ಇಮ್ರಾನ್ ಖಾನ್ ಪಕ್ಷದ ಮತ್ತೊಬ್ಬ ಮುಖಂಡ ಅಂದರ್!

ಲಾಹೋರ್: ಪಾಕಿಸ್ತಾನದಲ್ಲಿ ಕಾನೂನಿಗೆ ಬೆಲೆಯೇ ಇಲ್ಲ, ಪಾಕ್ ನೆಲದಲ್ಲಿ ಅರಾಜಕತೆ ತಾಂಡವ ಆಡುತ್ತಿದೆ ಅನ್ನೋ ಆರೋಪಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಇಮ್ರಾನ್ ಖಾನ್ ಆಪ್ತ & ಪಾಕಿಸ್ತಾನ್-ತೆಹೀಕ್ ಇ ಇನ್ಸಾಫ್ ಪಕ್ಷದ ಅಧ್ಯಕ್ಷನಾಗಿದ್ದ ಚೌಧರಿ ಪರ್ವೇಜ್ ಇಲಾಹಿರನ್ನ ಪಾಕ್ ಪೊಲೀಸರು ಎಳೆದೊಯ್ದಿರುವ ದೃಶ್ಯ ವೈರಲ್ ಆಗುತ್ತಿದೆ.

ಇಮ್ರಾನ್ ಖಾನ್ ವಿರುದ್ಧ ಪಾಕ್ ಸೇನೆ & ಸರ್ಕಾರ ತಿರುಗಿಬಿದ್ದಿದೆ. ಹೀಗಾಗಿ ಹೇಗಾದರೂ ಮಾಡಿ ಇಮ್ರಾನ್ ಖಾನ್‌ಗೆ ಮತ್ತೆ ಜೈಲು ತೋರಿಸಬೇಕು ಅನ್ನೋ ಪ್ರಯತ್ನ ನಡೆಯುತ್ತಿದೆ. ಆದರೆ ಜಾಮೀನು ಪಡೆದು ಸೇಫ್ ಆಗಿರುವ ಇಮ್ರಾನ್ ಖಾನ್ ಮುಟ್ಟಲು ಆಗುತ್ತಿಲ್ಲ. ಈ ಕಾರಣಕ್ಕೆ ಇಮ್ರಾನ್ ಖಾನ್ ಬೆಂಬಲಿಗರು ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದಾರೆ. ಇದೀಗ ಇಮ್ರಾನ್ ಖಾನ್ ಪಕ್ಷದ ಅಧ್ಯಕ್ಷ ಕೂಡ ಜೈಲು ಪಾಲಾಗಿದ್ದಾರೆ.

Pakistan former PM Imran Khan

ಮಾನವೀಯತೆ ಮರೆತ ಭದ್ರತಾ ಸಿಬ್ಬಂದಿ?

ಮೇ 26ರಂದು ಲಾಹೋರ್ ಜಿಲ್ಲಾ ಕೋರ್ಟ್ ಇಲಾಹಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಘಟನೆ ಬಳಿಕ ಇಲಾಹಿ ಕೈಗೆ ಸಿಕ್ಕಿರಲಿಲ್ಲ. 77 ವರ್ಷದ ಇಲಾಹಿ ಈಗ ಮನೆಯಲ್ಲಿ ಇಂದು ಲಾಕ್ ಆಗಿದ್ದು, ಭದ್ರತಾ ಸಿಬ್ಬಂದಿ ಇಲಾಹಿಯನ್ನ ಕನಿಷ್ಠ ಕರುಣೇ ತೋರಿಸದೆ ಎಳೆದೊಯ್ದಿದ್ದಾರೆ. ಇನ್ನು ಈ ಘಟನೆಯ ವಿಡಿಯೋವನ್ನ ಇಮ್ರಾನ್ ಖಾನ್ ಪಕ್ಷದ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲದೆ ಮಹಿಳೆಯರ ಜೊತೆ ಕೂಡ ಅನುಚಿತ ವರ್ತನೆ ತೋರಿದ ಆರೋಪ ಭದ್ರತಾ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.

ಎಸ್ಕೇಪ್ ಆದರೂ ಜೀವಕ್ಕೆ ಗ್ಯಾರಂಟಿ ಇಲ್ಲ!

