ಮೈಮೇಲೆ ಟಿವಿ ಬಿದ್ದು ಮಗು ದಾರುಣ ಸಾವು

ಕೇರಳ ಮೂಲದ ದಂಪತಿಗಳ 18 ತಿಂಗಳ ಮಗು ಆದಿ ಅದಾಗತಾನೇ ನಡೆದಾಡಲು ಆರಂಭಿಸಿತ್ತು. ಶುಕ್ರವಾರದಂದು ಮನೆಯ ಕೋಣೆಯೊಂದರಲ್ಲಿ ಆಟವಾಡುತ್ತಿದ್ದ ವೇಳೆ ಈ ಮಗು ಟಿವಿಯ ಕೇಬಲ್ ಅನ್ನು ಹಿಡಿದು ಎಳೆದಿದೆ. ತಕ್ಷಣ ಇಡೀ ಟಿವಿ ಸೆಟ್ ಮಗುವಿನ ಮೇಲೆ ಬಿದ್ದಿದೆ.
ಘಟನೆ ನಡೆದಾಗ ಮಗುವಿನ ಹೆತ್ತವರು ಸ್ಥಳದಲಿರಲಿಲ್ಲ. ತಕ್ಷಣವೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೂ ತೀವ್ರ ರಕ್ತಸ್ರಾವದ ಪರಿಣಾಮ ಮಗು ಮೃತಪಟ್ಟಿತು ಎಂದು ಕುಟುಂಬದ ಸ್ನೇಹಿತರು ತಿಳಿಸಿದ್ದಾರೆ.
ಮಗುವಿನ ತಂದೆ ಭೂವಿನ್ಯಾಸ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು ಈ ಕುಟುಂಬ ಅಲ್ ಖುವೈರ್ ನಲ್ಲಿ ವಾಸವಾಗಿತ್ತು. ಶನಿವಾರದಂದು ಮಗುವಿನ ಶವವನ್ನು ವಿಮಾನದಲ್ಲಿ ಕೇರಳಕ್ಕೆ ಕಳುಹಿಸಿಕೊಡಲಾಗಿದೆ.












Click it and Unblock the Notifications