Nuclear Energy: ಮಧ್ಯಪ್ರಾಚ್ಯದ ಯುದ್ಧ ರಹಸ್ಯ ಬಯಲು: ಇರಾನ್ - ಅಮೆರಿಕ ಯುದ್ಧಕ್ಕೆ ಅಮೂಲ್ಯ ಯುರೇನಿಯಂ ಕಾರಣವೇ
Nuclear Energy: ಅಮೆರಿಕ ಹಾಗೂ ಇರಾನ್‌ನ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಶ್ವದ ಎಲ್ಲಾ ದೇಶಗಳಲ್ಲಿರುವ ಖನಿಜ ಸಂಪತ್ತು ಹಾಗೂ ಅಮೂಲ್ಯ ಲೋಹಗಳ ಮೇಲೆ ಅಮೆರಿಕದ ಕಣ್ಣು ಮೊದಲಿನಿಂದಲೂ ಇದೆ. ಅಮೆರಿಕ ಯಾವುದಾದರೂ ದೇಶಕ್ಕೆ ಸಹಾಯ ಮಾಡುತ್ತಿದೆ ಎಂದರೆ, ಆ ದೇಶದಿಂದ ದೊಡ್ಡದಾದದ್ದು ಏನನ್ನಾದರೂ ಬಯಸುತ್ತಿದೆ ಎಂದೇ ಅರ್ಥ. ಅದರಲ್ಲೂ ಏಕಾಏಕಿ ಇರಾನ್‌ನ ಮೇಲೆ ಅಮೆರಿಕ ದೊಡ್ಡ ಮಟ್ಟದ ದಾಳಿ ಮಾಡಿದಾಗಲೇ ಇದು ಕೇವಲ ಪರಮಾಣು ವಿಚಾರವಲ್ಲ ಎನ್ನುವುದು ಸಾಬೀತಾಗಿತ್ತು.
ಮೊದಲು ಸಣ್ಣ ದಾಳಿ ಮಾಡುತ್ತಿದ್ದ ಇಸ್ರೇಲ್ - ಇರಾನ್‌ನ ಮೇಲೆ ಭಾರೀ ದೊಡ್ಡ ದಾಳಿಗಳನ್ನು ಮಾಡುವುದಕ್ಕೆ ಪ್ರಾರಂಭಿಸಿತ್ತು. ವಿಶ್ವದಲ್ಲಿ ಈಗ ಚಿನ್ನ - ಕಚ್ಚಾ ತೈಲದ ನಂತರ ಪ್ರಮುಖ ಅಸ್ತ್ರವಾಗುತ್ತಿರುವುದು ಯುರೇನಿಯಂ / ಪರಮಾಣು. ಈಗ ಅಮೆರಿಕ ಹಾಗೂ ಇರಾನ್‌ನ ನಡುವೆ ಸಂಘರ್ಷ ಮುಕ್ತಾಯವಾಗದೆ ಇರುವುದಕ್ಕೂ ಇದೇ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾದರೆ ಏನಿದು ಯುರೇನಿಯಂ ಹಾಗೂ ಇದರ ಪ್ರಭಾವ, ಪರಿಣಾಮ ಮತ್ತು ರಚನೆಯ ವಿವರಗಳನ್ನು ಸರಳ ಕನ್ನಡದಲ್ಲಿ ವಿವರಿಸುವ ಪ್ರಯತ್ನ ಈ ಲೇಖನದಲ್ಲಿದೆ.

