Turkiye: ಪಾಕಿಸ್ತಾನ ನಮ್ಮ ಸಹೋದರ ರಾಷ್ಟ್ರ: ಒಳ್ಳೆ & ಕೆಟ್ಟ ಟೈಮ್‌ನಲ್ಲಿ ಜೊತೆಗಿರುತ್ತೇವೆ ಎಂದ ಟರ್ಕಿ!
Turkiye: ಭಾರತೀಯರ ಅಸಮಾಧಾನ ಹಾಗೂ ಆಕ್ರೋಶಗಳ ಹೊರತಾಗಿಯೂ ನಾವು ಮುಸ್ಲಿಂ ಸಹೋದರ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ನಮ್ಮ ಬೆಂಬಲವನ್ನು ಮುಂದುವರಿಸಲಿದ್ದೇವೆ ಎಂದು ಟರ್ಕಿ ಹೇಳಿದೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಒಳ್ಳೆಯ ಹಾಗೂ ಕೆಟ್ಟ ಎರಡೂ ಟೈಮ್‌ನಲ್ಲೂ ನಾವು ಪಾಕಿಸ್ತಾನದೊಂದಿಗೆ ನಿಲ್ಲಲಿದ್ದೇವೆ ಅಂತ ಹೇಳಿದ್ದಾರೆ. ಈ ಮೂಲಕ ಭಾರತದಿಂದ ಟರ್ಕಿ ದೇಶವು ಇನ್ನಷ್ಟು ದೂರ ಸರಿದಂತೆ ಆಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಎದುರಾಗಿದ್ದ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಮೂಲಕ ಟರ್ಕಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಇದೀಗ ಯಾವುದೇ ಬಾಯ್ಕಟ್ (ಬಹಿಷ್ಕಾರಗಳಿಗೆ) ನಾವು ತಲೆಕೆಸಿಕೊಳ್ಳುವುದಿಲ್ಲ ಎಂದು ಹೇಳಿದೆ.
ಭಾರತದಲ್ಲಿ ಟರ್ಕಿ ಹಾಗೂ ಅಜರ್‌ಬೈಜಾನ್ ವಿರುದ್ಧ ಆಕ್ರೋಶ ಹೆಚ್ಚಳವಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಈಚೆಗೆ ನಡೆದ ಭಾರೀ ಸಂಘರ್ಷದಲ್ಲಿ ಟರ್ಕಿ ದೇಶವು ಪಾಕಿಸ್ತಾನದ ಬೆಂಬಲಕ್ಕೆ ಬಂದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಭಾರತದಾದ್ಯಂತ ಟರ್ಕಿ ಮತ್ತು ಅಜರ್‌ಬೈಜಾನ್ ಬಾಯ್ಕಟ್ ಜೋರಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಟರ್ಕಿಗೆ ಇದರಿಂದ ಭಾರೀ ಸಂಕಷ್ಟ ಎದುರಾಗಿದೆ. ಆದರೆ, ಇದರ ನಡುವೆಯೂ ಟರ್ಕಿ ನಾವು ಯಾವುದೇ ನಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.

ಈಚೆಗಷ್ಟೇ ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಪ್ರಕಟಣೆಯ ಮೂಲಕ ಟರ್ಕಿಯಲ್ಲಿ ದಯವಿಟ್ಟು ಪ್ರವಾಸೋದ್ಯಮವನ್ನು ಕ್ಯಾನ್ಸಲ್ ಮಾಡಬೇಡಿ. ಇಲ್ಲಿ ಎಲ್ಲಾ ಮಾದರಿಯ ಸೌಲಭ್ಯಗಳನ್ನು ನಾವು ನೀಡಲಿದ್ದೇವೆ. ಹೋಟೆಲ್‌ಗಳಲ್ಲಿ ಬುಕ್ಕಿಂಗ್ ಸೇರಿದಂತೆ ಎಲ್ಲವೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದಿದ್ದಿತ್ತು. ಇದರ ಬೆನ್ನಲ್ಲೇ ಟರ್ಕಿ ಅಧ್ಯಕ್ಷ ಯೂಟರ್ನ್ ತೆಗೆದುಕೊಂಡಿದ್ದಾರೆ.
ಭಾರತದಲ್ಲಿ ಟರ್ಕಿ ಬಾಯ್ಕಟ್ ಟ್ರೆಂಡ್ ಆಗುತ್ತಿರುವ ಸಂದರ್ಭದಲ್ಲಿಯೇ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ರಿಯಾಕ್ಟ್ ಮಾಡಿದ್ದಾರೆ. ಪಾಕಿಸ್ತಾನದೊಂದಿಗೆ ನಾವು ಸದಾ ನಿಲ್ಲಲಿದ್ದೇವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ತಮ್ಮ "ಪ್ರಿಯ ಸಹೋದರ" ಎಂದಿರುವ ಅವರು ಹೇಳಿದ್ದು. ಟರ್ಕಿ ದೇಶವು ಪಾಕ್‌ನೊಂದಿಗೆ "ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯ"ದಲ್ಲಿ ಭದ್ರವಾಗಿ ನಿಲ್ಲಲಿದೆ ಎಂದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಈಗಲೂ ಪರಿಸ್ಥಿತಿ ಬೂದಿ ಮುಚ್ಚಿರುವ ಕೆಂಡದಂತೆಯೇ ಇದೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು 26 ಜನ ಭಾರತೀಯರು ಹಾಗೂ ವಿದೇಶಿ ಪ್ರಜೆಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದರು. ಇದಾದ ಮೇಲೆ ಭಾರತವು ಪಾಕಿಸ್ತಾನದ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಈ ದಾಳಿಯಲ್ಲಿ ಹಲವು ಉಗ್ರರು ಮೃತಪಟ್ಟಿದ್ದರು. ಆದರೆ ಇದಾದ ಮೇಲೆ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮಾಡಿದಾಗ ಟರ್ಕಿ ದೇಶವು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿದ್ದು ಬಹಿರಂಗವಾಗಿತ್ತು.
ಇದೀಗ ಪಾಕಿಸ್ತಾನದ ಪ್ರಧಾನಿಯು ಭಾರತ ಹಾಗೂ ಪಾಕಿಸ್ತಾನದ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದ ಪರವಾಗಿ ನಿಂತ ಟರ್ಕಿಗೆ ಧನ್ಯವಾದ ಅಂತ ಹೇಳಿದ್ದು. ಇದಕ್ಕೆ ಟರ್ಕಿ ಅಧ್ಯಕ್ಷರು ಪಾಕ್‌ನೊಂದಿಗೆ ಸದಾ ನಿಲ್ಲುವುದಾಗಿ ಹೇಳಿದೆ. ಷರೀಫ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಟರ್ಕಿ ಮತ್ತು ಪಾಕಿಸ್ತಾನದ ಬಂಧವು ನಿಜವಾದ ಸ್ನೇಹದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು. ಪಾಕಿಸ್ತಾನ-ಟರ್ಕಿ ಸ್ನೇಹ ದೀರ್ಘಕಾಲ ವಿರಲಿದೆ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications