ವಾಯುಪಡೆ ಕಮಾಂಡರ್ ಅನ್ನು ಹಿಡಿದಿಟ್ಟಿದ್ದೇವೆ ಎನ್ನುತ್ತಿದೆ ಪಾಕ್
ಇಸ್ಲಾಮಾಬಾದ್, ಫೆಬ್ರವರಿ 27: ಭಾರತ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರನ್ನು ಹಿಡಿದಿಟ್ಟಿರುವುದಾಗಿ ಪಾಕಿಸ್ತಾನ ಸೇನೆ ಹೇಳಿದೆ.
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೈನ್ಯವು ಹಿಡಿದಿಟ್ಟಿದ್ದಾಗಿ ಹೇಳಿದ್ದು, ಈ ಕುರಿತು ವಿಡಿಯೋ ಮತ್ತು ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಪಾಕ್ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಭಾರತೀಯ ವಾಯುಸೇನೆಯ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬನ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಆತ ತಾನು ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಎಂದು ಹೇಳುತ್ತಾರೆ.

ಈ ಮಾಹಿತಿ ಮತ್ತು ವಿಡಿಯೋವನ್ನು ಪಾಕಿಸ್ತಾನ ಸೇನೆಯ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸಿಫ್ ಗಫೂರ್ ಇಂದು ಬೆಳಿಗ್ಗೆ ಸಹ ಭಾರತೀಯ ವಾಯುಪಡೆಯ ಎರಡು ವಿಮಾನಗಳನ್ನು ಪಾಕ್ ಹೊಡೆದುರುಳಿಸಿದೆ ಎಂದು ಹೇಳಿದ್ದು, ಒಂದು ವಿಮಾನವು ಭಾರತೀಯ ಗಡಿಯಲ್ಲಿ ಬಿದ್ದಿದ್ದರೆ ಮತ್ತೊಂದು ಪಾಕಿಸ್ತಾನದ ಗಡಿಯಲ್ಲಿ ಬಿದ್ದಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ವಾಯುಪಡೆ ಮಾಡಿರುವ ಈ ಕಾರ್ಯಾಚರಣೆಗೆ ಗಡಿಯಲ್ಲಿ ಉದ್ರಿಕ್ತತೆ ಉಂಟು ಮಾಡಬೇಕೆಂಬ ಉದ್ದೇಶ ಇರಲಿಲ್ಲ ಬದಲಿಗೆ ನಾವು ಎದುರುತ್ತರ ನೀಡಬಲ್ಲೆವು ಎಂದು ತಿಳಿಸುವುದಾಗಿದೆ' ಎಂದು ಹೇಳಿದ್ದಾರೆ.












Click it and Unblock the Notifications