ಅಭಿನಂದನ್ ಬಿಡುಗಡೆ ಬಳಿಕ ಭಾರತ ಮತ್ತೆ ದಾಳಿ ಮಾಡಿದ್ರೆ? ಪಾಕ್ ಅಳಲು

ಇಸ್ಲಾಮಾಬಾದ್, ಮಾರ್ಚ್ 01:ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿದ ಬಳಿಕ ಭಾರತ ನಮ್ಮ ಮೇಲೆ ಮತ್ತೆ ಯುದ್ಧಕ್ಕೆ ಬಂದರೆ ಏನು ಗತಿ ಎಂದು ಪಾಕ್ ಶೇಖ್ ರಶೀದ್ ಅಹಮದ್ ಹೇಳಿದ್ದಾರೆ.
ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇಂದು ಮಧ್ಯಾಹ್ನ ಬಿಡುಗಡೆಗೊಳ್ಳಲಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ಸಚಿವ ಶೇಖ್ ರಶೀದ್ ಅಹಮದ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದ ಬಳಿಕ ಮತ್ತೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೆ ಏನು ಗತಿ ಎಂದು ಹೇಳಿದ್ದಾರೆ.
ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆ
ಭಾರತದ ವಾಯುಸೇನೆ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಪಾಕಿಸ್ತಾನ ಬಿಡುಗಡೆಗೊಳಿಸುತ್ತಿದ್ದು ವಾಘಾ ಗಡಿ ಸೇರಿ ದೇಶಾದ್ಯಂತ ಅವರ ಸ್ವಾಗತಕ್ಕೆ ಸಂಭ್ರಮದಿಂದ ಎದುರು ನೋಡುತ್ತಿದೆ.
ಆದರೆ ಪಾಕಿಸ್ತಾನ ಸಚಿವ ಶೇಖ್ ರಶೀದ್ ಅಹಮ್ಮದ್ ಮಾತ್ರ ಅಭಿನಂದನ್ ಅವರನ್ನು ಭಾರತಕ್ಕೆ ಮರಳಿಸುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಒಂದೊಮ್ಮೆ ಅಭಿನಂದನ್ ಅವರನ್ನು ಭಾರತಕ್ಕೆ ಹಿಂದಿರುಗಿಸಿದರೆ ಅದರ ಬೆನ್ನಲ್ಲೇ ಭಾರತ ಮತ್ತೆ ದೊಡ್ಡ ದಾಳಿ ನಡೆಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ" ಅವರು ಹೇಳಿದ್ದಾರೆ.
ಭಾರತದ ಗಡಿಯ ಮೇಲೆ ದಾಳಿ ಮಾಡಲು ಯತ್ನಿಸಿದ ಪಾಕ್ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಭರದಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕ್ ಗಡಿ ಪ್ರವೇಶಿಸಿದರು. ಅವರ ಮಿಗ್ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೆಳಗುರುಳಿದ ಪರಿಣಾಮ ಅವರು ಪಾಕ್ ಸೈನ್ಯದ ಕೈಗೆ ಸಿಕ್ಕಿ ಬಿದ್ದಿದ್ದರು.
ಅತ್ತ ಗಡಿಯಲ್ಲಿ ಪರದಾಟ, ಇತ್ತ ಮೋದಿ ಪ್ರಚಾರ: ಟ್ವಿಟ್ಟರ್ ನಲ್ಲಿ ಲೇವಡಿ
ಅವಾಮಿ ಮುಸ್ಲಿಮ್ ಲೀಗ್ ಮುಖಂಡರಾಗಿರುವ ಅಹಮ್ಮದ್ ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿ "ಇದು ವಾಜಪೇಯಿಯವರ ಕಾಲವಲ್ಲ, ಮೋದಿ ವಿಭಿನ್ನ ಯೋಚನೆ ಲಹರಿಯುಳ್ಳ ವ್ಯಕ್ತಿ.ಮೋದಿ ಭಾರತದ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ದಾಳಿ ನಡೆಸಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ ನಾವೇನಾದರೂ ಭಾರತದ ಐಎ ಎಫ್ ಪೈಲಟ್ ಅವರನ್ನು ಹಿಂದಕ್ಕೆ ಕಳಿಸಿದ ಬಳಿಕ ಭಾರತ ಮತ್ತೆ ದಾಳಿ ನಡೆಸಿದರೆ ನಮ್ಮ ಗತಿ ಏನು? ಅಲ್ಲಿ ಮೋದಿ ಇದ್ದಾರೆ. ನಾಳೆ ಮತ್ತೆ ದಾಳಿಯಾದರೆ ನಾವೇನು ಮಾಡೋಣ?" ಅವರು ಪ್ರಶ್ನಿಸಿದ್ದಾರೆ.
ಪಾಕ್ ರೈಲ್ವೆ ಸಚಿವರು ಭಾರತದ ದಾಳಿಯ ಹಿನ್ನೆಲೆಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಮಾತನಾಡಿದ್ದಾರೆ.

