Operation Sindoor 2.0: ಇಡೀ ಪ್ರಪಂಚಕ್ಕೆ ತಿಳಿಯುವಂತೆ ಭಾರತದ ಮೇಲೆ ದಾಳಿ ಮಾಡಲಿದ್ದೇವೆ!
Operation Sindoor 2.0: ಮೇ 09: ಭಾರತ ಹಾಗೂ ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ಇನ್ನೇನು ಘೋಷಣೆ ಆಗೋಗಲಿದೆಯೇ ಎನ್ನುವ ಆತಂಕ ಹೆಚ್ಚಳವಾಗಿದೆ. ದೇಶದಾದ್ಯಂತ ಆತಂಕದ ವಾತಾವರಣವಿದೆ. ಮೇ 08 ತಡರಾತ್ರಿ ಭಾರೀ ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆ ಭಾರತ ಹಾಗೂ ಪಾಕಿಸ್ತಾನ ಸೇನೆ ಎರಡೂ ಕಡೆಗಳಿಂದಲೂ ನಡೆದಿದೆ. ಭಾರತದ ಮೇಲೆ ದಾಳಿ ಮಾಡಲು ಬಂದ ಪಾಕ್ ಸೇನೆಯ ಪ್ರಯತ್ನಗಳನ್ನು ಭಾರತೀಯ ಸೇನೆಯು ವಿಫಲಗೊಳಿಸಿದೆ. ಇಷ್ಟು ಮಾತ್ರವಲ್ಲ ಪಾಕಿಸ್ತಾನಕ್ಕೆ ನುಗ್ಗಿ ದಾಳಿ ಮಾಡುವಲ್ಲಿ ಭಾರತೀಯ ಸೇನೆಯು ಯಶಸ್ವಿಯಾಗಿದೆ. ಕಳೆದ 12 ಗಂಟೆಯ ಅವಧಿಯಲ್ಲಿ ಭಾರತ ಹಾಗೂ ಪಾಕ್‌ನ ನಡುವೆ ಎನೆಲ್ಲಾ ಬೆಳವಣಿಗೆ ಆಗಿದೆ ಎನ್ನುವ ಪ್ರಮುಖ ವಿವರ ಇಲ್ಲಿದೆ.
ಭಾರತದ ವಿವಿಧ ಪ್ರಮುಖ ನಗರಗಳ ಮೇಲೆ ಪಾಕಿಸ್ತಾನ ಸೇನೆಯು ಡ್ರೋನ್ ದಾಳಿ ಮಾಡಿದೆ. ಆದರೆ, ಈ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆಯು ಯಶಸ್ವಿಯಾಗಿದೆ. ನಾವಿನ್ನೂ ಭಾರತದ ಮೇಲೆ ದಾಳಿ ಮಾಡಿಲ್ಲ. ಒಂದೊಮ್ಮೆ ದಾಳಿ ಮಾಡಿದರೆ ಇಡೀ ವಿಶ್ವಕ್ಕೆ ದಾಳಿಯ ಸಂದೇಶ ತಿಳಿಯಲಿದೆ ಎಂದು ಪಾಕಿಸ್ತಾನ ಹೇಳಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಈ ಸಮಯದಲ್ಲಿ ಪಾಕ್ ನೀಡುತ್ತಿರುವ ಈ ಮಾರ್ಮಿಕ ಸಂದೇಶವನ್ನು ಭಾರತವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ನಿರಂತರವಾಗಿ ತಿರುಗೇಟು ನೀಡುತ್ತಲ್ಲೇ ಇದೆ.

ಭಾರತ & ಪಾಕ್ ಎರಡೂ ರಾಷ್ಟ್ರಗಳ ನಡುವೆ ಸ್ವಾತಂತ್ರ್ಯದ ನಂತರ ಸಂಘರ್ಷಗಳು ಏರ್ಪಟ್ಟ ಉದಾಹರಣೆಗಳು ಇವೆ. ಆದರೆ, ಪ್ರತಿ ಬಾರಿಯೂ ಭಾರತವೇ ಗೆದ್ದಿದೆ. ಇನ್ನು ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ನಗರಗಳಲ್ಲಿ ಸ್ಫೋಟ ಹಾಗೂ ಭಾರೀ ದೊಡ್ಡ ಮಟ್ಟದ ಸೈರಲ್ ಸದ್ದುಗಳು ಕೇಳಿ ಬಂದಿದ್ದು. ಈ ಭಾಗದ ಜನರಿಗೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಸೇರಿದಂತೆ ಹಲವು ಗಡಿ ಭಾಗದ ರಾಜ್ಯಗಳಲ್ಲಿ ವಿದ್ಯುತ್ ಕಡಿತ ಸೇರಿದಂತೆ ಜನ ಗುಂಪು ಸೇರದಂತೆ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗಿತ್ತು.
ಪಾಕ್‌ನಿಂದ ತಡರಾತ್ರಿ ಭಾರತದ ವಿವಿಧ ನಗರಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ದಾಳಿ ಮಾಡಲಾಗಿದೆ. ಈ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಇದನ್ನು ಪಾಕಿಸ್ತಾನದ ರಕ್ಷಣಾ ಸಚಿವ ನಿರಾಕರಿಸಿದ್ದು.. ಪಾಕಿಸ್ತಾನ ದಾಳಿ ಮಾಡಿದಾಗ ಅದು ಪ್ರಪಂಚಕ್ಕೇ ತಿಳಿಯುತ್ತದೆ ಎಂದಿದ್ದಾರೆ. ಪಾಕಿಸ್ತಾನವು ಭಾರತೀಯ ಸೇನೆಯು 25ಕ್ಕೂ ಹೆಚ್ಚು ಡ್ರೋನ್‌ಗಳನ್ನು ರಾತ್ರೋರಾತ್ರಿ ಹಾರಿಸಿದ್ದು ಅವುಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ. ಆದರೆ, ಪಾಕ್‌ಗೆ ಪ್ರತಿ ಹಂತದಲ್ಲೂ ಮುಜುಗರ ಎದುರಾಗಿದೆ.
ಭಾರತ 9 ಜಾಗಗಳ ಮೇಲೆ ಕ್ಷಿಪಣಿ ದಾಳಿ: ಇನ್ನು ಭಾರತದ 9 ಜಾಗಗಳಲ್ಲಿ ಪಾಕಿಸ್ತಾನವು ಕ್ಷಿಪಣಿ ದಾಳಿಯನ್ನು ಮಾಡಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಗುಂಡಿನ ದಾಳಿಯಿಂದಾಗಿ 31 ಜನ ಮೃತಪಟ್ಟಿದ್ದು, 51 ಜನ ಗಂಭೀರವಾಗಿ ಗಾಯಗೊಂಡಿರುವುದಾಗಿ ಪಾಕ್ ಹೇಳಿದೆ. ಭಾರತದಲ್ಲೂ ಪಾಕ್ ನಡೆಸಿರುವ ಶೆಲ್ ದಾಳಿಯಿಂದ 16ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications