Pakistan Election: ಪಾಕಿಸ್ತಾನ ಚುನಾವಣೆಗೆ ಮುಹೂರ್ತ ಫಿಕ್ಸ್! ಮತದಾನ ಯಾವಾಗ ಗೊತ್ತಾ?

ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗಿ ಸದ್ದು ಮಾಡುತ್ತಾ, ಜಾಗತಿಕ ಮಟ್ಟದಲ್ಲಿ ತನ್ನ ಕುತಂತ್ರ ಬುದ್ಧಿಯಿಂದಲೆ ಟೀಕೆಗೆ ಗುರಿಯಾಗುವ ಭಯೋತ್ಪಾದಕರ ತವರು ಪಾಕಿಸ್ತಾನದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಭಾರತದ ರೀತಿಯೇ ಪ್ರಜಾಪ್ರಭುತ್ವದ ದೇಶವಾದ ಪಾಕಿಸ್ತಾನದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರಕ್ಕೆ ಯಾವುದೆ ಅಡೆತಡೆ ಇಲ್ಲ. ಇಂತಹ ದೇಶ ಈಗ ಚುನಾವಣೆಗೆ ಸಜ್ಜಾಗಿದ್ದು, ಮತದಾನದ ದಿನಾಂಕ ಕೂಡ ಫೈನಲ್ ಆಗಿದೆ.

ಪಾಕಿಸ್ತಾನ ಲೋಕಸಭೆ ಸದಸ್ಯ ಬಲ 342, ಭಾರತದಂತೆ ಪಾಕ್‌ನಲ್ಲು 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿ ಇದೇ ಆಗಸ್ಟ್ 12ಕ್ಕೆ ಕೊನೆಯಾಗಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ, ಆಗಸ್ಟ್‌ 9ಕ್ಕೆ ಪಾಕ್ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್‌ನ ಅಂದಿನ ಪ್ರಧಾನಿ. ಹೀಗೆ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕ್ ಸಂಸತ್ ವಿಸರ್ಜನೆ ಮಾಡ್ಲಾಗಿತ್ತು. ಇದೀಗ ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ಮತದಾನದ ದಿನಾಂಕ ಕೂಡ ಅಧಿಕೃತ ಆಗಿದೆ. ಹಾಗಾದರೆ ಭಾರತದ ಶತ್ರು ಪಾಕಿಸ್ತಾನದಲ್ಲಿ ಮತದಾನವು ಯಾವಾಗ ನಡೆಯುತ್ತೆ? ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ, ಮುಂದೆ ಓದಿ.

Pakistan General Election Final Date Has Been Revealed

ಪಾಕಿಸ್ತಾನದಲ್ಲಿ 2024ರ ಫೆಬ್ರವರಿ...

ಅಷ್ಟಕ್ಕೂ ರಾಷ್ಟ್ರೀಯ ಸಂಸತ್ತು ಮತ್ತು ಪ್ರಾಂತೀಯ ಶಾಸಕಾಂಗ ಸಭೆ ವಿಸರ್ಜನೆ ಮಾಡಿದ 90 ದಿನಗಳ ಒಳಗೆ, ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಈಗ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಾಕಿಸ್ತಾನದ ಚುನಾವಣಾ ಆಯೋಗವು ಪಾಕ್ ಸುಪ್ರೀಂ ಕೋರ್ಟ್‌ಗೆ ಮತದಾನದ ದಿನಾಂಕವನ್ನ ತಿಳಿಸಿದೆ. ಹೀಗೆ ಪಾಕಿಸ್ತಾನ ಚುನಾವಣೆ ಆಯೋಗ ಸಲ್ಲಿಸಿರುವ ದಿನಾಂಕದಂತೆ ಪಾಕಿಸ್ತಾನದಲ್ಲಿ ಹೊಸ ಸರ್ಕಾರವನ್ನ ಆಯ್ಕೆ ಮಾಡಲು 2024ರ ಫೆಬ್ರುವರಿ 8ರಂದು ಮುಹೂರ್ತ ಫಿಕ್ಸ್ ಆಗಿದೆ. ಅಂದ್ರೆ ಅದೇ ದಿನ ಮತದಾನ ನಡೆಯಲಿದೆ.

ಚುನಾವಣೆ ನಡೆಸುವುದಕ್ಕೂ ಕಿರಿಕಿರಿ!

