ಭಾರತದ ಶತ್ರು ದೇಶದಲ್ಲಿ ಚುನಾವಣೆಗೆ ಮುನ್ನ ರಕ್ತಪಾತ!
ಇನ್ನೇನು ಪಾಪಿ ಪಾಕಿಸ್ತಾನದಲ್ಲಿ ಚುನಾವಣೆ ಎದುರಾಗಲಿದೆ ಹೀಗಿದ್ದಾಗ ಪಾಕಿಸ್ತಾನ ನಲುಗಿ ಹೋಗಿದೆ. ಅದರಲ್ಲೂ ಪಾಕಿಸ್ತಾನ ಉಗ್ರರ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದಿದೆ. ಈ ದೇಶದಲ್ಲೀಗ, ಸಾಮಾನ್ಯ ಜನಗಳು ಜೀವ ಉಳಿಸಿಕೊಂಡರೆ ಸಾಕಪ್ಪಾ ಎನ್ನುವ ರೀತಿ ಬದುಕುವಾಗ, ಮತ್ತೆ ಬಾಂಬ್ ಸದ್ದು ಮೊಳಗಿದೆ. ಈ ಮೂಲಕ ಚುನಾವಣೆಗೆ ಮೊದಲು ಭಾರತದ ಶತ್ರು ದೇಶದಲ್ಲಿ ರಕ್ತ ಸಿಂಚನವಾಗಿದೆ.
ಹೌದು, ಪಾಕಿಸ್ತಾನದ ಬಲೂಚಿಸ್ತಾನದ ಹಲವು ಭಾಗದಲ್ಲಿ 10 ಬಾಂಬ್ ಸ್ಫೋಟ & ಗ್ರೆನೇಡ್‌ನ ದಾಳಿ ನಡೆದಿದೆ. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿ ಆಗಿದೆ. ಹೀಗೆ ಪಾಕಿಸ್ತಾನದ ಚುನಾವಣೆಗೆ ಮೊದಲು ರಕ್ತಪಾತ ಜೋರಾಗಿದೆ. ಪೊಲೀಸ್ ಠಾಣೆ ಸೇರಿ ಡೆಪ್ಯುಟಿ ಕಮಿಷನರ್ ಕಚೇರಿ ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂದು ಆರೋಪ ಮಾಡಲಾಗಿದ್ದು, ಈ ಮೂಲಕ ಪಾಕಿಸ್ತಾನದಲ್ಲಿ ಹೊಸ ಕಿಚ್ಚು ಹೊತ್ತಿಕೊಂಡಿದೆ. ಹಾಗೇ ಚುನಾವಣೆಗೆ ಮೊದಲು ಭಾರತದ ಶತ್ರು ದೇಶದಲ್ಲಿ ಬೆಂಕಿ ಹೊತ್ತಿದೆ.

