ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನೆ: ಅಫ್ಘಾನಿಸ್ತಾನ ಪ್ರವಾಸ ರದ್ದುಗೊಳಿಸಿದ ಪಾಕ್‌ನ ಭದ್ರತಾ ಸಲಹೆಗಾರ

|
Google Oneindia Kannada News

ಇಸ್ಲಾಮಾಬಾದ್, ಜನವರಿ 20: ಪ್ರತಿಭಟನೆಯಿಂದಾಗಿ ಅಫ್ಘಾನಿಸ್ತಾನದ ಪ್ರವಾಸವನ್ನು ಪಾಕಿಸ್ತಾನದ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಮುಂದೂಡಿದ್ದಾರೆ. ಯೂಸುಫ್ ಈ ವಾರ ನಿಯೋಗದೊಂದಿಗೆ ಕಾಬೂಲ್‌ಗೆ ಹೋಗಬೇಕಿತ್ತು.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಮೊಯೀದ್ ಅವರ ಭೇಟಿಯನ್ನು ಮುಂದೂಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಇಬ್ಬರು ಪಾಕಿಸ್ತಾನಿ ಪತ್ರಕರ್ತರು ಇಮ್ರಾನ್ ಸರ್ಕಾರದ ಹೇಳಿಕೆಯನ್ನು ಬುಡಮೇಲು ಮಾಡಿದ್ದಾರೆ.

ಹೆಣ್ಮಕ್ಕಳಿಗೆ ಶಿಕ್ಷಣ ನೀಡದಿರುವುದು ಅಫ್ಘಾನ್ ಸಂಸ್ಕೃತಿಯ ಭಾಗ:ಇಮ್ರಾನ್ಹೆಣ್ಮಕ್ಕಳಿಗೆ ಶಿಕ್ಷಣ ನೀಡದಿರುವುದು ಅಫ್ಘಾನ್ ಸಂಸ್ಕೃತಿಯ ಭಾಗ:ಇಮ್ರಾನ್

ಈ ಹಿಂದೆ ಮುಂದೂಡಿದ್ದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಅವರ ಅಫ್ಘಾನಿಸ್ತಾನ ಭೇಟಿಯನ್ನು ಈಗ ರದ್ದುಗೊಳಿಸಲಾಗಿದೆ.

Pak NSA Cancels Afghan Visit Amid Anti-Islamabad Protests, Says Report

ಪಾಕಿಸ್ತಾನ ಪ್ರವಾಸವನ್ನು ರದ್ದು ಮಾಡಿರುವುದಕ್ಕೆ ಅಫ್ಘಾನಿಸ್ತಾನದಲ್ಲಿ ಹವಾಮಾನ ಸರಿ ಇಲ್ಲ ಎಂಬ ಸಬೂಬು ಹೇಳಿದೆ. ಆದರೆ, ಪಾಕ್ ಸರಕಾರದ ಹೇಳಿಕೆ ಹಿಂದಿನ ಅಸಲಿ ಸತ್ಯವನ್ನು ಪತ್ರಕರ್ತರು ಈ ಮೂಲಕ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗಾಢ ಸಂಬಂಧ ಅಂತ್ಯವಾಗಿದೆ ಎಂದು ಇಬ್ಬರು ಪತ್ರಕರ್ತರು ವಿಶ್ಲೇಷಣೆ ಮಾಡಿದ್ದಾರೆ.

ಇಬ್ಬರು ಪಾಕಿಸ್ತಾನಿ ಪತ್ರಕರ್ತರಾದ ಕಮರ್ ಚೀಮಾ ಮತ್ತು ಫಖರ್ ಯೂಸುಫ್‌ ಜಾಯ್, ಇಮ್ರಾನ್ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದ ಸುಳ್ಳುಗಳ ಸರಮಾಲೆಯನ್ನೇ ಬಹಿರಂಗಪಡಿಸಿದ್ದಾರೆ. ಪತ್ರಕರ್ತರ ಪ್ರಕಾರ, "ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಸೋಮವಾರ ಕಾಬೂಲ್‌ಗೆ ಹೋಗಬೇಕಿತ್ತು.

ಇಸ್ಲಾಮಾಬಾದ್‌ನಿಂದ ಕಾಬೂಲ್ ತಲುಪಲು ಕೇವಲ 25 ನಿಮಿಷಗಳು ಬೇಕು. ಈ ವೇಳೆ ಮೋಯಿದ್ ಅವರು ಅಫ್ಘಾನ್ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ಅಲ್ಲಿನ ಪ್ರಜೆಗಳಿಗೆ ದೊರೆತಿದ್ದರಿಂದ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲು ಆರಂಭಿಸಿದ್ದಾರೆ.

Recommended Video

ICC U19 World Cup: U-19 ವಿಶ್ವಕಪ್‌ನಲ್ಲಿ ಭಾರತಕ್ಕೆ ಭಾರೀ ಆಘಾತ | Oneindia Kannada

ಈ ಎಲ್ಲ ಮಾಹಿತಿಗಳು ಪಾಕಿಸ್ತಾನದ ಭದ್ರತಾ ಸಲಹೆಗಾರ ಮೊಯೀದ್ ಅವರಿಗೆ ದೊರೆತಿದ್ದರಿಂದ ಈ ಸಂದರ್ಭದಲ್ಲಿ ಅಫ್ಘಾನ್ ಭೇಟಿ ಸರಿ ಅಲ್ಲ ಎಂದು ಅರಿತು, ಪಾಕಿಸ್ತಾನ ಪ್ರವಾಸವನ್ನು ರದ್ದು ಮಾಡಿದೆ ಎಂದು ತಿಳಿಸಿದ್ದಾರೆ.

English summary
Pakistan’s National Security Adviser Moeed Yusuf has cancelled his planned visit to Afghanistan in view of a planned anti-Pakistan protest in Kabul, according to a media report on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X