ಅಮೆರಿಕ - ಇರಾನ್; ಯುರೇನಿಯಂ ವಿಚಾರಕ್ಕೆ ಯುದ್ಧ ನಡೆಯುತ್ತಿದೆಯೇ
ಹೌದು, ಅಮೆರಿಕ ಮತ್ತು ಇರಾನ್‌ನ ನಡುವೆ ನಡೆಯುತ್ತಿರುವ ಯುದ್ಧವು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಯುದ್ಧವನ್ನು ಇರಾನ್‌ನಲ್ಲಿ ಪರಮಾಣು ಶಸ್ತ್ರಸ್ತ್ರ ತಯಾರಿಕೆ ತಡೆಯುವ ಉದ್ದೇಶದಿಂದ ಪ್ರಾರಂಭಿಸಿರುವುದಾಗಿ ಮೊದಲು ಅಮೆರಿಕ ಹೇಳಿಕೊಂಡರು ಇದರ ಲೆಕ್ಕಾಚಾರ ಯುರೇನಿಯಂ ಸಂಪತ್ತು ಆಗಿರುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಈ ಚರ್ಚೆ ಶುರುವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಬಹುಪಾಲು ಅಣು ಸಾಮರ್ಥ್ಯದ ಸುತ್ತಲೇ ತಿರುಗುತ್ತಿದೆ. ಇರಾನ್‌ನ ಕೇಂದ್ರ ಭಾಗದಲ್ಲಿರುವ ಯುರೇನಿಯಂ ಸಹಜವಾಗಿ ಅಣುಶಕ್ತಿ ಉತ್ಪಾದನೆಗೂ ಹಾಗೂ ಹೆಚ್ಚಿನ ಶುದ್ಧತೆಯಲ್ಲಿ ಅಣ್ವಸ್ತ್ರಗಳಿಗೂ ಬಳಸಲಾಗುತ್ತದೆ.
ಯುರೇನಿಯಂ ಎಂದರೆ ಏನು?
ಯುರೇನಿಯಂ ಒಂದು ಭಾರವಾದ ಲೋಹ. ಇದರ ಆಟಾಮಿಕ್ ಸಂಖ್ಯೆ 92 ಅಂದರೆ ಅದರ ಕೇಂದ್ರದಲ್ಲಿ 92 ಪ್ರೋಟಾನ್‌ಗಳು ಇರುತ್ತವೆ. ಇದನ್ನು 1789ರಲ್ಲಿ ಮಾರ್ಟಿನ್ ಹೈನ್ರಿಚ್ ಕ್ಲಾಪ್ರೋತ್ ಎಂಬ ವಿಜ್ಞಾನಿ ಜರ್ಮನಿಯಲ್ಲಿ ಕಂಡುಹಿಡಿದರು. ಇದು ಭೂಮಿಯ ಕಲ್ಲು-ಮಣ್ಣುಗಳಲ್ಲಿ ಸಹಜವಾಗಿ ದೊರೆಯುತ್ತದೆ. ಕಝಕಿಸ್ತಾನ್, ಕೆನಡಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದೆ. ಮಧ್ಯಪ್ರಾಚ್ಯದಲ್ಲಿ ಕಚ್ಚಾ ತೈಲದೊಂದಿಗೆ ಅಪಾರ ಖನಿಜ ಸಂಪತ್ತಿನ ವಿಚಾರವೂ ಸಹ ಇದೀಗ ಚರ್ಚೆಗೆ ಕಾರಣವಾಗಿದೆ.

ಯುರೇನಿಯಂ ಏಕೆ ಕಿರಣೋತ್ಪಾದಕ (Radioactive) ಬಗ್ಗೆ
ಯುರೇನಿಯಂ ಅಣುಗಳು ಸ್ಥಿರವಾಗಿರುವುದಿಲ್ಲ. ಅವುಗಳ ಕೇಂದ್ರವು ಕೆಲವೊಮ್ಮೆ ಸ್ವಯಂವಾಗಿ ಒಡೆಯುತ್ತವೆ ಅಥವಾ ವಿಘಟಿತವಾಗುತ್ತವೆ. ಆಗ ಶಕ್ತಿ ಮತ್ತು ಕಣಗಳು ಹೊರಬರುತ್ತವೆ. ಇದನ್ನೇ ರೇಡಿಯೋಆಕ್ಟಿವಿಟಿ ಎಂದು ಕರೆಯಲಾಗುತ್ತದೆ. ಇದನ್ನು ಒಂದು ದುರ್ಬಲ ಬ್ಲಾಕ್‌ಗಳ ಗೋಪುರ ಕುಸಿಯುವಂತೆ ಊಹಿಸಿಕೊಳ್ಳಬಹುದಾಗಿದೆ.
