ಮೇ 30ರವರೆಗೂ ಭಾರತ ಪಾಕಿಸ್ತಾನ ನಡುವೆ ವಿಮಾನ ಹಾರಾಟವಿಲ್ಲ
ಲಾಹೋರ್, ಮೇ 16: ಭಾರತದಲ್ಲಿ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದು ಹೊಸ ಸರ್ಕಾರ ರಚನೆಯಾಗುವವರೆಗೂ ಭಾರತಕ್ಕೆ ವಿಮಾನ ಹಾರಾಟ ನಡೆಸದಿರಲು ಪಾಕಿಸ್ತಾನ ನಿರ್ಧರಿಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಫೆಬ್ರವರಿ 26ರಂದು ಜೈಷ್-ಎ-ಮೊಹಮ್ಮದ್ ಉಗ್ರರ ನೆಲೆ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಬಂಧ ದುರ್ಬಲಗೊಂಡಿತ್ತು. ಭಾರತಕ್ಕೆ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.
ಮಾರ್ಚ್ 27ರಂದು ದೆಹಲಿ, ಬ್ಯಾಂಕಾಕ್ ಹಾಗೂ ಕೌಲಾಲಂಪುರ್ ಹೊರತುಪಡಿಸಿ ವಿಮಾನ ಹಾರಾಟ ಉಳಿದೆಲ್ಲೆಡೆ ಆರಂಭಿಸಿತ್ತು.ಇದೀಗ ಭಾರತದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುವವರೆಗೂ ಅಂದರೆ ಮೇ 30ರವರೆಗೂ ಭಾರತಕ್ಕೆ ವಿಮಾನ ಹಾರಾಟವನ್ನು ನಿಷೇಧಿಸಿದೆ.

ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂಬಂಧದಲ್ಲಿ ಚೇತರಿಕೆ ಏನೂ ಕಂಡುಬಂದಿಲ್ಲ, ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗುತ್ತದೆ. ಬಳಿಕ ಯೋಚನೆ ಮಾಡೋಣ ಎಂದು ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಹಾದ್ ಚೌದರಿ ತಿಳಿಸಿದ್ದಾರೆ.
ಪಾಕಿಸ್ತಾನವು ಬ್ಯಾಂಕಾಕ್, ಕೌಲಾ ಲಂಪುರ್ ಗೆ ವಿಮಾನಯಾನ ನಿಷೇಧಿಸಿರುವುದಕ್ಕೆ ದಿನಕ್ಕೆ ಕೋಟಿಗಟ್ಟಲೆ ನಷ್ಟ ಉಂಟಾಗುತ್ತಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಕೌಲಾಲಂಪುರಕ್ಕೆ ನಾಲ್ಕು ವಿಮಾನ, ಬ್ಯಾಂಕಾಂಕ್‌ಗೆ ಎರಡು ಹಾಗೂ ನವದೆಹಲಿಗೆ 2 ವಿಮಾನ ಹಾರಾಟ ನಡೆಸುತ್ತಿತ್ತು.












Click it and Unblock the Notifications