ಪಾಕಿಸ್ತಾನದಲ್ಲಿ ಸ್ಫೋಟ: ಇಬ್ಬರು ಸಾವು, 17 ಮಂದಿಗೆ ಗಾಯ

ಇಸ್ಲಮಾಬಾದ್, ಜೂನ್ 23: ಪಾಕಿಸ್ತಾನ ಲಾಹೋರ್‌ನ ಜೋಹಾರ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಾಕ್ ಮಾಧ್ಯಮಗಳ ವರದಿ ಪ್ರಕಾರ, ಲಾಹೋರ್‌ನಲ್ಲಿ ಇರುವ ಹಫೀಜ್ ಸಯ್ಯದ್ ನಿವಾಸದ ಬಳಿಯೇ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಇದು ಯಾವ ಸ್ವರೂಪದ ಸ್ಫೋಟ ಎಂಬುದನ್ನು ಪತ್ತೆ ಮಾಡಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

"ಲಾಹೋರ್‌ನ ಜೋಹಾರ್ ಬಳಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ," ಎಂದು ಪಾಕಿಸ್ತಾನದ ಎಆರ್ ವೈ ನ್ಯೂಸ್ ವರದಿ ಮಾಡಿದೆ.

Pakistan News: 2 Killed, 17 People Injured in Lahore’s Johar Town Explosion

ಪಾಕಿಸ್ತಾನದ ಮಾಧ್ಯಮಗಳ ವರದಿ:

ಪಾಕಿಸ್ತಾನದ ಮಾಧ್ಯಮಗಳ ವರದಿಗಳ ಪ್ರಕಾರ, ಸ್ಫೋಟದ ಶಬ್ದವು ತುಂಬಾ ಜೋರಾಗಿತ್ತು, ಅದು ದೂರದ ಪ್ರದೇಶಗಳಲ್ಲಿ ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ಹತ್ತಿರದ ಮನೆಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳು ಚೂರುಚೂರಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

"ಗ್ಯಾಸ್ ಪೈಪ್‌ಲೈನ್ ಸ್ಫೋಟಗೊಂಡಿದೆಯೆ ಅಥವಾ ಅದು ಸಿಲಿಂಡರ್ ಸ್ಫೋಟವಾಗಿದೆಯೇ ಎಂದು ಇಲ್ಲಿಯವರೆಗೂ ನಿರ್ಧರಿಸಲು ಸಾಧ್ಯವಾಗಲಿಲ್ಲ. ಈವರೆಗೂ ನಾಲ್ಕು ಜನರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಹೆಚ್ಚಿನ ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ "ಎಂದು ತುರ್ತು ರಕ್ಷಣಾ ತಂಡದ ವಕ್ತಾರರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+