ಬೆಂಗಳೂರಿಗೆ Tesla ಗ್ರ್ಯಾಂಡ್ ಎಂಟ್ರಿ; 681 ಕಿಮೀ ರೇಂಜ್‌ನ ಮಾಡೆಲ್ ವೈಎಲ್ ಕಾರು ಅನಾವರಣ

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿನ ಐಟಿ ಹಬ್ ವೈಟ್‌ಫೀಲ್ಡ್‌ನಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ (Tesla) ತನ್ನ ಚೊಚ್ಚಲ 'ಎಕ್ಸ್‌ಪೀರಿಯೆನ್ಸ್ ಸೆಂಟರ್' ಅನ್ನು ಇಂದು ಗುರುವಾರ ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದ ವಾಹನ ಪ್ರಿಯರಿಗೆ ಟೆಸ್ಲಾ ಕಾರುಗಳ ಭವ್ಯ ಅನುಭವವನ್ನು ನೇರವಾಗಿ ಒದಗಿಸಲಿದೆ. ಬಹುನಿರೀಕ್ಷಿತ ಆರು ಸೀಟು ಸಾಮರ್ಥ್ಯದ ಹೊಸ ಟೆಸ್ಲಾ 'ಮಾಡೆಲ್ ವೈಎಲ್' ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ವಾಹನಗಳ ಸಾಲಿನಲ್ಲಿರುವ ಮಾಡೆಲ್ ವೈ ಆರಂಭಿಕ ಬೆಲೆ 61.99 ಲಕ್ಷ ರೂ.ಗಳಾಗಿದೆ. ಈ ಹೊಸ ಮಾಡೆಲ್ ವೈಎಲ್ ಅನ್ನು ಗ್ರಾಹಕರು ಇಂದಿನಿಂದ ಇಲ್ಲಿ ವೀಕ್ಷಿಸಬಹುದಾಗಿದೆ. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಒಲವನ್ನು ಗಮನದಲ್ಲಿಟ್ಟುಕೊಂಡು, ಟೆಸ್ಲಾ ಕಂಪನಿಯು ವೈಟ್‌ಫೀಲ್ಡ್‌ನಲ್ಲಿ ಮಾರಾಟದ ನಂತರದ ಸೇವಾ ಕೇಂದ್ರವನ್ನೂ ಆರಂಭಿಸುವುದಾಗಿ ಪ್ರಕಟಿಸಿದೆ. ಇದು ಬೆಂಗಳೂರಿನ ಕಾರು ಪ್ರಿಯರಿಗೆ ಶುಭಸುದ್ದಿ ಸಿಕ್ಕಂತಾಗಿದೆ.

Tesla

ಕಣ್ಮನ ಸೆಳೆದ ಹೊಸ ಮಾಡೆಲ್ ವೈಎಲ್

ಕುಟುಂಬ ಸಮೇತರಾಗಿ ಪ್ರಯಾಣ ಮಾಡಲು ಹೇಳಿ ಮಾಡಿಸಿದಂತಿರುವ ಈ ಎಸ್‌ಯುವಿ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 681 ಕಿ.ಮೀವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಕೇವಲ 5.0 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದೆ. 2,539 ಲೀಟರ್‌ಗಳಷ್ಟು ವಿಶಾಲವಾದ ಕಾರ್ಗೋ ಸ್ಪೇಸ್ ಹೊಂದಿದೆ. ಇದರ 3 ಸಾಲಿನ ವಿನ್ಯಾಸವು ಪ್ರಯಾಣಿಕರಿಗೆ ಆರಾಮದಾಯಕ ಹೆಡ್‌ರೂಮ್ ಮತ್ತು ಲೆಗ್‌ರೂಮ್ ಒದಗಿಸಿ, ವಿಶಿಷ್ಟ ಪ್ರಯಾಣದ ಅನುಭವವನ್ನು ನೀಡುತ್ತದೆ.

