ಪ್ರವಾಹದ 'ಆಳವಾದ' ರಿಪೋರ್ಟ್‌ನಿಂದ ಟ್ರೋಲ್ ಆದ ಪಾಕಿಸ್ತಾನ ವರದಿಗಾರ
ಇಸ್ಲಾಮಾಬಾದ್, ಜುಲೈ 30: ಪ್ರವಾಹದ ಆಳವನ್ನು ಜನರಿಗೆ ತಿಳಿಸಲು ನೀರಿಗೆ ಇಳಿದು ಪಾಕಿಸ್ತಾನ ವರದಿಗಾರನೊಬ್ಬ ಟ್ರೋಲ್ ಆಗಿದ್ದಾನೆ.
ವರದಿಗಾರನ ಕುತ್ತಿಗೆಯವರೆಗೂ ನೀರು ನೀರಿದ್ದು, ಮೈಕ್ ಅರ್ಧ ಮುಳುಗಿಹೋಗಿದೆ, ಇಂತಹ ಸಂದರ್ಭದಲ್ಲೂ ಆತ ವರದಿ ಮಾಡಿದ್ದಾನೆ. ಎಷ್ಟೇ ನೀರಿನ ಸೆಳೆ ಇದ್ದರೂ ಕೂಡ ಅಂಜದೆ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದಾರೆ ಎಂದು ಪಾಕಿಸ್ತಾನ ಚಾನೆಲ್ ವರದಿ ಮಾಡಿದೆ.
ಎಲ್ಲರಿಗೂ ಪಾಕಿಸ್ತಾನದ ನ್ಯೂಸ್ ರಿಪೋರ್ಟರ್ ಚಾಂದ್ ನವಾಬ್ ಬಗ್ಗೆ ತಿಳಿದೇ ಇದೆ, ಅವರು ಟೇಕ್ ಮೇಲೆ ಟೇಕ್ ತೆಗೆದುಕೊಂಡು ವರದಿ ಮಾಡಿದ್ದು ಪಾಕಿಸ್ತಾನ ಮಾತ್ರವಲ್ಲದೇ ಇತರೆ ದೇಶಗಳಲ್ಲೂ ಫೇಮಸ್ ಆಗಿತ್ತು. ಆದರೆ ಇದೀಗ ಮತ್ತೊಬ್ಬ ವರದಿಗಾರನ ವಿಡಿಯೋ ವೈರಲ್ ಆಗಿದೆ.

ಪ್ರವಾಹ ಪರಿಸ್ಥಿತಿ ಬಗ್ಗೆ ವರದಿ ಮಾಡ್ತಿದ್ದ ರಿಪೋರ್ಟರ್, ನದಿಯಲ್ಲಿನ ನೀರಿನ ಮಟ್ಟ ಏರಿಕೆಯಾಗಿ ಅದು ಯಾವ ರೀತಿ ಬೆಳೆಗಳನ್ನ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ ಅನ್ನೋದರ ಬಗ್ಗೆ ಪ್ರತ್ಯಕ್ಷ ವರದಿ ನೀಡುತ್ತಿದ್ದ . ಜಿ-ಟಿವಿಯ ಅಜಾದರ್ ಹುಸೈನ್ ಎಂಬಾತ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ರಿಪೋರ್ಟರ್.
ಈತನ ಕತ್ತಿನ ತನಕ ನೀರಿದ್ದು, ಮೈಕ್ ಹಿಡಿದು ವರದಿ ಮಾಡಿದ್ದಾನೆ. ಈತನ ವಿಡಿಯೋವನ್ನ ಶೇರ್ ಮಾಡಿರೋ ಚಾನೆಲ್, ನಮ್ಮ ವರದಿಗಾರ ತನ್ನ ಕರ್ತವ್ಯ ನಿರ್ವಹಿಸಲು ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ ಎಂದು ಹೇಳಿದೆ.
ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವರು ವರದಿಗಾರನಿಗೆ ಭೇಷ್ ಅಂದ್ರೆ ಇನ್ನೂ ಕೆಲವು ಜನ ಇದನ್ನ ಟ್ರೋಲ್ ಮಾಡಿದ್ದಾರೆ. ಇದೊಂದು ಮೂರ್ಖತನದ ಪರಮಾವಧಿ, ಆತ ತನ್ನ ಪ್ರಾಣದ ಜೊತೆ ರಿಸ್ಕ್ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.












Click it and Unblock the Notifications