ಬೀದಿಗೆ ಬಿದ್ದ ಭಾರತ ವಿರೋಧಿ ಪಾಕಿಸ್ತಾನಕ್ಕೆ ಈಗ ಸಾಲವೇ ಗತಿ!
ಇಸ್ಲಾಮಾಬಾದ್: ದೇಶವೊಂದು ಎಷ್ಟು ಸಾಲ ಮಾಡಬಹುದು ಹೇಳಿ? ತನ್ನ ಆದಾಯದ ಶೇ.50ರಷ್ಟು? ಇಲ್ಲ ಅದನ್ನೂ ಮೀರಿ ತನ್ನ ಆದಾಯದ ಶೇ.100ರಷ್ಟು? ಇದನ್ನೂ ಮೀರಿ ಸಾಲ ಮಾಡಬೇಕೆಂದರೆ ಪಾಕಿಸ್ತಾನ ನೋಡಿ ಕಲಿಯಬೇಕು. ಏಕೆಂದರೆ ಇಡೀ ದೇಶವನ್ನೇ ಆರ್ಥಿಕವಾಗಿ ದಿವಾಳಿ ಮಾಡಿರುವ ಅಲ್ಲಿನ ರಾಜಕೀಯ ನಾಯಕರು, ಸರ್ಕಾರ ನಡೆಸಲು ದೇಶದ ಆಸ್ತಿಗಳನ್ನೇ ಮಾರಿ, ಮಾರಿ ಸಾಲ ಮಾಡುತ್ತಿದ್ದಾರೆ.
ಹೌದು, ಭೀಕರ ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನ ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್ ಬಳಿ ಮತ್ತೆ ಸಾಲಕ್ಕೆ ಭಿಕ್ಷೆ ಬೇಡಿದೆ. ಮುಂದಿನ ಒಂಬತ್ತು ತಿಂಗಳಲ್ಲಿ ಮತ್ತೊಮ್ಮೆ ₹24,571 ಕೋಟಿ ರೂಪಾಯಿ ಅಂದರೆ 3 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಪಡೆಯಲು ಮುಂದಾಗಿದೆ. ಈ ಮೂಲಕ ಐಎಂಎಫ್ ಖಾತೆಯಿಂದ ಅತಿ ಹೆಚ್ಚು ಸಾಲ ಪಡೆದ 4ನೇ ದೇಶ ಎಂಬ ಕುಖ್ಯಾತಿಗೆ ಪಾಕ್ ಪಾತ್ರವಾಗಲಿದೆ. ಈಗಾಗಲೇ IMFನಿಂದ ಪಾಕ್ ಸಾಕಷ್ಟು ಸಾಲ ಪಡೆದಿದೆ. ಆದರೆ ಗಬ್ಬೆದ್ದು ಹೋಗಿರುವ ಅಲ್ಲಿನ ವ್ಯವಸ್ಥೆ ಸರಿ ಮಾಡಲು ಈ ಸಾಲದ ಹಣ ಸಾಲುತ್ತಿಲ್ಲ. ಹೀಗಾಗಿ ಮತ್ತೆ ಮತ್ತೆ ಸಾಲದ ಮೊರೆ ಹೋಗುತ್ತಿದೆ ಪಾಕ್.

ಮೈಯೆಲ್ಲಾ ಸಾಲ ಮಾಡಿದ ಪಾಕಿಸ್ತಾನ!
ಅಂದಹಾಗೆ ಈ ಒಪ್ಪಂದಕ್ಕೆ ಐಎಂಎಫ್ ಮಂಡಳಿ ಇನ್ನಷ್ಟೇ ಅನುಮೋದನೆ ನೀಡಬೇಕಾಗಿದೆ. ಐಎಂಎಫ್‌ನಿಂದ ಅತಿ ಹೆಚ್ಚು ಸಾಲ ಪಡೆದ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ ಪಾಕ್. ಮೊದಲ 4 ಸ್ಥಾನಗಳಲ್ಲಿ ಕ್ರಮವಾಗಿ ಅರ್ಜೆಂಟಿನಾ, ಈಜಿಪ್ಟ್, ಉಕ್ರೇನ್ ಹಾಗೂ ಈಕ್ವೆಡಾರ್ ದೇಶಗಳು ಸ್ಥಾನ ಪಡೆದಿವೆ. ಇದೀಗ ಈ ನಾಲ್ಕೂ ದೇಶಗಳನ್ನು ಮೀರಿಸಿ, ತಾನು 4ನೇ ದೇಶ ಆಗಲು ಹೊರಟಿದೆ ಪಾಕಿಸ್ತಾನ. ಇದು ಬರೀ ಐಎಂಎಫ್ ಬಳಿ ಪಾಕಿಸ್ತಾನ ಪಡೆದ ಸಾಲದ ಲೆಕ್ಕ. ಇನ್ನು ಬೇರೆ ಬೇರೆ ದೇಶಗಳ ಬಳಿ ಪಾಕ್ ಪಡೆದಿರುವ ಸಾಲದ ಲೆಕ್ಕ ಕೇಳಿದರೆ ಸಾಕು ತಲೆ ತಿರುಗೋದು ಪಕ್ಕಾ!
