ಕುಲಭೂಷಣ್ ಪ್ರಕರಣ: ಅಂತಾರಾಷ್ಟ್ರೀಯ ನ್ಯಾಯಪೀಠಕ್ಕೆ ಪಾಕ್ ಸಡ್ಡು

Posted By:
Subscribe to Oneindia Kannada

ಇಸ್ಲಾಮಾಬಾದ್, ಮೇ 20: ಕುಲಭೂಷಣ್ ಜಾಧವ್ ಬಗ್ಗೆ ಮಧ್ಯಂತರ ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನ್ಯಾಯಪೀಠದಲ್ಲಿದ್ದ 12 ನ್ಯಾಯಮೂರ್ತಿಗಳಲ್ಲೊಬ್ಬರಾಗಿದ್ದ ಭಾರತೀಯ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮೇಲೆ ಪಾಕಿಸ್ತಾನ ಸರ್ಕಾರದ ಕಣ್ಣು ಬಿದ್ದಿದೆ. ಹಾಗಾಗಿ, ನ್ಯಾಯಪೀಠದಲ್ಲಿ ತನ್ನ ಬಗ್ಗೆ ಸಹಾನುಭೂತಿಯಿರುವ ನ್ಯಾಯಮೂರ್ತಿಯೊಬ್ಬರನ್ನು ಕೂರಿಸಲು ಅದು ನಿರ್ಧರಿಸಿದೆ.

ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಕಳೆದ ವರ್ಷ ಬಂಧಿತರಾಗಿರುವ, ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಇತ್ತೀಚೆಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.[ಕುಲಭೂಷಣ್, ಕಸಬ್ ಗಿಂತ ದೊಡ್ಡ ಉಗ್ರ: ಮುಷರಫ್]

ಈ ಹಿನ್ನೆಲೆಯಲ್ಲಿ, ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಗುರುವಾರ (ಮೇ 18) ಈ ಪ್ರಕರಣದ ಮಧ್ಯಂತರ ತೀರ್ಪು ನೀಡಿದ ನ್ಯಾಯಾಲಯ, ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಆದರೆ, ಈ ತೀರ್ಪು ಪಾಕಿಸ್ತಾನಕ್ಕೆ ಅಸಮಾಧಾನ ತಂದಿದೆ. ಹಾಗಾಗಿ, ಅದು ಐಸಿಜೆ ನ್ಯಾಯಪೀಠದಲ್ಲಿರುವ ನ್ಯಾಯಾಧೀಶರ ಔಚಿತ್ಯವನ್ನೇ ತಡಕಾಡಲಾರಂಭಿಸಿದೆ. ಆಗ ಸಿಕ್ಕ ಹೆಸರೇ ನ್ಯಾ. ದಲ್ವೀರ್ ಸಿಂಗ್ ಭಂಡಾರಿ.[ತಮ್ಮ ಕಾಲೆಳೆದ ಪಾಕಿಸ್ತಾನ ಪ್ರಜೆಗೆ ಸೆಹ್ವಾಗ್ ದಿಟ್ಟ ಉತ್ತರ]

ಕುಲಭೂಷಣ್ ನಲ್ಲಿ ನಿಯಮಗಳ ಪಾಲನೆಯಾಗಿಲ್ಲ?

ಕುಲಭೂಷಣ್ ನಲ್ಲಿ ನಿಯಮಗಳ ಪಾಲನೆಯಾಗಿಲ್ಲ?

ಐಸಿಜೆನಲ್ಲಿ ವಿಚಾರಣೆಗೊಳಪಡುವ ಪ್ರಕರಣಗಳಲ್ಲಿ ಆಯಾ ದೇಶದ ಮೂಲದ ನ್ಯಾಯಾಧೀಶರು, ನ್ಯಾಯಪೀಠದಲ್ಲಿರಬಾರದು ಎಂದು ಐಸಿಜೆ ನಿಯಮಗಳು ಹೇಳುತ್ತವೆ. ಆದರೆ, ಕುಲಭೂಷಣ್ ಜಾಧವ್ ಕೇಸ್ ನಲ್ಲಿ ಹಾಗಾಗಿಲ್ಲ.[ಅಂತಾರಾಷ್ಟ್ರೀಯ ಕೋರ್ಟ್ ತೀರ್ಪಿಗೆ ಪಾಕಿಸ್ತಾನ ಅಸಮಾಧಾನ]

ಪಾಕಿಸ್ತಾನದ ಹೊಸ ರಗಳೆ

ಪಾಕಿಸ್ತಾನದ ಹೊಸ ರಗಳೆ

ಗುರುವಾರ (ಮೇ 18) ಮಧ್ಯಂತರ ತೀರ್ಪು ನೀಡಿದ 12 ನ್ಯಾಯಾಧೀಶರ ನ್ಯಾಯಪೀಠದಲ್ಲಿ ದಲ್ವೀರ್ ಭಂಡಾರಿ ಕೂಡ ಒಬ್ಬರಾಗಿದ್ದರು. ಅವರು ಭಾರತದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರು. ಹಾಗಾಗಿ, ಕುಲಭೂಷಣ್ ಪ್ರಕರಣದಲ್ಲಿ ತನ್ನ ವಾದಕ್ಕೆ ಮನ್ನಣೆ ಸಿಕ್ಕಿಲ್ಲ ಎಂಬುದು ಪಾಕಿಸ್ತಾನದ ವಾದ.

