ಅತ್ತ ಪಾಕಿಸ್ತಾನ ಮಿಲಿಟರಿ ಕೂಡ ಹೇಗಾದರೂ ಮಾಡಿ ಇಮ್ರಾನ್ ಖಾನ್‌ನ ಜೈಲಿಗೆ ಕಳುಹಿಸಬೇಕು ಅಂತಾ ಪ್ರಯತ್ನಿಸುತ್ತಿದೆ. ಅದೇ ರೀತಿ ಪಾಕಿಸ್ತಾನ ಸರ್ಕಾರ ಕೂಡ ಇಮ್ರಾನ್ ಖಾನ್ ಮತ್ತೊಂದು ಬಾರಿ ಅರೆಸ್ಟ್ ಆಗಬೇಕು ಅಂತಾ ಕಾಯುತ್ತಿದೆ. ಈ ಹೊತ್ತಲ್ಲಿ ಇಮ್ರಾನ್ ಖಾನ್ ವಿರುದ್ಧ ಸ್ಫೋಟಕ ಆರೋಪ ಕೇಳಿಬಂದಿದೆ (Imran Khan Arrest).

Pakistan PM Shehbaz Sharif alleged that Imran Khan is the reason for Pak economic crisis

ಬೀದಿಗೆ ಬಿದ್ದ ಪಾಕ್.. ಗೋದಿ ಹಿಟ್ಟಿಗೂ ಪರದಾಟ!

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿದೆ ಅಂದರೆ, ಅಲ್ಲಿನ ಜನ ಕೇವಲ ಗೋದಿ ಹಿಟ್ಟಿಗೂ ಬೀದಿಗೆ ಬಂದು ಹೋರಾಡುವ ಪರಿಸ್ಥಿತಿ ಇದೆ. ಆದರೂ ಅಲ್ಲಿನ ರಾಜಕಾರಣಿಗಳು ಬುದ್ಧಿ ಕಲಿಯದೆ ತಮ್ಮ ತಮ್ಮ ನಡುವೆ ಫೈಟ್ ಮಾಡುತ್ತಾ, ಪಾಕಿಸ್ತಾನವನ್ನ ಇನ್ನಷ್ಟು ಮುಳುಗಿಸುತ್ತಿದ್ದಾರೆ. ಇದೀಗ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಇದೇ ರೀತಿ ಆರೋಪ ಮಾಡಿದ್ದು, ಪಾಕಿಸ್ತಾನ ಬೀದಿಗೆ ಬೀಳಲು ಇಮ್ರಾನ್ ಖಾನ್ ಕಾರಣ ಎಂದಿದ್ದಾರೆ. ಈ ಮೂಲಕ ಖಾನ್ ಬಂಧನಕ್ಕೆ ಮತ್ತೊಂದು ದಾರಿ ಹುಡುಕಿರುವ ಸುಳಿವು ಸಿಕ್ಕಿದೆ.

ಸರಿಯಾಗಿ ಉತ್ತರ ಕೊಟ್ಟ ಇಮ್ರಾನ್ ಖಾನ್!

ಆರೋಪಕ್ಕೆ ಇಮ್ರಾನ್ ಖಾನ್ ಸರಿಯಾಗಿ ಉತ್ತರ ನೀಡಿದ್ದಾರೆ. ಪಾಕಿಸ್ತಾನದ ರೂಪಾಯಿ ಮತ್ತು ಅಮೆರಿಕ ಡಾಲರ್ ನಡುವಿನ ವ್ಯತ್ಯಾಸವನ್ನ ಉದಾಹರಣೆಯಾಗಿ ನೀಡಿ, ಕಾಳ ಸಂತೆಯಲ್ಲಿ ರೂಪಾಯಿ ವಿನಿಮಯ ನಡೆಯುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಅಮೆರಿಕದ 1 ಡಾಲರ್‌ಗೆ ಪಾಕಿಸ್ತಾನದ 315 ರೂ. ನೀಡಬೇಕಿದೆ. ಅದೇ ರೀತಿ ಕದ್ದುಮುಚ್ಚಿ ಕರೆನ್ಸಿ ವಿನಿಮಯ ಮಾಡಿದರೆ 1 ಡಾಲರ್‌ಗೆ ಪಾಕಿಸ್ತಾನದ 320 ರೂಪಾಯಿ ನೀಡಬೇಕು. ಇದನ್ನ ಮೊದಲು ಸರಿಮಾಡಿ, ಇಲ್ಲ ಪಾಕಿಸ್ತಾನದ ಆರ್ಥಿಕತೆ ಬೀದಿಗೆ ಬೀಳುತ್ತೆ ಎಂದಿದ್ದಾರೆ ಇಮ್ರಾನ್ ಖಾನ್.

ಇಮ್ರಾನ್ ಖಾನ್ ವಿರುದ್ಧ ಮಸಲತ್ತು?

ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಕೂಡ ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈಗ ನೋಡಿದರೆ ಪಾಕಿಸ್ತಾನದ ಆರ್ಥಿಕತೆ ಕುಸಿದು ಬೀಳಲು ಇಮ್ರಾನ್ ಖಾನ್ ನೇರ ಕಾರಣ ಎಂಬ ಗಂಭೀರ ಆರೋಪ ಮಾಡಲಾಗಿದೆ.

Pakistan PM Shehbaz Sharif alleged that Imran Khan is the reason for Pak economic crisis

5 ಸಾವಿರ ಕೋಟಿ ರೂ. ನುಂಗಿದ ಇಮ್ರಾನ್?

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದಾರೆ. ಆದ್ರೂ ಇದೇ ಪ್ರಕರಣ ಸಂಬಂಧ ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಹೀಗಾಗಿ ದೇಶ ಬಿಟ್ಟು ಈ ವ್ಯಕ್ತಿ ಓಡಿ ಹೋಗ್ತಾರೆ ಎಂದು ಆರೋಪಿಸಿ ಇಮ್ರಾನ್ ಖಾನ್ ಪಾಸ್ಪೋರ್ಟ್ ಲಾಕ್ ಮಾಡಲಾಗಿದೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+