ಬೆಂಗಳೂರಿಗರಿಗೆ ನಿರಾಸೆ; ಮೇನಲ್ಲಿ ಪಿಂಕ್ ಲೈನ್ ಮೆಟ್ರೋ ಆರಂಭ ಡೌಟು, ವಿಳಂಕ್ಕೆ ಕಾರಣಗಳೇನು?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಹುನಿರೀಕ್ಷೆಯ ನಮ್ಮ ಮೆಟ್ರೋ ಗುಲಾಬಿ ಮಾರ್ಗದ (Metro Pink Line) ಮೊದಲ ಹಂತದ ಏಳು ಕಿಲೋ ಮೀಟರ್ ಮಾರ್ಗವನ್ನು ಮೇ ತಿಂಗಳಲ್ಲಿ ತೆರೆಯುವುದು ಶೇ. 100ರಷ್ಟು ಅನುಮಾನ, ಸುಮಾರು ಎರಡೂವರೆ ತಿಂಗಳು ವಿಳಂಬವಾಗಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.
ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಒಟ್ಟು 21.15 ಕಿಲೋ ಮೀಟರ್ ಗುಲಾಬಿ ಮಾರ್ಗದ ಪೈಕಿ ಇದೇ ಮೇ ತಿಂಗಳಲ್ಲಿ 7.5ಕಿಲೋ ಮೀಟರ್ ಉದ್ದದ ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗವನ್ನು ತೆರೆಯಲು ಪ್ಲ್ಯಾನ್ ಮಾಡಲಾಗಿತ್ತು. ಈ ಸಂಬಂಧ ಡ್ರವೈರ್‌ಲೆಸ್ ರೈಲುಗಳು ಬಂದಿದ್ದು, ಅವುಗಳ ಶಾಸನಬದ್ಧ ತಪಾಸಣೆ ಆರಂಭವಾಗಿತ್ತು. ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (RDSO) ಪಿಂಕ್ ಮಾರ್ಗದಲ್ಲಿ ನಡೆಸಿದ್ದ ಎಲ್ಲ ಪ್ರಯೋಗ, ಪರೀಕ್ಷೆಗಳು ಮೇ 09ರಂದು ಪೂರ್ಣಗೊಂಡಿದೆ.

ವಿಳಂಬವೇಕೆ? ಆಗಸ್ಟ್ 15ರೊಳಗೆ ಪಿಂಕ್ ಲೈನ್ ಓಪನ್
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಇದೇ ತಿಂಗಳಲ್ಲಿ ಮೊದಲ ಹಂತ, ಡಿಸೆಂಬರ್ 2026ರಲ್ಲಿ ಎರಡನೇ ಹಂತ ತೆಗೆಯಲು ಪ್ಲ್ಯಾನ್ ಮಾಡಿಕೊಂಡಿತ್ತು. ಇತ್ತೀಚೆಗಷ್ಟೆ ಪಿಂಕ್ ರೈಲುಗಳ ಮುಗಿದಿದ್ದು, ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಅನುಮತಿ ಪಡೆಯುವುದು ಬಾಕಿದೆ ಇದೆ. ಅವರಿಂದ ಅನುಮೋದನೆ ಪಡೆದು ಆಗಸ್ಟ್ 15 ರೊಳಗಾಗಿ ಹೊಸ ಮಾರ್ಗ ತೆರೆಯಲು ಚಿಂತನೆ ಇದೆ. ಹೀಗಾಗಿ ನಿಗದಿತ ಸಮಯಕ್ಕೆ ಪಿಂಕ್ ಮಾರ್ಗ ತೆರೆಯುವುದು ವಿಳಂಬವಾಗುತ್ತಿದೆ. ಇನ್ನೊಂದು ಕಡೆ ಜೂನ್ ಅಂತ್ಯಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಯಲಿದ್ದು, ಅದಕ್ಕು ಮುನ್ನವೇ ಪಿಂಕ್ ಲೈನ್ ತೆರೆಯುವ ಪ್ರಯತ್ನವು ನಡೆದಿದೆ.
RDSO ನಡೆಸಲಾದ ಮೆಟ್ರೋ ತಪಾಸಣೆಗಳಿವು
ಹೊಸ ಡ್ರೈವರ್‍ಲೆಸ್ ಪಿಂಕ್ ಲೈನ್ ಮೆಟ್ರೋಗಳ ಬ್ರೇಕಿಂಗ್ ವ್ಯವಸ್ಥೆಗಳ ಪರೀಕ್ಷೆ, ಎಳೆತ, ವಿಭಿನ್ನ ವೇಗದಲ್ಲಿ ಸಂಚಾರ ಪರೀಕ್ಷೆ ಮತ್ತು ಸಿಗ್ನಲಿಂಗ್ ತಪಾಸಣೆ, ವಿದ್ಯುತ್ ಹರಿವು, ದೂರಸಂಪರ್ಕ ವ್ಯವಸ್ಥೆಗಳೊಂದಿಗೆ ಏಕೀಕರಣ ಸೇರಿ ಅನೇಕ ಪರೀಕ್ಷೆಗಳನ್ನು ನಡೆಸಲಾಗಿದೆ. ಮೆಟ್ರೋ ಸೇವೆಗಳು ಜೂನ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದ್ದರೂ, ಬಾಕಿ ಇರುವ ನಿಲ್ದಾಣದ ಕೆಲಸ, ಡಿಪೋ ಕೆಲಸ ಮತ್ತು ಸಿಬ್ಬಂದಿ ಯೋಜನೆಯಿಂದ ಆಗಬೇಕಿದೆ. ಹೀಗಾಗಿ ಮಾರ್ಗ ಲೋಕಾರ್ಪಣೆ ವಿಳಂವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
16 ರೈಲು ಸಂಚಾರ, ಎರಡನೇ ಹಂತ ಕಾಮಗಾರಿ 2027ಕ್ಕೆ ಓಪನ್
ಪಿಂಕ್ ಲೈನ್ ಎರಡನೇ ಹಂತದ 13 ಕಿಮೀಗೂ ಅಧಿಕ ಮಾರ್ಗವು ಸಂಪೂರ್ಣ ಭೂಗತದಲ್ಲಿ ನಿರ್ಮಿಸಲಾಗಿದೆ. ನಿರ್ಮಾಣ ಕೆಲಸಗಳು ಅಂತಿಮ ಹಂತಕ್ಕೆ ಬಂದಿವೆ. ಡಿಸೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ಸರಬರಾಜು ಆಗುವ ಪಿಂಕ್ ಡ್ರೈವರ್‍ಲೆಸ್ ರೈಲುಗಳ ಅಗತ್ಯ ಶಾಸನಬದ್ಧ ತಪಾಸಣೆಗಳು ನಡೆಯಲಿವೆ. ಈ ಮಾರ್ಗವು 2027ರ ಆರಂಭದಲ್ಲಿ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ. ಈ ಒಟ್ಟಾರೆ 21 ಕಿಲೋ ಮೀಟರ್ ಸಂಪೂರ್ಣ ಮಾರ್ಗದಲ್ಲಿ 16ಡ್ರೈವರ್ ಲೆಸ್ ರೈಲುಗಳ ಸಂಚಾರ ಮಾಡಲು ಮೆಟ್ರೋ ಅಧಿಕಾರಿಗಳು ನಿರ್ಧರಿಸಿದ್ದಾರೆ.













Click it and Unblock the Notifications