ಹೆಸರುಗಳ ತಡಕಾಟದಲ್ಲಿ ಪಾಕಿಸ್ತಾನ

ಹೆಸರುಗಳ ತಡಕಾಟದಲ್ಲಿ ಪಾಕಿಸ್ತಾನ

ಈ ಹಿನ್ನೆಲೆಯಲ್ಲಿ, 12 ನ್ಯಾಯಮೂರ್ತಿಗಳ ಆ ನ್ಯಾಯಪೀಠಕ್ಕೆ ತನ್ನ ಕಡೆಯಿಂದ ಒಬ್ಬ ನ್ಯಾಯಾಧೀಶರನ್ನು ನೇಮಿಸಲು ಪಾಕಿಸ್ತಾನ ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕಾಗಿ ಹಲವರ ಹೆಸರುಗಳನ್ನು ಅದು ಚರ್ಚೆಗೊಳಪಡಿಸಿದೆ. ಪಾಕಿಸ್ತಾನದವರೇ ನ್ಯಾಯಪೀಠದಲ್ಲಿರಬೇಕೆಂಬ ನಿಯಮವೇನಿಲ್ಲವಾದ್ದರಿಂದ, ಈ ಹಿಂದೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ಸಹಾನುಭೂತಿ ವ್ಯಕ್ತಪಡಿಸಿದ್ದ ನಿವೃತ್ತ ನ್ಯಾಯಾಧೀಶರುಗಳನ್ನೇ ನ್ಯಾಯಪೀಠಕ್ಕೆ ಹೆಸರಿಸಲು ಅದು ನಿರ್ಧರಿಸಿದೆ.

ಇವರಲ್ಲಿ ಯಾರು ಐಸಿಜೆಗೆ ಹೋಗೋದು?

ಇವರಲ್ಲಿ ಯಾರು ಐಸಿಜೆಗೆ ಹೋಗೋದು?

ಹಾಗಾಗಿ, ಜೋರ್ಡಾನ್ ನ ಮಾಜಿ ಪ್ರಧಾನಿ ಹಾಗೂ ಐಸಿಜೆನ ಮಾಜಿ ನ್ಯಾಯಮೂರ್ತಿ ಅವಾನ್ ಶವ್ಕಾತ್ ಅಲ್-ಖಸಾವ್ನೆ, ಜರ್ಮನಿಯ ಜ್ಯೂರಿಸ್ಟ್ ಹಾಗೂ ಐಸಿಜೆಯ ಮಾಜಿ ನ್ಯಾಯಾಧೀಶ ಬ್ರುನೋ ಸಿಮ್ಮಾ, ಪಾಕಿಸ್ತಾನದ ಕಾನೂನು ತಜ್ಞ ಅಹ್ಮದ್ ಬಿಲಾಲ್ ಅವರಲ್ಲೊಬ್ಬರನ್ನು ನ್ಯಾಯಪೀಠಕ್ಕೆ ನಿರ್ದೇಶನ ಮಾಡಲು ಪಾಕಿಸ್ತಾನ ಆಲೋಚಿಸಿದೆ.

ಹಿಂದೆ ಅವರು ಪಾಕಿಸ್ತಾನಕ್ಕೆ ನೆರವಾಗಿದ್ದಾರೆ!

ಹಿಂದೆ ಅವರು ಪಾಕಿಸ್ತಾನಕ್ಕೆ ನೆರವಾಗಿದ್ದಾರೆ!

ಈ ಹೆಸರುಗಳಲ್ಲಿ ಬ್ರುನೋ ಸಿಮ್ಮಾ ಅವರು, ಈ ಹಿಂದೆ ಐಸಿಜೆಯಲ್ಲಿ ನಡೆದಿದ್ದ ಕಿಶನ್ ಗಂಗಾ ಪ್ರಕರಣದಲ್ಲಿ ಪಾಕಿಸ್ತಾನದ ಪರವಾಗಿ ಐಸಿಜೆಯಲ್ಲಿ ವಾದ ಮಂಡಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The counter the presence of an Indian judge on the ICJ panel hearing the Kulbhushan Jadhav case, Pakistan is likely to appoint an ad-hoc judge. Dalveer Bhandari, a former judge of the Supreme Court of India is part of the 12 judge panel in the International Court of Justice.
Please Wait while comments are loading...