ಪುಲ್ವಾಮಾ ಉಗ್ರರ ದಾಳಿಗೂ ತನಗೂ ನಂಟಿಲ್ಲ ಎಂದ ಪಾಕಿಸ್ತಾನ

ಇಸ್ಲಾಮಾಬಾದ್, ಫೆಬ್ರವರಿ 15: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೂ ತನಗೂ ಸಂಬಂಧವಿಲ್ಲ ಎಂದು ಪಾಕಿಸ್ತಾನ ಹೇಳಿದೆ.

'ಇದೊಂದು ಅತ್ಯಂತ ಹೇಯಕೃತ್ಯ ಮತ್ತು ಗಂಭೀರವಾಗಿ ಚಿಂತಿಸಬೇಕಾದ ವಿಷಯ' ಎಂದಿರುವ ಪಾಕಿಸ್ತಾನ, ಈ ಘಟನೆಗೂ ನನಗೂ ನಂಟು ಕಲ್ಪಿಸಬೇಡಿ ಎಂದಿದೆ.

ಆದರೆ ಈ ಘಟನೆಯ ಹೊಣೆಯನ್ನು ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯೇ ಹೊತ್ತುಕೊಂಡಿದ್ದು, ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ಇದೇ ಸಂಘಟನೆಗೆ ಸೇರಿದವನಾಗಿದ್ದಾನೆ.

Pakistan denies link in Pulwama attack

ಆದರೂ ಪಾಕಿಸ್ತಾನ ತನ್ನ ಪಾತ್ರವಿಲ್ಲ, ತನಗೆ ನಂಟಿಲ್ಲ ಎನ್ನುತ್ತಿರುವು ಆಕ್ರೋಶಕ್ಕೆ ಕಾರಣವಾಗಿದೆ. 'ಕಳ್ಳ ಯಾವತ್ತಾದ್ರೂ ತಾನೇ ಕದ್ದಿದ್ದೀನಿ ಅಂತ ಒಪ್ಪಿಕೊಳ್ತಾನಾ?' ಎಂದು ಹಲವರು ಪಾಕಿಸ್ತಾನದ ನಡೆಯನ್ನು ಟೀಕಿಸಿದ್ದಾರೆ.

ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+