ಫೆಬ್ರವರಿ 27ರಿಂದ ಪಾಕ್ ವಶದಲ್ಲಿದ್ದ ಅಭಿನಂದನ್
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಿಂದ ಪಾಕ್ ವಶದಲ್ಲಿದ್ದರು. ಭಾರತೀಯರು ಸಹ ಅವರ ಸುರಕ್ಷಿತ ವಾಪಸ್ಸಾತಿಗೆ ಪ್ರಾರ್ಥಿಸಿದ್ದರು. ಕೆಲವು ಪಾಕಿಸ್ತಾನಿಯರು ಸಹ ಅಭಿನಂದನ್ ಅವರನ್ನು ಮರಳಿ ಕಳುಹಿಸಬೇಕು ಎಂದು ಒತ್ತಾಯಿಸಿದ್ದರು.

ಪಾಕ್ ಅಭಿನಂದನ್ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣ
ಶಾಂತಿ ಮಾತುಕತೆಗೆ ತುದಿಗಾಲಲ್ಲಿ ನಿಂತಿರುವ ಪಾಕಿಸ್ತಾನವು ಶಾಂತಿ ಸೂಚಕವಾಗಿ ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತಿದೆ. ಇದನ್ನು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು ಎಂದೇ ಕರೆಯಲಾಗುತ್ತಿದೆ. ಆದರೂ ಅಭಿನಂದನ್ ಅವರ ಬಿಡುಗಡೆಯನ್ನು ಏನಾದರೂ ನಿಧಾನ ಮಾಡಲಾಗುತ್ತಿದೆಯೇ ಎನ್ನುವ ಅನುಮಾನವೂ ಒಂದೆಡೆ ಕಾಡುತ್ತಿದೆ.

ಭಾರತದಿಂದ ಅಭಿನಂದನ್ ಬಿಡುಗಡೆಗಾಗಿ ಒತ್ತಡ
ಸೆರೆಯಲ್ಲಿರುವ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಹಾಗೂ ಶೀಘ್ರವಾಗಿ ವಾಪಸ್ ಕಳಿಹಿಸುವಂತೆ ಭಾರತವು ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಲೇ ಇತ್ತು. ಪಾಕಿಸ್ತಾನದ ರಾಯಭಾರಿಯೊಂದಿಗೆ ವಿದೇಶಾಂಗ ಇಲಾಖೆ ಸಂಪರ್ಕ ಮಾಡಿ ಅಭಿನಂದನ್ ಬಿಡುಗಡೆಗೆ ಒತ್ತಾಯ ಮಾಡಿತ್ತು.

ಭಾರತ ಮತ್ತೆ ಯುದ್ಧ ಮಾಡಿದ್ರೆ ಎಂದು ಪಾಕಿಸ್ತಾನಕ್ಕೆ ಭಯ
ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿದ ಬಳಿಕ ಭಾರತ ನಮ್ಮ ಮೇಲೆ ಮತ್ತೆ ಯುದ್ಧಕ್ಕೆ ಬಂದರೆ ಏನು ಗತಿ ಎಂದು ಪಾಕ್ ಶೇಖ್ ರಶೀದ್ ಅಹಮದ್ ಹೇಳಿದ್ದಾರೆ.