Get Updates
Get notified of breaking news, exclusive insights, and must-see stories!

ಈ ನಾಲ್ಕು ಎಲೆಯ ಗಿಡದ ಬೆಲೆ ಕೇಳಿ ಹೌಹಾರಬೇಡಿ!

ನ್ಯೂಜಿಲ್ಯಾಂಡ್‌ನಲ್ಲಿ ಕೇವಲ 4 ಎಲೆಯ ಗಿಡ ಬರೋಬ್ಬರಿ 6 ಲಕ್ಷ ರೂಪಾಯಿಗೆ ಸೇಲ್ ಆಗಿದೆ. ಆದರೆ ಕೊರೊನಾ ಕಂಟಕ ಎದುರಾದ ನಂತರ ಕೋಟಿ ಮೌಲ್ಯದ ವಸ್ತುಗಳು ಸಾವಿರಕ್ಕೂ ಸೇಲ್ ಆಗದ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಸಂಕಷ್ಟದ ಸಮಯದಲ್ಲೂ ಮನೆ ಅಲಂಕಾರಕ್ಕೆಂದು ಬೆಳೆಸುವ 'ವ್ಯಾರಿಗೇಟೆಡ್ ಮಿನಿಮಾ' ಎಂಬ ಹೆಸರಿನ ಸಸ್ಯ ಆನ್‌ಲೈನ್‌ನಲ್ಲಿ 6 ಲಕ್ಷ ರೂಪಾಯಿಗೆ ಸೇಲ್ ಆಗಿದೆ.

Recommended Video

      The Rock ಕುಟುಂಬಕ್ಕೂ ಕೂಡ ಕೊರೊನ ತಗುಲಿತ್ತು | Oneindia Kannada

      ನ್ಯೂಜಿಲ್ಯಾಂಡ್‌ನ ಆಕ್ಲೆಂಡ್ ಮೂಲದ ವ್ಯಕ್ತಿಯೊಬ್ಬ ಈ ಗಿಡವನ್ನ 6 ಲಕ್ಷಕ್ಕೆ ಖರೀದಿ ಮಾಡಿದ್ದಾನೆ. ಅಷ್ಟಕ್ಕೂ ನ್ಯೂಜಿಲ್ಯಾಂಡ್‌ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಗಾರ್ಡೆನಿಂಗ್ ಟ್ರೆಂಡ್ ಹೆಚ್ಚುತ್ತಿದ್ದು, ಅದರಲ್ಲೂ ಹೋಂ ಗಾರ್ಡೆನಿಂಗ್ ಕುರಿತು ಇಲ್ಲಿನ ಯುವ ಪೀಳಿಗೆ ಕುತೂಹಲ ಬೆಳೆಸಿಕೊಂಡಿದೆ. ಈ ಕಾರಣಕ್ಕೆ ಕಳೆದ ಕೆಲ ವರ್ಷಗಳಲ್ಲಿ ಆನ್‌ಲೈನ್‌ನಲ್ಲಿ ಸಸ್ಯ ವ್ಯಾಪಾರ ಬರೋಬ್ಬರಿ 2500% ಏರಿಕೆ ಕಂಡಿದೆ.

      ನ್ಯೂಜಿಲ್ಯಾಂಡ್‌ನಲ್ಲಿ ಇಂತಹ ಸಸ್ಯಗಳು ಲಕ್ಷಾಂತರ ರೂಪಾಯಿಗೆ ಮಾರಾಟ ಆಗೋದು ಮಾಮೂಲಾಗಿದ್ದು, ಈ ಹಿಂದೆ ಕೂಡ ಸುಮಾರು 1 ಲಕ್ಷ ರೂಪಾಯಿಗೆ ಇದೇ ರೀತಿ ಸಸ್ಯವೊಂದು ಮಾರಾಟವಾಗಿತ್ತು.

      NZ: 4-leaf plant variegated minima sold for ₹6 lakh

      ಎಲೆ ಎಲೆಯಲ್ಲೂ ವೈವಿಧ್ಯತೆ..!

