ತಮ್ಮ ಕಾಲೆಳೆದ ಪಾಕಿಸ್ತಾನ ಪ್ರಜೆಗೆ ಸೆಹ್ವಾಗ್ ದಿಟ್ಟ ಉತ್ತರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಮೇ 19: ಭಾರತದ ಗೂಢಚಾರಿ ಆರೋಪ ಹೊತ್ತಿರುವ ಕುಲಭೂಷಣ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ತಮ್ಮ ಕಾಲೆಳೆಯಲು ಯತ್ನಿಸಿದ್ದ ಪಾಕಿಸ್ತಾನದ ಪ್ರಜೆಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಿಟ್ಟ ಉತ್ತರ ನೀಡಿದ್ದಾರೆ.

ಟ್ವಿಟರ್ ನಲ್ಲಿ ಯಾವಾಗಲೂ ಇಂಥ ಧಮಾಕಾ ಮಾಡುತ್ತಾ ಗಮನ ಸೆಳೆಯುವ ಸೆಹ್ವಾಗ್, ಅವರು ಈ ಬಾರಿ ಪಾಕ್ ಪ್ರಜೆಗೆ ನೀಡಿರುವ ಉತ್ತರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅದೇಕೆ ಅಂತೀರಾ? ಮುಂದೆ ಓದಿ.

ಟ್ವಿಟರ್ ನಲ್ಲಿ ಮೆಚ್ಚುಗೆ

ಟ್ವಿಟರ್ ನಲ್ಲಿ ಮೆಚ್ಚುಗೆ

ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸುತ್ತಿದ್ದರೆಂಬ ಆರೋಪದ ಮೇರೆಗೆ ಭಾರತೀಯ ಕುಲಭೂಷಣ್ ಯಾದವ್ ಅವರಿಗೆ ಗಲ್ಲು ಶಿಕ್ಷೆ ನೀಡಿದ್ದ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತನ್ನ ಮಧ್ಯಂತರ ಆದೇಶದಲ್ಲಿ ತಡೆ ನೀಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಕ್ರಮವನ್ನು ಸೆಹ್ವಾಗ್ ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕೋರ್ಟ್ ತೀರ್ಪಿನಿಂದ ಖುಷ್

ಕೋರ್ಟ್ ತೀರ್ಪಿನಿಂದ ಖುಷ್

ಸೆಹ್ವಾಗ್ ಅವರಂತೆಯೇ, ಭಾರತದ ಮತ್ತೊಬ್ಬ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡಾ ನ್ಯಾಯಾಲಯದ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸೆಹ್ವಾಗ್ ಗೆ ಟಾಂಗ್

ಸೆಹ್ವಾಗ್ ಗೆ ಟಾಂಗ್

ಇದಕ್ಕೆ ಪಾಕಿಸ್ತಾನದ ಫರ್ಹಾನ್ ಜಹೂರ್ ಎಂಬಾತ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ. ನೇರವಾಗಿ ಸೆಹ್ವಾಗ್ ಅವರಿಗೆ ಟ್ವೀಟ್ ಮಾಡಿದ್ದ ಆತ, ''ನಿಮಗೆ ತಲೆ ಕೆಟ್ಟಿದೆಯಾ? ಇದು ಅಂತಿಮ ತೀರ್ಪಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯ ತನ್ನಿಷ್ಟದಂತೆ ಯಾವುದಕ್ಕಾದರೂ ತಡೆ ನೀಡಬಹುದು. ಆದರೆ, ನಾವು (ಪಾಕಿಸ್ತಾನ ಸರ್ಕಾರ) ಮಾತ್ರ ಆತನನ್ನು (ಕುಲಭೂಷಣ್) ಗಲ್ಲಿಗೇರಿಸದೇ ಬಿಡೆವು. ನೀವು (ಭಾರತ ಸರ್ಕಾರ) ಅಂತಾರಾಷ್ಟ್ರೀ ಮಾತ್ರವಲ್ಲ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿ ಅಪೀಲು ಸಲ್ಲಿಸಬಹುದು'' ಎಂದು ಜರಿದಿದ್ದ.

ಭರ್ಜರಿ ಟಾಂಗ್ ನೀಡಿದ ಮಾಜಿ ಕ್ರಿಕೆಟಿಗ

ಭರ್ಜರಿ ಟಾಂಗ್ ನೀಡಿದ ಮಾಜಿ ಕ್ರಿಕೆಟಿಗ

ಇದು ಸೆಹ್ವಾಗ್ ಅವರನ್ನು ಸಹಜವಾಗಿ ಕೆರಳಿಸಿದೆ. ಮೊದಲೇ ಸಿಡಿಮದ್ದಿನಂಥ ಉತ್ತರಗಳನ್ನು ಕೊಡುವುದರಲ್ಲಿ ನಿಸ್ಸೀಮರಾಗಿರುವ ಸೆಹ್ವಾಗ್, ''ನೀವು (ಪಾಕಿಸ್ತಾನೀಯರಿಗೆ) ಎಲ್ಲೋ ಕನಸು ಕಾಣುತ್ತಿರಬೇಕು. ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತದ ವಿರುದ್ಧ ಗೆಲ್ಲುತ್ತೇವೆ ಅಂತ ಕನಸು ಕಾಣುತ್ತೀರಲ್ಲಾ ಹಾಗೆ. ನೀವು ನಾಯಿಯನ್ನು ಸಾಕಿರಿ, ಬೆಕ್ಕನ್ನಾದರೂ ಸಾಕಿರಿ. ಆದರೆ, ತಪ್ಪು ಕಲ್ಪನೆಗಳನ್ನು ಮಾತ್ರ ಬೆಳೆಸಬೇಡಿ'' ಎಂದು ಹೇಳಿದರು.

ಸೆಹ್ವಾಗ್ ಉತ್ತರಕ್ಕೆ ಮೆಚ್ಚುಗೆ

ಸೆಹ್ವಾಗ್ ಉತ್ತರಕ್ಕೆ ಮೆಚ್ಚುಗೆ

ಟ್ವಿಟರ್ ನಲ್ಲಿ ಸೆಹ್ವಾಗ್ ಹೀಗೆ ಭರ್ಜರಿ ಸಿಕ್ಸರ್ ಬಾರಿಸಿರುವುದು ಹಲವರಲ್ಲಿ ನಗೆಯ ಬುಗ್ಗೆ ಉಕ್ಕಿಸಿದೆ. ಮಾಧ್ಯಮಗಳೂ ಅದನ್ನು ರಸವತ್ತಾಗಿ ಬಣ್ಣಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virender Sehwag on Thursday hailed the ruling of ICJ, which stayed Pakistan's execution on Kulbhushan Jadhav until it rules on the merit of the case. But, for this he recieved some vigourous reaction from a Pak citizen. But, asusual, Sehwag hits back with humour to make the other side silent.
Please Wait while comments are loading...