65ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಇಮ್ರಾನ್ ಖಾನ್
ಲಾಹೋರ್, ಫೆಬ್ರವರಿ 19: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ರಾಜಕಾರಣಿ ಇಮ್ರಾನ್ ಖಾನ್ ತಮ್ಮ 65 ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ.
ಧಾರ್ಮಿಕ ಸಲಹೆಗಾರ್ತಿ ಬುಷ್ರಾ ಮನೆಕಾ ಅವರನ್ನು ನಿನ್ನೆ (ಫೆ.19) ಲಾಹೋರ್‌ನಲ್ಲಿ ಮದುವೆ ಆಗಿದ್ದಾರೆ. ಬುಷ್ರಾ ಮನೆಕಾ ಅವರ ಸಹೋದರನ ಮನೆಯಲ್ಲಿ ಸರಳವಾಗಿ ಸಮಾರಂಭದಲ್ಲಿ ಇಮ್ರಾನ್ ಖಾನ್ ಅವರು ಮೂರನೇ ಬಾರಿಗೆ ಮೂರು 'ಕಬೂಲ್' ಹೇಳಿದ್ದಾರೆ.
ಪಾಕಿಸ್ತಾನ ವರ್ಲ್ಡ್ ಕಪ್ ವಿಜೇತ ತಂಡದ ನಾಯಕರಾಗಿದ್ದ ಇಮ್ರಾನ್ ಖಾನ್ ಕ್ರಿಕೆಟ್ ನಿವೃತ್ತಿ ನಂತರ ಪಾಕಿಸ್ತಾನ ತರೇಕ್ ಎ ಇನ್ಸಾಫ್ ಪಕ್ಷ ಸ್ಥಾಪಿಸಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಬದಲಾದರು.

ತಮ್ಮ ವೈಭವೋಪೇತ ಜೀವನ ಶೈಲಿ ಮತ್ತು ಮದುವೆಗಳಿಂದ ಸದಾ ಸುದ್ದಿಯರುವ ಇಮ್ರಾನ್ ಖಾನ್ ತಮ್ಮ ಇಳಿ ವಯಸ್ಸಿನಲ್ಲಿ ಮದುವೆ ಆಗಿರುವುದು ಸುದ್ದಿಯಲ್ಲಿದೆ. ಮದುವೆಗೆ ಹೊರತಾದ ಅವರ ಸಂಬಂಧಗಳು ಪಾಕಿಸ್ತಾನದಲ್ಲಿ ಸುದ್ದಿ ಮಾಡಿದ್ದವೂ.
ಇಮ್ರಾನ್ ಖಾನ್ ಮೊದಲಿಗೆ 1995 ರಲ್ಲಿ ಜಿಮ್ಮಾ ಗೋಲ್ಡ್‌ಸ್ಮಿತ್ ಎಂಬುವರನ್ನು ಮದುವೆಯಾಗಿದ್ದರು ಆ ಸಂಬಂದ ಕೆಲವು ವರ್ಷಗಳ ನಂತರ ಮುರಿದುಬಿತ್ತು. ಆ ನಂತರ ಅವರು ಟಿವಿ ನಿರೂಪಕಿ ರೆಹಮ್ ಖಾನ್ ಎಂಬುವರನ್ನು ವಿವಾಹವಾದರು. ಆ ಸಂಬಂಧ ಕೇವಲ 10 ತಿಂಗಳಿನಲ್ಲಿ ಮುರಿದು ಬಿತ್ತು. ಈಗ ಅವರು 45 ವರ್ಷದ ಬುಷ್ರಾ ಮನೆಕಾ ಅವರನ್ನು ಮದುವೆ ಆಗಿದ್ದಾರೆ.
ಬುಷ್ರಾ ಕೂಡ ವಿಚ್ಛೇಧಿತೆಯಾಗಿದ್ದು, ಅವರು ಈ ಮುಂಚೆ ಖವಾರ್ ಫರಿದ್ ಮನೆಕಾ ಎಂಬುವರನ್ನು ಮದುವೆ ಆಗಿದ್ದರು.












Click it and Unblock the Notifications