Vande Bharat Express: ಬೆಂಗಳೂರು-ತಿರುಪತಿ ಪ್ರಯಾಣಿಕರಿಗೆ ಗುಡ್‌ನ್ಯೂಸ್, ಹೊಸ ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ
Vande Bharat Express: ಬೆಂಗಳೂರು-ತಿರುಪತಿ ಪ್ರಯಾಣಿಕರಿಗೆ ಗುಡ್‌ನ್ಯೂಸ್, ಹೊಸ ವಂದೇ ಭಾರತ್ ರೈಲಿನ ವೇಳಾಪಟ್ಟಿ ಹೀಗಿದೆ

ಅತ್ಯಾಧುನಿಕ ಸುರಕ್ಷತೆ ಮತ್ತು ಸೂಪರ್ ಚಾರ್ಜಿಂಗ್

ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಮಾಡೆಲ್ ವೈಎಲ್, ಜಾಗತಿಕ ಮಟ್ಟದಲ್ಲಿ ಎನ್‌ಎಚ್‌ಟಿಎಸ್‌ಎ (NHTSA), ಯೂರೋ ಎನ್‌ಸಿಎಪಿ, ಮತ್ತು ಎಎನ್‌ಸಿಎಪಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಂದ ಅತಿ ಹೆಚ್ಚಿನ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬರೀ 15 ನಿಮಿಷ ಚಾರ್ಜಿಂಗ್‌ಗೆ 288 ಕಿಮೀ ಕ್ರಮಿಸಿ

ಟೆಸ್ಲಾ ಸೂಪರ್‌ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಕೇವಲ 15 ನಿಮಿಷಗಳ ಚಾರ್ಜಿಂಗ್‌ನಿಂದ 288 ಕಿ.ಮೀ ಕ್ರಮಿಸಬಹುದಾಗಿದೆ. "ಪ್ಲಗ್ ಇನ್, ಚಾರ್ಜ್ ಅಂಡ್ ಗೋ" ಪರಿಕಲ್ಪನೆಯೊಂದಿಗೆ ದೂರದ ಪ್ರಯಾಣವನ್ನು ಇದು ಸುಲಭಗೊಳಿಸಲಿದೆ. ಭಾರತದಲ್ಲಿ ಮನೆಗಳಲ್ಲಿಯೇ ಚಾರ್ಜ್ ಮಾಡಿಕೊಳ್ಳುವ ಸೌಲಭ್ಯ ಒದಗಿಸುತ್ತಿದೆ.

BWSSB: ಬೆಂಗಳೂರು ವಾಹನ ಸವಾರರಿಗೆ ಗುಡ್‌ನ್ಯೂಸ್: ರೊಬೋಟಿಕ್ ತಂತ್ರಜ್ಞಾನದ ಕೊಡುಗೆ
BWSSB: ಬೆಂಗಳೂರು ವಾಹನ ಸವಾರರಿಗೆ ಗುಡ್‌ನ್ಯೂಸ್: ರೊಬೋಟಿಕ್ ತಂತ್ರಜ್ಞಾನದ ಕೊಡುಗೆ

ಗ್ರಾಹಕರು ಮಹದೇವಪುರ, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ 'ವಿಆರ್ ಬೆಂಗಳೂರು' ಮಾಲ್‌ನಲ್ಲಿರುವ ಟೆಸ್ಲಾ ಕೇಂದ್ರಕ್ಕೆ ಭೇಟಿ ನೀಡಿ ಕಾರಿನ ಪ್ರತ್ಯಕ್ಷ ಅನುಭವ ಪಡೆದುಕೊಳ್ಳಬಹುದು. ಬೆಂಗಳೂರಿನ ಜೊತೆಗೆ ಮುಂಬೈ, ದೆಹಲಿ ಮತ್ತು ಗುರುಗ್ರಾಮದಲ್ಲೂ ಟೆಸ್ಲಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+