ಆಘಾತಕಾರಿ ಸುದ್ದಿ: ಓಮಿಕ್ರಾನ್ ಪ್ರಕರಣ ಎರಡು ಪಟ್ಟಾಗಲು 3 ದಿನ ಸಾಕು!

ನವದೆಹಲಿ, ಡಿಸೆಂಬರ್ 18: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಈವರೆಗೂ ಜಗತ್ತಿನ 89 ರಾಷ್ಟ್ರಗಳಲ್ಲಿ ವರದಿಯಾಗಿವೆ. ಸೋಂಕು ಹರಡುತ್ತಿರುವ ಪ್ರದೇಶಗಳಲ್ಲಿ 1.5 ರಿಂದ 3 ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.
ವಿಶ್ವದಲ್ಲಿ ಅತಿಹೆಚ್ಚು ಪ್ರತಿರಕ್ಷಣಾ ಸಮುದಾಯಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿಯೇ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ರೋಗ ನಿರೋಧಕ ಶಕ್ತಿ ಇಳಿಮುಖ ಹಾಗೂ ಸೋಂಕು ಹರಡುವಿಕೆ ವೇಗ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದೆ.

ಕಳೆದ ನವೆಂಬರ್ 26ರಂದು ಮೊದಲ ಓಮಿಕ್ರಾನ್ ರೂಪಾಂತರ ಪ್ರಕರಣ ವರದಿಯಾಗಿದ್ದು, ಅದು ಕಾಳಜಿ ಮಾದರಿಯಾಗಿದೆ ಎಂದು WHO ಹೇಳಿತ್ತು. ಸೋಂಕು ಅಂಟಿದ ನಂತರದಲ್ಲಿ ಎದುರಾಗುವ ಅನಾರೋಗ್ಯ ಸಮಸ್ಯೆಗಳ ಕುರಿತು ತಿಳಿಸಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಬಗ್ಗೆ ಹೆಚ್ಚಿನ ವೈದ್ಯಕೀಯ ಸಂಶೋಧನೆಗಳ ದತ್ತಾಂಶ ಅಥವಾ ಮಾಹಿತಿ ಸಿಕ್ಕಿಲ್ಲ.

Omicron Cases Doubling In Just Three Days, Says WHO

ಓಮಿಕ್ರಾನ್ ತೀವ್ರತೆ ತಿಳಿಯಲು ದತ್ತಾಂಶ ಅಗತ್ಯ:
ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ತೀವ್ರತೆ ಎಷ್ಟಿದೆ ಎಂಬುದರ ಬಗ್ಗೆ ಇದುವರೆಗೂ ಖಚಿತವಾಗಿ ಮಾಹಿತಿ ಲಭ್ಯವಾಗಿಲ್ಲ. ಓಮಿಕ್ರಾನ್ ತೀವ್ರತೆಯನ್ನು ತಿಳಿಯುವುದಕ್ಕೆ ಮತ್ತಷ್ಟು ವೈದ್ಯಕೀಯ ಸಂಶೋಧನೆಗಳನ್ನು ನಡೆಸಬೇಕಾಗಿದೆ. ಈ ರೂಪಾಂತರವು ಲಸಿಕೆ ಪಡೆದುಕೊಂಡವರ ಮೇಲೆ ಹಾಗೂ ಲಸಿಕೆ ಪಡೆದುಕೊಳ್ಳದವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ.

ಲಸಿಕೆ ಪ್ರಭಾವದ ಬಗ್ಗೆ ಯಾವುದೇ ಮಾಹಿತಿಯಿಲ್ಲ:
ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳು ಹಾಗೂ ವೈದ್ಯಕೀಯ ಪರೀಕ್ಷೆ ವರದಿಗಳು ಓಮಿಕ್ರಾನ್ ರೋಗದ ತೀವ್ರತೆಯನ್ನು ಅಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಓಮಿಕ್ರಾನ್ ರೂಪಾಂತರದ ಮೇಲೆ ಸದ್ಯ ನೀಡುತ್ತಿರುವ ಕೊವಿಡ್-19 ಲಸಿಕೆಗಳು ಪ್ರಭಾವಶಾಲಿಯಾಗಿರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸಾವಾನಾ, ಜಿಂಬಾಬ್ವೆ, ತಂಜಾನಿಯಾ, ಹಾಂಗ್ ಕಾಂಗ್, ಚೀನಾ, ಘಾನಾ, ಮಾರಿಷಸ್, ನ್ಯೂಜಿಲೆಂಡ್ ಮತ್ತು ಇಸ್ರೇಲ್ ರಾಷ್ಟ್ರಗಳು ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳು ಎಂದು ಗುರುತಿಸಲಾಗಿದೆ. ಭಾರತದ ಆರು ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸಬೇಕಿದ್ದಲ್ಲಿ ಡಿಸೆಂಬರ್ 20ರೊಗಳೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿರಬೇಕು. ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದ್ರಾಬಾದ್ ವಿಮಾನ ನಿಲ್ದಾಣಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ.

ಓಮಿಕ್ರಾನ್‌ ಸೋಂಕಿನ ಆತಂಕದ ನಡುವೆ, ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. "ಅಧಿಕ ಅಪಾಯಯುತ ಎಂದು ಗುರುತಿಸಲಾದ ದೇಶದಿಂದ ಬರುವವರು ಮೊದಲೇ ಏರ್‌ ಸುವಿಧ ಪೋರ್ಟಲ್‌ ಮೂಲಕ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಅತೀ ಅಪಾಯಯುತ ದೇಶದಿಂದ ಆಗಮಿಸುವವರು ಪ್ರಯಾಣ ಮಾಡುವುದಕ್ಕೂ ಮುನ್ನವೇ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಹಾಗೆಯೇ ಈ ಅಪಾಯಯುತ ದೇಶಕ್ಕೆ 14 ದಿನದೊಳಗೆ ಪ್ರಯಾಣ ಮಾಡಿದವರು ಕೂಡಾ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಮೊದಲೇ ಬುಕ್ಕಿಂಗ್‌ ಮಾಡಿಕೊಳ್ಳಬೇಕು.

ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರ್ಗಸೂಚಿ ಜಾರಿ:
ಯುನೈಟೆಡ್‌ ಸ್ಟೇಟ್ಸ್‌, ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯಾ ಮೊದಲಾದ ದೇಶದಲ್ಲಿ ಓಮಿಕ್ರಾನ್‌ ಹಿನ್ನೆಲೆಯಿಂದಾಗಿ ಈಗಾಗಲೇ ಪ್ರಯಾಣ ಮಾರ್ಗಸೂಚಿಯನ್ನು ಕಠಿಣ ಮಾಡಲಾಗಿದೆ. ಯುಕೆಯಲ್ಲಿ ಓಮಿಕ್ರಾನ್‌ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ವಿಶ್ವದಲ್ಲೆ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ವರದಿ ಆಗಿರುವ ಯುಕೆಯಲ್ಲಿ ಈ ಹೊಸ ರೂಪಾಂತರ ಎಚ್ಚರಿಕೆಯ ಕರೆಗಂಟೆಯಾಗಿದೆ. ಇನ್ನು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಈವರೆಗೂ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿಗೆ ಓಮಿಕ್ರಾನ್‌ ಸೋಂಕು ತಗುಲಿದೆ ಎಂದು ವರದಿ ಆಗಿದೆ. ಆದರೆ ಕೇವಲ ಹತ್ತು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+