ಇನ್ನು, 2024ರ ಜನವರಿಯಲ್ಲಿ ಚುನಾವಣೆ ನಡೆಸುವುದಾಗಿ ಪಾಕ್ ಚುನಾವಣಾ ಆಯೋಗವು ಕೆಲ ತಿಂಗಳ ಹಿಂದೆಯೇ ಮಾಹಿತಿ ನೀಡಿತ್ತು. ಆದ್ರೆ ನಿರ್ದಿಷ್ಟ ದಿನಾಂಕವನ್ನ ತಿಳಿಸಿರಲಿಲ್ಲ. ಈಗ 2024ರ ಫೆಬ್ರುವರಿ 8ಕ್ಕೆ ಮತದಾನ ನಡೆಯುವುದು ಪಕ್ಕಾ ಆಗಿದೆ. ಇನ್ನು ಪಾಕಿಸ್ತಾನದ ಚುನಾವಣೆಗೆ, ಕ್ಷೇತ್ರ ಪುನರ್‌ವಿಂಗಡಣೆ ಮಾಡಬೇಕು. ಇದು ಮುಗಿದ ನಂತರ ಚುನಾವಣೆಗಾಗಿ 54 ದಿನಗಳು ಅಗತ್ಯ ಎಂದು ಪಾಕಿಸ್ತಾನ ಚುನಾವಣಾ ಆಯೋಗ ಹೇಳಿತ್ತು. ಇದೇ ಕಾರಣಕ್ಕೆ ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟ ನಿಲುವು ತಿಳಿಸಲು ಸುಪ್ರೀಂ ಕೋರ್ಟ್ ಪೀಠವು ಚುನಾವಣಾ ಆಯೋಗದ ವಕೀಲರನ್ನು ಕೇಳಿತ್ತು. ಇದೀಗ ಉತ್ತರ ಕೂಡ ಸಿಕ್ಕಂತಾಗಿದೆ.

ಇಮ್ರಾನ್ ಖಾನ್ ಸ್ಪರ್ಧೆ ಗ್ಯಾರಂಟಿ?

ಒಟ್ನಲ್ಲಿ ಭಯೋತ್ಪಾದಕರ ತವರು ಎಂಬ ಕುಖ್ಯಾತಿ ಪಡೆದಿರುವ ಪಾಕ್, ಇದೀಗ ತನ್ನ ಸಂಸತ್‌ ಚುನಾವಣೆಗೆ ಅಂತಿಮ ಹಂತದ ಸಿದ್ಧತೆ ನಡೆಸಿದೆ. ಈಗಾಗಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿದ ಸಮಯಕ್ಕೆ ಮತ್ತೊಬ್ಬ ಮಾಜಿ ಪಿಎಂ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಎಂಟ್ರಿಯ ಕೊಟ್ಟಿದ್ದಾರೆ. ಹೀಗೆ ನವಾಜ್ ತವರಿಗೆ ಮರಳಿದ ಕೆಲ ದಿನದಲ್ಲಿ ಪಾಕಿಸ್ತಾನ ಸಂಸತ್ ಚುನಾವಣೆ ಬಗ್ಗೆ ಮಹತ್ವದ ಘೋಷಣೆ ಮೊಳಗಿದೆ. 2024ರ ಫೆಬ್ರುವರಿ 8ರಂದು ಮತದಾನ ನಡೆಯಲಿದೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ ಮಾಹಿತಿ ನೀಡಿರುವುದು ಸಂಚಲನ ಸೃಷ್ಟಿಸಿದೆ. ಇಮ್ರಾನ್‌ಗೆ ಅಷ್ಟರ ಒಳಗೆ ಜಾಮೀನು ಸಿಕ್ಕು, ಇಮ್ರಾನ್ ಖಾನ್ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ? ಎಂಬ ಬಗ್ಗೆ ಕೂಡ ಚರ್ಚೆ ಜೋರಾಗಿದೆ.

Pakistan General Election Final Date Has Been Revealed

ಸ್ವಲ್ಪ ಎಡವಟ್ಟಾದರೂ ರಕ್ತಪಾತ ಪಕ್ಕಾ!

ಹಾಗೆ ನೋಡುವುದಾದ್ರೆ ಚುನಾವಣೆ ನಡೆಸಲು ಪಾಕಿಸ್ತಾನಕ್ಕೆ ಈ ಬಾರಿ ಸಾಕಷ್ಟು ಸವಾಲು ಎದುರಾಗುವುದು ಪಕ್ಕಾ. ಏಕೆಂದರೆ ಆರ್ಥಿಕವಾಗಿ ದಿವಾಳಿಯಾಗಿ ಪರದಾಡುತ್ತಿರುವ ಪಾಕ್ ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಸುರಿಯಬೇಕಿದೆ. ಇದರ ಜೊತೆಗೆ ಪಾಕಿಸ್ತಾನ ಉಗ್ರರ ಕೂಪವಾಗಿದ್ದು, ಆತ್ಮಾಹುತಿ ದಾಳಿಗಳು ನಡೆಯುವ ಭಯ ಕೂಡ ಆವರಿಸಿದೆ. ಈ ಹಿನ್ನೆಲೆ ಮೈಯೆಲ್ಲಾ ಕಣ್ಣಾಗಿ ತುಂಬಾ ಎಚ್ಚರಿಕೆಯಿಂದ ಎಲೆಕ್ಷನ್ ನಡೆಸಬೇಕಿದೆ. ಇಂತಹ ಸಮಯದಲ್ಲಿ ಒಂಚೂರು ಎಡವಟ್ಟಾದರೂ ಉಗ್ರರು ರಕ್ತಪಾತ ನಡೆಸುವ ಸಾಧ್ಯತೆ ಇದ್ದೇ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+