      'ವ್ಯಾರಿಗೇಟೆಡ್ ಮಿನಿಮಾ' (Variegated Minima) ಸಸ್ಯಕ್ಕೆ ಹೆಸರಲ್ಲೇ ವೈವಿಧ್ಯತೆ ಇದೆ. ನೋಡಲು ಮಾಮೂಲಿ ಗಿಡದಂತೆ ಇದು ಕಾಣುವುದಿಲ್ಲ. ಕೇವಲ 4 ಎಲೆಯ ಸಸ್ಯದಲ್ಲಿ, ಒಂದೊಂದು ಎಲೆಯೂ ವೈವಿಧ್ಯಮಯವಾಗಿದೆ. ಒಂದು ಎಲೆಯಲ್ಲಿ ಅರ್ಧಭಾಗ ಹಳದಿ ಬಣ್ಣದಲ್ಲಿ ಇದ್ದರೆ, ಇನ್ನುಳಿದ ಅರ್ಧಭಾಗ ಕಡು ಹಸಿರಾಗಿರುತ್ತದೆ. ಪುಟಾಣಿ ಪಾಟ್‌ನಲ್ಲಿ ಬೆಳೆಸಬಹುದಾದ ಈ ಸಸ್ಯ, ಪಾಶ್ಚಿಮಾತ್ಯ ದೇಶಗಳಲ್ಲಿ ಮನೆ ಅಲಂಕಾರಕ್ಕೆ ಹೆಸರುವಾಸಿ. ಇದೀಗ 6 ಲಕ್ಷ ರೂಪಾಯಿಗೆ ಸೇಲ್ ಆಗುವ ಮೂಲಕ ಮತ್ತೊಂದು ದಾಖಲೆ ಬರೆದಿದೆ 'ವ್ಯಾರಿಗೇಟೆಡ್ ಮಿನಿಮಾ' ಸಸ್ಯ.

      ಕೇಳಿದ್ದು ₹70, ಸಿಕ್ಕಿದ್ದು ₹6,00,000

      ಅದೃಷ್ಟ ಎಂದರೆ ಇದೇ ಇರಬೇಕು. ಆನ್‌ಲೈನ್‌ನಲ್ಲಿ ತನ್ನ 'ವ್ಯಾರಿಗೇಟೆಡ್ ಮಿನಿಮಾ' ಸಸ್ಯ ಸೇಲ್‌ಗೆ ಹಾಕಿದ್ದ ವ್ಯಕ್ತಿ ಅದಕ್ಕೆ ಸುಮಾರು ₹70 ಅಂದರೆ 1 ಡಾಲರ್ ಫಿಕ್ಸ್ ಮಾಡಿದ್ದ. ಆದರೆ ಇದೇ ಗಿಡ ಸುಮಾರು 8,150 ಡಾಲರ್ ಅಂದರೆ ಸುಮಾರು 6 ಲಕ್ಷ ರೂಪಾಯಿಗೆ ಸೇಲ್ ಆಗಿದೆ. ಇದು ವೆಬ್‌ಸೈಟ್ ನಿರ್ವಾಹಕರಿಗೆ ಶಾಕ್ ಕೊಟ್ಟಿತ್ತು. ಏಕೆಂದರೆ ಈವರೆಗೂ ಇಷ್ಟು ದೊಡ್ಡ ಮೊತ್ತಕ್ಕೆ ಗಿಡವೊಂದು ಸೇಲ್ ಆಗಿರಲಿಲ್ಲ. ಅದರಲ್ಲೂ ಕೇವಲ 4 ಎಲೆಯ ಸಸ್ಯ ₹6 ಲಕ್ಷಕ್ಕೆ ಸೇಲ್ ಆಗಿರುವುದು ದೊಡ್ಡ ಸದ್ದು ಮಾಡಿದೆ. ಹಾಗೇ ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಗಾರ್ಡೆನಿಂಗ್ ಕ್ರೇಜ್ ಬಗ್ಗೆಯೂ ಇದು ಹಿಂಟ್ ಕೊಟ್ಟಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+