ಆಕ್ಸ್ ಫರ್ಡ್ ನಿಘಂಟಿಗೆ ಹೊಸ 'ಲಿಂಗ ಸೂಚಕ' ಸೇರ್ಪಡೆ
ಲಂಡನ್, ಮೇ. 4: ಆಕ್ಸ್ ಫರ್ಡ್ ನಿಘಂಟಿಗೆ ಅಧಿಕೃತವಾಗಿ ಹೊಸದೊಂದು ಶಬ್ದ ಸೇರ್ಪಡೆಯಾಗುತ್ತಿದೆ. ಅರೇ ಇದರಲ್ಲೇನು ವಿಶೇಷ ಎಂದುಕೊಂಡೀರಾ? ಮುಂದೆ ಓದಿ.
'Mx' ಹೆಸರಿನ ಲಿಂಗ ಸೂಚಕ ಹೆಸರೊಂದು ಸೇರ್ಪಡೆಯಾಗುತ್ತಿದೆ. Mr, Mrs, Miss and Ms ಸಾಲಿಗೆ ಇದು ಸೇರಿಕೊಂಡು ಅಧಿಕೃತ ಮಾನ್ಯತೆ ಪಡೆದುಕೊಳ್ಳುತ್ತಿದೆ. ಲಿಂಗ ಬದಲಾವಣೆ ಮಾಡಿಕೊಂಡವರಿಗೆ 'Mx' ಅಧಿಕೃತ ಹೆಸರು ಇನ್ನು ಮುಂದೆ ದೊರೆಯಲಿದೆ.[ಹೊಸ ಮೈಲಿಗಲ್ಲು ದಾಟಿದ ಕನ್ನಡ ಮುಕ್ತ ಶಬ್ದಕೋಶ ವಿಕ್ಷನರಿ]

ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಬ್ರಿಟನ್ ನ ಸರ್ಕಾರಿ ಕಚೇರಿಗಳು, ಕೌನ್ಸಿಲ್, ಬ್ಯಾಂಕ್, ಮಾಲ್ ಗಳು ಮತ್ತು ಚಾಲನಾ ಪರವಾನಗಿ ಸೇರಿದಂತೆ ಎಲ್ಲ ಕಡೆ ಇನ್ನು ಮುಂದೆ 'Mx' ನ್ನು ಅಧಿಕೃತವಾಗಿ ಅಂಗೀಕಾರ ಮಾಡಿಕೊಳ್ಳಬೇಕಿದೆ.
ಆಂಗ್ಲ ಭಾಷೆ ಯಾವ ರೀತಿ ಜನರ ಭಾವನೆಗೆ ಬೆಲೆ ನೀಡುತ್ತದೆ ಎಂಬುದನ್ನು ಈ ಮೂಲಕ ಕಂಡುಕೊಳ್ಳಬಹುದಾಗಿದೆ. ಜನರು ಸಹ ಇದನ್ನು ಅಷ್ಟೇ ಮುಕ್ತವಾಗಿ ಸ್ವೀಕಾರ ಮಾಡಲಿದ್ದಾರೆ ಎಂದು ಆಕ್ಸ್ ಫರ್ಡ್ ನಿಘಂಟು ವಿಭಾಗದ ಅಸಿಸ್ಟಂಟ್ ಎಡಿಟರ್ ಜೋನಾಥನ್ ಡೆಟ್ ತಿಳಿಸಿದ್ದಾರೆ.[ಸಂಸ್ಕೃತವೆಲ್ಲೋ ಜರ್ಮನಿಯೆಲ್ಲೋ, ಏನಿದು ಸಂಬಂಧ?]
ಮೊಟ್ಟ ಮೊದಲ ಬಾರಿಗೆ ಅಂದರೆ 1977 ರಲ್ಲಿ ನ್ನು ಅಮೆರಿಕದ ಮ್ಯಾಗಜೀನ್ ವೊಂದರಲ್ಲಿ Mx ನ್ನು ಬಳಕೆ ಮಾಡಲಾಗಿತ್ತು. ಇನ್ನು ಮುಂದೆ ಇದೊಂದು ಲಿಂಗ ಸೂಚಕವಾಗಿ ಬಳಕೆಯಾಗಲಿದೆ.












Click it and Unblock the Notifications