• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಡಿಯೋ: ಮೋದಿ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹೆದರಿದ ಪಾಕಿಸ್ತಾನ

|
   ನರೇಂದ್ರ ಮೋದಿಯವರ ಭಾಷಣವನ್ನ ತಪ್ಪಾಗಿ ಅರ್ಥ ಮಾಡಿಕೊಂಡು ಹೆದರಿದ ಈ ದೇಶ

   ಇಸ್ಲಾಮಾಬಾದ್, ಮೇ 27: ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್, ಏರ್‌ ಸ್ಟ್ರೈಕ್ ಮಾಡಿದ ಮೋದಿ ಮತ್ತೊಮ್ಮೆ ಆರಿಸಿಬಂದು ಪ್ರಧಾನಿ ಆಗುತ್ತಿರುವುದು ಸಹಜವಾಗಿಯೇ ಪಾಕಿಸ್ತಾನಕ್ಕೆ ಆತಂಕ ತಂದಿದೆ. ಯಾವ ಮಟ್ಟಿಗೆಂದರೆ ಮೋದಿ ಪ್ರತಿ ಮಾತಲ್ಲೂ ಪಾಕಿಸ್ತಾನಕ್ಕೆ ಎಚ್ಚರಿಕೆಗಳನ್ನೇ ಹುಡುಕುತ್ತಿದೆ ಪಾಕ್ ಮೀಡಿಯಾ.

   ಮೋದಿ ಅವರು ಪ್ರಧಾನಿಯಾದ ಬಳಿಕ ಮಾಡಿದ ಭಾಷಣದಲ್ಲಿ ತಮ್ಮ ಕಾರ್ಯಕರ್ತರಿಗೆ, ಜನರಿಗೆ ಅಭಿನಂದನೆಗಳನ್ನು ಮೋದಿ ಸಲ್ಲಿಸಿದ್ದರು. ಆದರೆ ಭಾಷಣವನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಕಿಸ್ತಾನದ ಮಾಧ್ಯಮ. ಮೋದಿ ಅವರು ಕೋಟಿ, ಕೋಟಿ ವಿಂಗ್ ಕಮಾಂಡರ್ ಅಭಿನಂದನ್ ಅವರು ಹುಟ್ಟಬೇಕು ಎಂದು ಮೋದಿ ಹೇಳಿದ್ದಾರೆ ಎಂದು ವರದಿ ಮಾಡಿದೆ!

   ವಾರಣಾಸಿಯಲ್ಲಿ ನಿಯೋಜಿತ ಪ್ರಧಾನಿ LIVE: 'ಮೋದಿ ಇದ್ದರೆ ಎಲ್ಲವೂ ಸಾಧ್ಯವಿದೆ'

   ಮೋದಿ ಅವರು ಹಿಂದಿಯಲ್ಲಿ ಮಾಡಿದ ಭಾಷಣದಲ್ಲಿ, 'ಕೋಟಿ,ಕೋಟಿ ಅಭಿನಂದನ್' ಎಂದಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಕಿಸ್ತಾನದ ಎಆರ್‌ವೈ ನ್ಯೂಸ್‌ ಎಂಬ ಚಾನೆಲ್, ಮೋದಿ ಅವರು ತಮ್ಮ ಗೆಲುವಿನ ಶ್ರೇಯವನ್ನು ಅಭಿನಂದನ್‌ಗೆ ಅರ್ಪಿಸಿದ್ದಾರೆ. ಕೋಟಿ, ಕೋಟಿ ಅಭಿನಂದನ್‌ಗಳು ಎದ್ದು ಬರಬೇಕು ಎಂದು ಹೇಳಿದ್ದಾರೆ ಎಂದು ಮೋದಿ ಭಾಷಣದ ವಿಡಿಯೋ ತುಣುಕಿನೊಂದಿಗೆ ಪ್ರಸಾರ ಮಾಡಿದೆ.

   ಎಆರ್‌ವೈ ಅವರು ವರದಿ ಮಾಡಿರುವ ಸುದ್ದಿಯ ವಿಡಿಯೋ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದೆ. ಪಾಕಿಸ್ತಾನದವರೂ ಸಹ ಎಆರ್‌ವೈ ಅನ್ನು ಟ್ರೋಲ್ ಮಾಡುತ್ತಿದ್ದಾರೆ.

   ಮೇ 30ರ ಗುರುವಾರ ರಾತ್ರಿ 7ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ

   ಅಭಿನಂದನ್ ಗುಂಗಿನಿಂದ ಹೊರಬರುವ ಮೊದಲೇ ಮೋದಿ ಪುನರಾಯ್ಕೆಯ ಆತಂಕ ಕಾಡುತ್ತಿರುವ ಪಾಕಿಸ್ತಾನದ ಮಾಧ್ಯಮಗಳು ತಮ್ಮ ಸ್ಥಿಮಿತ ಕಳೆದುಕೊಂಡಿವೆ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.

   English summary
   Pakistan news chanel mis presented Narendra Modi's speech. Modi said 'Abhinandan' (thank u) but Pakistan media thought he was talking about wing commander Abhinandan. ವಿಡಿಯೋ: ಮೋದಿ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹೆದರಿದ ಪಾಕಿಸ್ತಾನ
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X