ಕುಲಭೂಷಣ್, ಕಸಬ್ ಗಿಂತ ದೊಡ್ಡ ಉಗ್ರ: ಮುಷರಫ್

Posted By:
Subscribe to Oneindia Kannada

ಇಸ್ಲಾಮಾಬಾದ್, ಮೇ 20: ಪಾಕಿಸ್ತಾನದಲ್ಲಿ ಸೆರೆಸಿಕ್ಕಿರುವ ಭಾರತೀಯ ಗೂಢಚಾರಿ ಕುಲಭೂಷಣ್ ಜಾಧವ್ , ಮುಂಬೈ ದಾಳಿಕೋರ ಕಸಬ್ ಗಿಂತಲೂ ದೊಡ್ಡ ಉಗ್ರ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.

ಪಾಕಿಸ್ತಾನದ ಎಆರ್ ವೈ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು, ''ಉಗ್ರ ಕಸಬ್ ಕೇವಲ ಒಂದು ದಾಳವಷ್ಟೇ. ಆದರೆ, ಕುಲಭೂಷಣ್ ಜಾಧವ್ ಆತನಿಗಿಂತಲೂ ಅನಾಹುತಕಾರಿ'' ಎಂದಿದ್ದಾರೆ.[ಕುಲಭೂಷಣ್ ಪ್ರಕರಣ: ಅಂತಾರಾಷ್ಟ್ರೀಯ ನ್ಯಾಯಪೀಠಕ್ಕೆ ಪಾಕ್ ಸಡ್ಡು]

Musharaff discribes Kulbhushan is more dangerous than Kasab

ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿರುವ ಅವರು, ''ಮುಂಬೈ ಮೇಲೆ ದಾಳಿ ನಡಸಿದ್ದ 10 ಉಗ್ರರಲ್ಲಿ ಕಸಬ್ ಕೂಡಾ ಒಬ್ಬ. ಆ ದಾಳಿಯಲ್ಲಿ ಸುಮಾರು 122 ಜನರು ಅಸುನೀಗಿದ್ದರು. ಕಸಬ್ ನೇರವಾಗಿ ಜನರನ್ನು ಕೊಲ್ಲುತ್ತಾ ಮುಂದೆ ಸಾಗಿದ್ದ. ಆದರೆ, ಕುಲಭೂಷಣ್ ಜಾಧವ್ ಪಾಕಿಸ್ತಾದನಲ್ಲಿದ್ದುಕೊಂಡು ಅದೆಷ್ಟು ಜನರನ್ನು ಕೊಂದಿದ್ದಾನೋ ಗೊತ್ತಿಲ್ಲ. ಹಾಗಾಗಿ, ಕಸಬ್ ಗಿಂತ ಗೂಢಚಾರಿಯಾಗಿರುವ ಕುಲಭೂಷಣ್ ಜಾಧವ್ ಹೆಚ್ಚು ಅಪಾಯಕಾರಿ'' ಎಂದು ಹೇಳಿದ್ದಾರೆ.[ತಮ್ಮ ಕಾಲೆಳೆದ ಪಾಕಿಸ್ತಾನ ಪ್ರಜೆಗೆ ಸೆಹ್ವಾಗ್ ದಿಟ್ಟ ಉತ್ತರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to former Pakistani military dictator Gen. Parvez Musharaff, Kulbhushan Jadhav is a bigger terrorist than Ajmal Kasab. Musharraf told to a media, one of ten Pakistanis who carried out the Mumbai terror attacks in which 164 people were killed, was "just a pawn", while Jadhav, is a spy, "may have killed" people.
Please Wait while comments are loading...