ಇಮ್ರಾನ್ ಖಾನ್‌ಗೆ ಹಳ್ಳ ತೋಡಿದ್ದವರ ಪೈಕಿ ಪಾಕಿಸ್ತಾನ ಸೇನೆ, ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆ ಕೂಡ ಒಗ್ಗೂಡಿತ್ತು ಎನ್ನುವ ಆರೋಪ ಇದೆ. ಆದರೆ ಕೊನೇ ಕ್ಷಣದಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಹಿಡಿತಕ್ಕೆ ತಂದಿತ್ತು. ಖಾನ್ ಬಿಡುಗಡೆ ಆಗುವಲ್ಲಿ ಸುಪ್ರೀಂಕೋರ್ಟ್ ನಿರ್ಧಾರ ಮಹತ್ವದ್ದು. ಇಷ್ಟೆಲ್ಲಾ ಕಷ್ಟಪಟ್ಟು ಹೊರಗೆ ಬಂದರೂ ಇಮ್ರಾನ್ ಖಾನ್ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ.

Pakistan former PM Imran Khan

ಇಮ್ರಾನ್ ಖಾನ್ ವಿರುದ್ಧ ಉಗ್ರಪಟ್ಟ!

ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆ ವೇಳೆ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್, ಡಾಟಾ ಸೇರಿದಂತೆ ಸೇನಾ ವಸ್ತುಗಳನ್ನ ನಾಶ ಮಾಡಿದ ಆರೋಪದ ಹಿನ್ನೆಲೆ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಹೀಗಾಗಿ ಗಲಾಟೆ ಮಾಡಿದವರ ಮೇಲೆ ಉಗ್ರರ ಪಟ್ಟ ಕಟ್ಟಲಾಗಿದೆ. ಹೀಗಾಗಿಯೇ ಇಮ್ರಾನ್ ಖಾನ್ ವಿರುದ್ಧವೂ ಭಯೋತ್ಪಾದನೆ ಆರೋಪ ಹೊರಿಸಲು ಪ್ರಯತ್ನಿಸಲಾಗಿತ್ತು. ಇದೇ ಆರೋಪದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಪಕ್ಷದ ಅಧ್ಯಕ್ಷ ಕೂಡ ಅಂದರ್ ಆಗಿದ್ದಾರೆ.

ಪಾಕಿಸ್ತಾನ ಸೇನೆಯಿಂದಲೇ ಪಿತೂರಿ?

ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಖಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಉಗ್ರನ ಪಟ್ಟ ಕಟ್ಟುವುದು ಒಂದಾಗಿದೆ ಎಂದು ಆರೋಪಿಸಲಾಗಿತ್ತು. ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಹಲವು ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಇದೀಗ ಉಳಿದಿರುವುದು ಇಮ್ರಾನ್ ಖಾನ್ ಬೆಂಬಲಿಗರು ಮಾತ್ರ. ಹೀಗಾಗಿ ಅವರನ್ನ ಅರೆಸ್ಟ್ ಮಾಡುತ್ತಿದ್ದಾರೆ ಎಂದು ಖಾನ್ ಬೆಂಬಲಿಗರು ಆರೋಪಿಸಿದ್ದಾರೆ.

ಒಟ್ನಲ್ಲಿ ಪಾಕಿಸ್ತಾನ ಸರ್ಕಾರ ಸಣ್ಣಪುಟ್ಟ ವಿಚಾರದಲ್ಲೂ ಜಗತ್ತಿನಾದ್ಯಂತ ತನ್ನ ಮಾನ ತಾನೇ ಕಳೆದುಕೊಳ್ಳುತ್ತಿದೆ. ಇದೀಗ ಇಮ್ರಾನ್ ಖಾನ್ ವಿಚಾರದಲ್ಲೂ ಅದೇ ಆಗೋಗಿದೆ. ಇಮ್ರಾನ್ ಖಾನ್ ಪಕ್ಷದ ಅಧ್ಯಕ್ಷ ಅರೆಸ್ಟ್ ಆಗಿರುವುದು ಪಾಕ್ ಜನರನ್ನ ರೊಚ್ಚಿಗೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹಿಂಸೆ ಭುಗಿಲೇಳುವ ಲಕ್ಷಣ ಕಾಣುತ್ತಿದ್ದು, ಅಲರ್ಟ್ ಆಗಿ ಎಲ್ಲೆಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+