ಇಮ್ರಾನ್ ಖಾನ್ ಸರ್ಕಾರದಲ್ಲಿ ಕರೆಂಟ್ ಬಿಲ್ ಕಟ್ಟೋಕು ಹಣ ಇಲ್ವಂತೆ
ಇಸ್ಲಾಮಾಬಾದ್, ಆಗಸ್ಟ್ 29: ಇಮ್ರಾನ್ ಖಾನ್ ಸರ್ಕಾರದಲ್ಲಿ ಕರೆಂಟ್ ಬಿಲ್ ಪಾವತಿಸಲೂ ಕೂಡ ಹಣವಿಲ್ಲದೆ ವಿದ್ಯುತ್ ಕಡಿತ ತೊಂದರೆ ಎದುರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನ ಪ್ರಧಾನಿ ಸಚಿವಾಲಯದ ಕಳೆದ ತಿಂಗಳ ವಿದ್ಯುತ್ ಬಿಲ್ ಪಾವತಿ ಮೊತ್ತ 35 ಲಕ್ಷ ರೂಪಾಯಿ ಆಗಿತ್ತು. ಈ ತಿಂಗಳು ಆ ಮೊತ್ತ 41ಲಕ್ಷಕ್ಕೆ ಏರಿಕೆಯಾಗಿದೆ. ವಿದ್ಯುತ್ ಬಿಲ್ ಅನ್ನು ಕೂಡಲೇ ಪಾವತಿಸುವಂತೆ ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದ್ದರೂ ಕೂಡಾ ಹಣ ಪಾವತಿಯಾಗಿಲ್ಲ ಎಂದು ಐಇಎಸ್ ಸಿಒ ಆರೋಪಿಸಿರುವುದಾಗಿ ವರದಿ ಹೇಳಿದೆ.

Recommended Video
ರಾಹುಲ್ ನಂತಹ ನಾಯಕರು ನಮ್ಮ ದೇಶದಲ್ಲಿರುವುದೇ ವಿಪರ್ಯಾಸ..? | Oneindia Kannada
ಪಾಕಿಸ್ತಾನ ಮಾಧ್ಯಮದ ವರದಿ ಪ್ರಕಾರ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಚಿವಾಲಯ 41 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿದೆ. ಬಾಕಿ 41 ಲಕ್ಷ ರೂಪಾಯಿ ಕೂಡಲೇ ಪಾವತಿಸುವಂತೆ ಇಸ್ಲಾಮಾಬಾದ್ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ(ಐಇಎಸ್ ಸಿಒ) ಬುಧವಾರ ನೋಟಿಸ್ ಜಾರಿ ಮಾಡಿರುವುದಾಗಿ ವರದಿ ವಿವರಿಸಿದೆ. ದೇಶದಲ್ಲಿರುವ ಆರ್ಥಿಕ ದುಸ್ಥಿತಿ ಇದೀಗ ಇಮ್ರಾನ್ ಖಾನ್ ಸರ್ಕಾರಕ್ಕೂ ತಟ್ಟಿದೆ.












Click it and Unblock the Notifications