ಘರ್ಜಿಸಿದ ಭಾರತ: ಪಾಕ್‌ ಜನ ಗೂಗಲ್‌ನಲ್ಲಿ ತಡಕಾಡಿದರು ಆ ಒಂದು ಪದ!

ಭಾರತೀಯ ಸೇನೆಯು ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದ ಮೇಲೆ ಗೂಗಲ್‌ನಲ್ಲಿ ಪಾಕಿಸ್ತಾನಿಗಳು ಏನು ಹುಡುಕಿದ್ದಾರೆ ಎನ್ನುವುದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಾರತವು ಮೊದಲಿನಿಂದಲೂ ಎಚ್ಚರಿಕೆಯ ಸಂದೇಶವನ್ನು ನೀಡುತ್ತಲ್ಲೇ ಬಂದಿದೆ. ಇದರ ಬೆನ್ನಲ್ಲೇ ಇದೀಗ ಭಾರೀ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದ್ದು. ಪಾಕ್‌ ಜನ ಭಯಭೀತರಾಗಿದ್ದಾರೆ. ಈ ದಾಳಿಯ ಬೆನ್ನಲ್ಲೇ ಪಾಕಿಗಳು ಏನು ಹುಡುಕಿದ್ದಾರೆ ಎನ್ನುವುದು ಭಾರೀ ವೈರಲ್ ಆಗುತ್ತಿದೆ.

ಭಾರತವು ಪಾಕ್‌ನ ಮೇಲೆ ಪ್ರತೀಕಾರವನ್ನು ತೆಗದುಕೊಳ್ಳುತ್ತಿದ್ದಂತೆಯೇ ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಭಾರತದ ಆ ಒಂದು ಪದವನ್ನು ಸಿಕ್ಕಾಪಟ್ಟೆ ಹುಡುಕಾಡಿದ್ದಾರೆ. ದೇಶದಲ್ಲಿ ಏನಾಗುತ್ತಿದೆ ಹಾಗೂ ಭಾರತವು ಏನು ಮಾಡಿದೆ ಎನ್ನುವುದನ್ನು ಪಾಕಿಸ್ತಾನಿ ಜನ ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನಿಗಳು ಸಿಂಧೂರ ಎಂದರೇನು ಅಂತ ಹುಡುಕಾಡಿದ್ದಾರೆ.

Operation Sindoor New Pakistanis fumbled on Google for that one word

ಭಾರತವು ಆಪರೇಷನ್‌ ಸಿಂಧೂರ ಎನ್ನುವ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಇದರ ಅರ್ಥ ಕುಂಕುಮ ಎಂದಾಗುತ್ತದೆ. ಭಾರತೀಯ ಮಹಿಳೆಯ ಸಿಂಧೂರವನ್ನು ತೆಗೆದವರಿಗೆ ಅದೇ ಹೆಸರಿನ ಪ್ರತ್ಯುತ್ತರ ನೀಡಲಾಗಿದೆ. ಪಾಕಿಸ್ತಾನಿಯರು ಗೂಗಲ್‌ನಲ್ಲಿ ಭಾರತದ ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಸರ್ಚ್ ಮಾಡಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಆಪರೇಷನ್ ಸಿಂಧೂರ್, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ಭಾರತದ ಕ್ಷಿಪಣಿ ದಾಳಿ ಡೀಟೆಲ್ಸ್‌, ಆಪರೇಷನ್ ಸಿಂಧೂರ್ ಎಂದರೇನು? ,ಬಿಳಿಧ್ವಜ, ಪಾಕಿಸ್ತಾನದ ಮೇಲೆ ಭಾರತದ ದಾಳಿ, ವಾಯುದಾಳಿ, ಏರ್‌ಸ್ಟ್ರೇಕ್ ಹಾಗೂ ಭಾರತೀಯ ಸೇನೆ ಎನ್ನುವುದು ಸೇರಿದಂತೆ ಹಲವು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಿರುವುದು ಭಾರೀ ಟ್ರೆಂಡ್ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಬೆಂಬಲ: ಇನ್ನು ಭಾರತೀಯ ಸೇನೆಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಭಾರತೀಯ ಸೇನೆಯ ಬಗ್ಗೆ ಹಾಗೂ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸೇನೆಯ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಅನ್ನು ಸಾವಿರಾರು ಜನ ರೀ ಪೋಸ್ಟ್‌ ಮಾಡಿ ಸಂಭ್ರಮಿಸಿದ್ದಾರೆ.

ಭಾರತೀಯ ಸೇನೆಯು #PahalgamTerrorAttack ಎನ್ನುವ ಹ್ಯಾಷ್ ಟ್ಯಾಗ್‌ ಬಳಸಿ ಪೋಸ್ಟ್‌ ಮಾಡಿತ್ತು. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಬೆನ್ನಲ್ಲೇ Justice is Served ಎಂದು ಪೋಸ್ಟ್‌ ಮಾಡಿತ್ತು. Jai Hind ಎಂದು ಹೇಳಲಾಗಿತ್ತು. ಇದನ್ನು ಸಾವಿರಾರು ಜನ ರೀಪೋಸ್ಟ್‌ ಮಾಡಿದ್ದಾರೆ.

Thank you for this 🔥 ಎಂದು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು. Most satisfying video on the internet today ಎಂದು ಕೆಲವರು ಪೋಸ್ಟ್‌ ಮಾಡಿದ್ದಾರೆ. ಮಾಕ್‌ ಡ್ರಿಲ್‌ ಮಾಡುತ್ತೇವೆ ಎಂದು ಹೇಳುತ್ತಲ್ಲೇ ಭಾರತ ಮೋಸ ಮಾಡಿದೆ ಎನ್ನುವ ಹಾಸ್ಯದ ಪೋಸ್ಟ್‌ಗಳು ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+