ಮಸ್ಕತ್ ನ ಪುರಾತನದ ಶಿವಾಲಯದಲ್ಲಿ ಮೋದಿ

Posted By:
Subscribe to Oneindia Kannada

ಮಸ್ಕತ್, ಫೆಬ್ರವರಿ 12: ಒಮಾನ್ ನಲ್ಲಿ ಸುಮಾರು 20,000ಕ್ಕೂ ಹೆಚ್ಚು ಭಾರತೀಯರಿದ್ದ ಸಾರ್ವಜನಿಕ ಸಮಾರಂಭದಲ್ಲಿ ಎಲ್ಲರನ್ನು ತಮ್ಮ ಭಾಷಣದ ಮೂಲಕ ಮನಸೆಳೆಸಿದ ಬಳಿಕ ಶಿವ ಮಂದಿರಕ್ಕೆ ಭಾರತದ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.

ಒಮಾನ್ ನಲ್ಲೂ ಕಾಂಗ್ರೆಸ್ ಜಪ ಮಾಡಿದ ಮೋದಿ! 8 ಸಂಗತಿ

ಒಮಾನ್ ರಾಜಧಾನಿ ಮಸ್ಕತ್ ನ ಸುಲ್ತಾನ್ ಕ್ವಾಬೂಸ್ ಸ್ಪೋರ್ಟ್ ಕಾಂಪ್ಲೆಕ್ಸ್ ನಲ್ಲಿ ಮತ್ತೊಮ್ಮೆ ಎಲ್ಲರಿಗೂ ಮೋಡಿ ಮಾಡಿದ ಬಳಿಕ ಮಸ್ಕಟ್ ನಲ್ಲಿರುವ ಮೋತೀಶ್ವರ್ ಭೇಟಿ ನೀಡಿದರು. ಇದಲ್ಲದೆ ಭಾರತೀಯರಿಂದ ನಿರ್ಮಾಣಗೊಂಡಿರುವ ಸುಲ್ತಾನ್ ಖಬ್ಬೂಸ್ ನ ಮಸೀದಿಗೂ ಮೋದಿ ಅವರು ಭೇಟಿ ನೀಡಿದರು.

Modi in Oman: PM offers prayer at Shiva temple; visits Grand Mosque in Muscat

ಮಸ್ಕಟ್ ನಲ್ಲಿ ನೆಲೆಸಿರುವ ಗುಜರಾತ್ ಮೂಲದ ಭಾರತೀಯ ಉದ್ಯಮಿಗಳ ಸಮುದಾಯದಿಂದ ಈ ದೇಗುಲ ನಿರ್ಮಾಣವಾಗಿದೆ. ಸೀಬ್ ವಿಮಾನ ನಿಲ್ದಾಣದಿಂದ ಸುಲ್ತಾನರ ಅರಮನೆಯ ಹಾದಿಯಲ್ಲಿ ಈ ದೇಗುಲವಿದೆ.

ಸರಿ ಸುಮಾರು 125ಕ್ಕೂ ಅಧಿಕ ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇಗುಲವನ್ನು 1999ರಲ್ಲಿ ಪುನರುತ್ಥಾನಗೊಳಿಸಲಾಗಿದೆ. ದಿನನಿತ್ಯ 400ಕ್ಕೂ ಅಧಿಕ ಭಕ್ತಾದಿಗಳು ದೇಗುಲಕ್ಕೆ ಬರುತ್ತಾರೆ, ವಾರಾಂತ್ಯದಲ್ಲಿ 1500 ರಿಂದ 4000 ಭಕ್ತಾದಿಗಳನ್ನು ನಿರೀಕ್ಷಿಸಬಹುದು.

ಮಹಾಶಿವರಾತ್ರಿ, ದೀಪಾವಳಿ, ಹೊಸ ವರ್ಷಾಚರಣೆ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಸರಿ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತಾದಿಗಳನ್ನು ಕಾಣಬಹುದು.

ಈ ದೇಗುಲದ ನಿರ್ವಹಣೆಯನ್ನು ಮಹೇಶ್ ರಾವಲ್, ಅಲ್ಪೇಶ್ ಜೋಶಿ, ಶಂಕರ್ ನಾರಾಯಣ್ ರಾವ್ ಅವರನ್ನೊಳಗೊಂಡ ಸಮಿತಿ ನಿಭಾಯಿಸುತ್ತಿದೆ. ಮೂವರು ಅರ್ಚಕರು, ಮೂವರು ಸಹಾಯಕ ಸಿಬ್ಬಂದಿ ಹಾಗೂ ನಾಲ್ವರು ಆಡಳಿತ ಸಿಬ್ಬಂದಿಗಳು ದೇಗುಲದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi, who is on a two-day visit to Oman on the last leg of his tour of three West Asian countries, on Monday visited a 125-year old Shiva temple and also meet group of CEOs from Oman.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