ಪಾಕ್ ಪಾಲಿಗೆ ಉಗ್ರ ಬುರ್ಹಾನ್ ವಾನಿ ಹೀರೋನಂತೆ! ಅಂಚೆ ಚೀಟಿಯಲ್ಲೂ ಅವನೇ!

ಇಸ್ಲಾಮಾಬಾದ್, ಸೆಪ್ಟೆಂಬರ್ 21: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಬುರ್ಹಾನ್ ವಾನಿಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವ ಮೂಲಕ ಪಾಕಿಸ್ತಾನ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.

ಅಷ್ಟೇ ಅಲ್ಲ, ಬುರ್ಹಾನ್ ವಾನಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಪಾಕಿಸ್ಥಾನ ಅಂಚೆ ಇಲಾಖೆ ಬಿಡುಗಡೆ ಮಾಡಿದ್ದು, ಈ ಅಂಚೆ ಚೀಟಿಗಳು ಬುರ್ಹಾನ್ ಭಾವಚಿತ್ರವನ್ನು ಹೊಂದಿವೆ!

'ಬುರ್ಹಾನ್ ವಾನಿ ಭಾರತೀಯ ಸೇನೆಯ ದೌರ್ಜನ್ಯಕ್ಕೆ ಬಲಿಯಾದ ಸಂತ್ರಪ್ತ. ಮತ್ತು ಆತ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮ' ಎಂದು ಪಾಕಿಸ್ತಾನದಲ್ಲಿರುವ ವಾನಿ ಬೆಂಬಲಿಗರು ಹೇಳಿದ್ದಾರೆ.

Pakistan glorifies Burhan Wani and issued a ommemorative postage stamp

2016 ರ ನುಲೈನಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಗೆ ಬಲಿಯಾದ ಬುರ್ಹಾನ್ ವಾನಿ ಹಿಜ್ಬುಲ್ ಮುಜಾಹಿದ್ದಿನ್ ಭಯೋತ್ಪಾದಕನಾಗಿಯೂ, ಪ್ರತ್ಯೇಕತಾವಾದಿಯಾಗಿಯೂ ಗುರುತಿಸಿಕೊಂಡಿದ್ದ. ಜಮ್ಮ-ಕಾಶ್ಮೀರದಲ್ಲಿ ಈತನಿಗೆ ಸಾಕಷ್ಟು ಅನುಯಾಯಿಗಳಿದ್ದರು. ಅದಕ್ಕೆಂದೇ ಬುರ್ಹಾನ್ ವಾನಿಯನ್ನು ಸೇನೆ ಬಲಿಪಡೆಯುತ್ತಿದ್ದಂತೆಯೇ ಕಾಶ್ಮೀರದಲ್ಲಿ ಗಲಭೆ ಎದ್ದಿತ್ತು. ಈ ಗಲಭೆ ಸುಮಾರು ತಿಂಗಳುಗಳ ಕಾಲ ಮುಂದುವರಿದಿತ್ತು.

ಕಾಶ್ಮೀರದಲ್ಲಿ ಹಲವು ಗಲಭೆಗಳಿಗೆ ಕಾರನೀಕರ್ತನಾದ ವಾನಿಯನ್ನು ಪಾಕಿಸ್ತಾನ ಈ ಪರಿ ಮೆರೆಸುತ್ತಿರುವುದು ಭಾರತೀಯರಲ್ಲಿ ಆಕ್ರೋಶ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+