ಸಾಲ ಮಾಡಿ ಶಸ್ತ್ರಾಸ್ತ್ರ ಖರೀದಿ!
ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಬೇಕು, ಅಷ್ಟಕ್ಕೂ ಈ ಮಾತು ಪಾಕ್‌ಗೆ ಮತ್ತು ಅಲ್ಲಿನ ಭ್ರಷ್ಟ ರಾಜಕಾರಣಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತೆ. ಯಾಕಂದ್ರೆ ಈ ದೇಶ ಇದೆಯಲ್ಲ ಪಾಕಿಸ್ತಾನ, ಇಲ್ಲಿ ತಿನ್ನಲು ಅನ್ನ ಇಲ್ಲ. ಗೋಧಿ ಹಿಟ್ಟಿಗೂ ಕೊಲೆಗಳು ನಡೆಯುವ ದೇಶ ಅದು. ಪರಿಸ್ಥಿತಿ ಹೀಗಿದ್ರೂ ಪಾಕಿಗಳ ಸೇನೆಗೆ ಮಾತ್ರ ಅತ್ಯಾಧುನಿಕವಾದ ಅಸ್ತ್ರವೇ ಬೇಕು. ಅದ್ರಲ್ಲೂ ಸಾವಿರಾರು ಕೋಟಿ ರೂಪಾಯಿ ಬೆಲೆಯ ವೆಪನ್ಸ್ ಬೇಕು. ಅದೇ ರೀತಿ ಎಸ್‌ಎಚ್-15 ಅಸ್ತ್ರಗಳ ಖರೀದಿಗೆ ಈಗಾಗಲೇ ಪಾಕಿಸ್ತಾನ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಒಪ್ಪಂದ ಮಾಡಿಕೊಂಡಿದೆ. ಇದು ತನ್ನ ದುಡ್ಡಿಂದ ಅಲ್ಲ, ಚೀನಾದ ನಾಯಕರು ಹಾಕಿರುವ ಸಾಲದ ಭಿಕ್ಷೆಯಿಂದ.
ದೇಶವನ್ನೇ ಮಾರುತ್ತಾರಾ ಪಾಕ್ ರಾಜಕಾರಣಿಗಳು?
ಕೈಗೆ ಸಿಗದ ಹಣದುಬ್ಬರ, ಜೊತೆಗೆ ಹಣಕಾಸಿನ ಅಸಮತೋಲನ. ಇಷ್ಟು ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನು ಪಾಕಿಸ್ತಾನ ಮಾರಾಟ ಮಾಡಿದೆ. ಇತ್ತೀಚೆಗಷ್ಟೆ ಕರಾಚಿ ಪೋರ್ಟ್ ಟರ್ಮಿನಲ್ಸ್ ಅನ್ನ ಯುಎಇಗೆ ಹಸ್ತಾಂತರಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಇನ್ನೂ ತುರ್ತು ನಿಧಿ ಸಂಗ್ರಹಿಸಲು ಕಳೆದ ವರ್ಷ ಹೊಸ ಕಾನೂನು ಜಾರಿಗೆ ತಂದ ಪಾಕ್ ನೆಲದ ರಾಜಕಾರಣಿಗಳು, ತಮ್ಮ ದೇಶವನ್ನೇ ಮಾರುತ್ತಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್ ಜೊತೆಗಿನ ಒಪ್ಪಂದದ ಅವಧಿ ಮುಕ್ತಾಯವಾದ ಕಾರಣ, ಪಾಕ್‌ಗೆ ತುರ್ತಾಗಿ ಹೆಚ್ಚುವರಿ ಹಣ ಬೇಕಿದ್ದು ಸಂಕಷ್ಟದಲ್ಲಿ ಚೀನಾ ಸಹಾಯ ಮಾಡಿದೆ. ಇಷ್ಟು ಸಾಲ ಸಿಕ್ಕಿದ್ದರೂ ಇದೀಗ ಮತ್ತೊಮ್ಮೆ IMF ಕಾಲು ಹಿಡಿಯಲು ಮುಂದಾಗಿದೆ. ಒಟ್ನಲ್ಲಿ ಪಾಕಿಸ್ತಾನ ಬದಲಾಗುವುದಿಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಪಾಕಿಸ್ತಾನ ಜನ ಕೂಡ ಇಂಥ ವ್ಯವಸ್ಥೆಯಲ್ಲಿ ಒದ್ದಾಡುತ್ತಿದ್ದಾರೆ. ಆರ್ಥಿಕವಾಗಿ ದಿವಾಳಿಯಾದ ಪಾಕಿಸ್ತಾನದ ಬಳಿ ಹಲವು ದೇಶಗಳು ಈಗ ಲಾಭಕ್ಕಾಗಿ ಕೆಲಸ ಮಾಡುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.












Click it and Unblock the Notifications