ಉಗ್ರರ ದಾಳಿಗೆ ಎಷ್ಟು ಬಲಿ?
ಅಂದಹಾಗೆ ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿ & ಜೈಲಿನ ವಾರ್ಡನ್ ಸೇರಿ ಒಟ್ಟು 6 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಫೆಬ್ರವರಿ 8ಕ್ಕೆ ಪಾಕಿಸ್ತಾನದ ಲೋಕಸಭೆ ಎಲೆಕ್ಷನ್ ನಡೆಯಲಿದೆ. ಹೀಗಾಗಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಶಾಂತಿ ಕಾಪಾಡಲು ಪಾಕಿಸ್ತಾನ ಭದ್ರತಾ ಸಿಬ್ಬಂದಿ ಪರದಾಟ ಮುಂದುವರಿದಿದೆ. ಈ ಮಧ್ಯೆ ಭೀಕರ ಘಟನೆ ನಡೆದಿದ್ದು ಜನರ ಮನಸ್ಸಿಗೆ ಆಘಾತ ನೀಡಿದೆ. ಹಾಗೇ ಇದು ಮತ್ತೊಂದು ಪರಿಸ್ಥಿತಿಗೆ ದಾರಿ ಮಾಡಿಕೊಡುವ ಭಯ ಈಗ ಆವರಿಸಿದೆ.
ಹೀಗೆ ಪಾಕಿಸ್ತಾನದ ನೆಲದಲ್ಲಿ ರಕ್ತಪಾತ ನಡೆಯುವ ಸಮಯದಲ್ಲೇ, ಪಾಕ್‌ನ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮೂರು ದಿನಗಳಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 24 ಉಗ್ರರು ಹೆಣವಾಗಿದ್ದಾರೆ. ಈ ಮೂಲಕ ಉಗ್ರರ ವಿರುದ್ಧ ಪಾಕಿಸ್ತಾನ ಸರ್ಕಾರ ರಣಕಹಳೆಯ ಮೊಳಗಿಸಿದೆ ಎನ್ನಲಾಗಿದೆ. ಆದರೂ ಇದೊಂದು ನಾಟಕ, ಪಾಕಿಸ್ತಾನ ಉಗ್ರರ ಪರವಾಗಿದೆ. ಈ ಕಾರಣಕ್ಕೆ ನಾಟಕ ಮಾಡುತ್ತಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ.
ಭಾರತದ ಶತ್ರು ಸ್ಥಿತಿ ಸೂಕ್ಷ್ಮ
ಪಾಕಿಸ್ತಾನ ಚುನಾವಣಾ ಆಯೋಗ ನಿರ್ಧಾರ ಮಾಡಿರುವಂತೆ ಫೆಬ್ರವರಿ 8ಕ್ಕೆ ಪಾಕ್‌ನ ಸಾರ್ವತ್ರಿಕ ಚುನಾವಣೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಇಡೀ ಪಾಕಿಸ್ತಾನ ಸಜ್ಜಾಗುತ್ತಿದೆ. ಅದರಲ್ಲೂ ಭಯೋತ್ಪಾದಕರ ತವರು ಎಂದು ಕರೆಯುವ, ಸೂಕ್ಷ್ಮ ಸ್ಥಿತಿಯಲ್ಲಿ ಇರುವ ಪಾಕಿಸ್ತಾನದ ಮೂಲೆ ಮೂಲೆಯಲ್ಲೂ ಭದ್ರತೆ ಹೆಚ್ಚಿಸಿದೆ. ಪಾಕಿಸ್ತಾನದಲ್ಲಿ ಒಟ್ಟು 90675 ಮತಗಟ್ಟೆ ಸ್ಥಾಪಿಸಲಾಗಿದೆ ಈ ಪೈಕಿ ಒಟ್ಟು 46 ಸಾವಿರ ಮತಗಟ್ಟೆ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.

ಅಲ್ಲದೆ ಪಾಕಿಸ್ತಾನ 46 ಸಾವಿರ ಸೂಕ್ಷ್ಮ ಮತಗಟ್ಟೆ ಪೈಕಿ 18 ಸಾವಿರ ಅತಿ ಸೂಕ್ಷ್ಮ ಮತಗಟ್ಟೆಗಳು ಇವೆ ಅಂದ್ರೆ ಪರಿಸ್ಥಿತಿ ಹೇಗಿರಬೇಡ?. ಇನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ, 12,580 ಸೂಕ್ಷ್ಮ ಮತಗಟ್ಟೆಗಳಿವೆ. ಇವುಗಳಲ್ಲಿ 6 ಸಾವಿರ ಮತಗಟ್ಟೆ ಅತಿ ಸೂಕ್ಷ್ಮ ಎಂದು, ಪಾಕಿಸ್ತಾನದ ಚುನಾವಣಾ ಆಯೋಗ ಗುರುತಿಸಿದೆ. ಅಲ್ಲದೆ ಪಾಕ್‌ನ ಸಿಂಧ್ ಪ್ರಾಂತ್ಯದ, ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಇದೇ ಸಮಯದಲ್ಲಿ ಉಗ್ರರು ಕೂಡ ದಾಳಿಯನ್ನ ಮುಂದುವರಿಸಿದ್ದಾರೆ.












Click it and Unblock the Notifications