ಯುರೇನಿಯಂ ಅನ್ನು ಹೇಗೆ ತೆಗೆಯುತ್ತಾರೆ ಮತ್ತು ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ವಿವರ ನೋಡೋಣ
ಮೈನಿಂಗ್: ಭೂಮಿಯಿಂದ ಯುರೇನಿಯಂ ಅಯಸ್ಕವನ್ನು ಮೈನಿಂಗ್ ಮಾದರಿಯಲ್ಲಿ ಹೊರ ತೆಗೆಯಲಾಗುತ್ತದೆ.
ಮಿಲ್ಲಿಂಗ್: ಅದನ್ನು ಪುಡಿಮಾಡಿ "ಯೆಲ್ಲೋಕೇಕ್" (U₃O₈) ಆಗಿ ಪರಿವರ್ತನೆ ಮಾಡಲಾಗುತ್ತದೆ.
ಎನ್ರಿಚ್ಮೆಂಟ್: ಇದು ಅತ್ಯಂತ ಮುಖ್ಯ ಹಂತವಾಗಿದೆ. ಅದರ ವಿವರ ಮುಂದೆ ನೋಡೋಣ.
ಎನ್ರಿಚ್ಮೆಂಟ್ ಎಂದರೇನು
ಸ್ವಾಭಾವಿಕ ಯುರೇನಿಯಂನಲ್ಲಿ ಕೇವಲ 0.7% U-235 (ಉಪಯುಕ್ತ ಐಸೋಟೋಪ್) ಎನ್ನುವ ಅಂಶ ಮಾತ್ರ ಇರುತ್ತದೆ
ಅಣು ವಿದ್ಯುತ್ ಸ್ಥಾವರಗಳಿಗೆ → ಸುಮಾರು 3-5%
ಅಣ್ವಸ್ತ್ರಗಳಿಗೆ → ಸುಮಾರು 90% ಶುದ್ಧತೆ ಬೇಕಾಗುತ್ತದೆ.
ಈ ಶುದ್ಧತೆಯನ್ನು ಹೆಚ್ಚಿಸಲು ಸೆಂಟ್ರಿಫ್ಯೂಜ್ ಎಂಬ ಯಂತ್ರಗಳನ್ನು ಬಳಸುತ್ತಾರೆ. ಅವು ಯುರೇನಿಯಂ ಅನಿಲವನ್ನು ತುಂಬಾ ವೇಗವಾಗಿ ತಿರುಗಿಸಿ, ಹಗುರವಾದ U-235 ಅನ್ನು ಭಾರವಾದ U-238 ನಿಂದ ಬೇರ್ಪಡಿಸುತ್ತವೆ.
ಅಣು ಸರಪಳಿ ಪ್ರತಿಕ್ರಿಯೆ (Chain Reaction) ಎಂದರೇನು?
ಒಂದು ಅಣು ಒಡೆಯುವಾಗ ಹೊರಬರುವ ನ್ಯೂಟ್ರಾನ್‌ಗಳು ಮತ್ತಷ್ಟು ಅಣುಗಳನ್ನು ಒಡೆಯುತ್ತವೆ-ಹೀಗೆ ಸರಪಳಿ ಪ್ರಕ್ರಿಯೆ ನಡೆಯುತ್ತದೆ.
ನಿಯಂತ್ರಿತವಾದರೆ → ಅಣು ವಿದ್ಯುತ್ ಉತ್ಪಾದನೆ
ನಿಯಂತ್ರಣವಿಲ್ಲದಿದ್ದರೆ → ಅಣು ಸ್ಫೋಟ ಎಂದು ಪರಿಗಣಿಸಲಾಗುತ್ತದೆ.

ಅಣು ಕ್ಷೇತ್ರದಲ್ಲಿ ಬಳಸುವ ಇತರ ಅಂಶಗಳು
ಪ್ಲುಟೋನಿಯಂ (Pu-239): ಅಣ್ವಸ್ತ್ರಗಳಲ್ಲಿ ಬಳಕೆ
ಥೋರಿಯಂ: ಪರ್ಯಾಯ ಅಣು ಇಂಧನ
ಯುರೇನಿಯಂ-238: ರಿಯಾಕ್ಟರ್‌ನಲ್ಲಿ ಪ್ಲುಟೋನಿಯಂ ಆಗಿ ಪರಿವರ್ತನೆ














Click it and Unblock the Notifications