ಪಾಕ್ ನಲ್ಲಿ ಇಮ್ರಾನ್ ಖಾನ್ ಜಯ: ಕಿಚಡಿ ಸರ್ಕಾರ ಅನಿವಾರ್ಯ!
ಇಸ್ಲಾಮಾಬಾದ್, ಜುಲೈ 27: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟವಾಗಿದ್ದು, ಪಿಟಿಐ(ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್) ಪಕ್ಷದ ಮುಖಂಡ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.
ಪಿಟಿಐ ಪಕ್ಷ ಸಂಪೂರ್ಣ ಬಹುಮತ ಪಡೆಯದಿದ್ದರೂ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಪಕ್ಷೇತರರೊಂದಿಗೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ಇದೆ.
ಪಾಕಿಸ್ತಾನದ ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ.

ಇಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 172. ಈಗಾಗಲೇ 109 ಸ್ಥಾನಗಳಲ್ಲಿ ಜಯಗಳಿಸಿರುವ ಪಿಟಿಐ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತ. ಈ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳ ಬಗ್ಗೆ ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಪರಾಮರ್ಶಿಸುತ್ತಿದ್ದಾರೆ.












Click it and Unblock the Notifications