ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ವೈದ್ಯನ ಉಪವಾಸ ಸತ್ಯಾಗ್ರಹ

|
Google Oneindia Kannada News

ಇಸ್ಲಾಮಾಬಾದ್​, ಮಾರ್ಚ್ 2: ಪಾಕಿಸ್ತಾನದಲ್ಲಿ ನಕಲಿ ಹೆಪಟೈಟಿಸ್ ಲಸಿಕೆ ಕಾರ್ಯಕ್ರಮವನ್ನು ನಡೆಸಲು ಸಿಐಎಗೆ ಸಹಾಯ ಮಾಡಿದ ಪಾಕಿಸ್ತಾನಿ ವೈದ್ಯ ಶಕೀಲ್ ಅಫ್ರಿದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

Recommended Video

Tejasvi Surya Exclusive interview part 2 | Tejasvi Surya | Oneindia Kannada

ಪಾಕಿಸ್ತಾನದಲ್ಲಿ ಬಚ್ಚಿಟ್ಟುಕೊಂಡಿದ್ದ ಒಸಾಮಾ ಬಿನ್ ಲಾಡೆನ್​ನನ್ನು ಪತ್ತೆಹಚ್ಚಲು ಮತ್ತು ಕೊಲ್ಲಲು ಸಿಐಎಗೆ ಸಹಾಯ ಮಾಡಿದ ಪಾಕಿಸ್ತಾನಿ ವೈದ್ಯ ಈಗ ಜೈಲಿನಲ್ಲಿದ್ದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ ಎಂದು ಅವರ ವಕೀಲ ಮತ್ತು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಒಸಾಮಾ ಬಿನ್ ಲಾಡೆನ್ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುವ ಮೂಲಕ ಅಲ್ಲಿ ಅಲ್​ಖೈದಾ ಉಗ್ರ ಬಚ್ಚಿಟ್ಟುಕೊಂಡಿರುವುದನ್ನು ಸಿಐಎಗೆ ಖಚಿತಪಡಿಸಿದ್ದ. ನಂತರ ಅಲ್​ ಖೈದಾ ಮುಖ್ಯಸ್ಥ ಒಸಾಮಾ ಬಿನ್​ ಲಾಡೆನ್​ 2011ರಲ್ಲಿ ಅಮೆರಿಕ ಏಜೆಂಟರ ಬಲೆಗೆ ಬಿದ್ದಿದ್ದ.

Bin Laden

ಶಕೀಲ್​ ಅಫ್ರಿದಿ 2012ರ ಮೇ ತಿಂಗಳಲ್ಲಿ 33 ವರ್ಷಗಳ ಜೈಲು ವಾಸದ ಶಿಕ್ಷೆಗೆ ಗುರಿಯಾಗಿದ್ದ. ಆತ ಉಗ್ರ ಜತೆ ಸಂಬಂಧ ಇಟ್ಟುಕೊಂಡಿದ್ದ ಆಧಾರದ ಮೇಲೆ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಆತ ಇದು ಸುಳ್ಳು ಎಂದು ಸಾಧಿಸುತ್ತಲೇ ಬಂದಿದ್ದ. ನಂತರ ಆತನಿಗೆ 10 ವರ್ಷ ಶಿಕ್ಷೆ ಕಡಿತಗೊಳಿಸಲಾಗಿತ್ತು.

ಒಸಾಮಾ ಬಿನ್ ಲಾಡೆನ್ ಮರಣೋತ್ತರ ಪರೀಕ್ಷೆ ಫಲಿತಾಂಶ

ಮಧ್ಯ ಪಂಜಾಬ್​ ಪ್ರಾಂತ್ಯದ ಜೈಲಿನಲ್ಲಿ ಶಕೀಲ್​ನನ್ನು ಭೇಟಿಯಾದ ಅವನ ಸಹೋದರ ಜಮೀಲ್​ ಅಫ್ರಿದಿ, ತನ್ನ ಹಾಗೂ ತನ್ನ ಕುಟುಂಬದ ಮೇಲೆ ನಡೆಯುತ್ತಿರುವ ಅನ್ಯಾಯ ಮತ್ತು ಅಮಾನವೀಯ ವರ್ತನೆಗಳ ವಿರುದ್ಧ ತನ್ನ ಅಣ್ಣ ಪ್ರತಿಭಟನೆ ನಡೆಸುತ್ತಿದ್ದಾನೆ ಎಂದು ತಿಳಿಸಿದ್ದಾನೆ.

ಒಸಾಮಾ ಬಿನ್​ ಲಾಡೆನ್​ ಈತ ನೀಡಿದ್ದ ವೈದ್ಯಕೀಯ ಸಹಾಯವನ್ನು ಯುಎಸ್​ ಅಧಿಕಾರಿಗಳು ಸಾಬೀತು ಪಡಿಸಿದ್ದರು. ಆದರೆ ಲಾಡೆನ್​ನ ಹತ್ಯೆಯಿಂದ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿತ್ತು.

English summary
The Pakistani doctor who helped the CIA track and kill Osama bin Laden has launched a hunger strike from his prison cell, his lawyer and family said Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X