ಪರಮಾಣು ಬಾಂಬ್ ಚಿಂತೆ ಮತ್ತೆ ಶುರು, ಅಮೆರಿಕ ಮತ್ತು ರಷ್ಯಾ ಒಪ್ಪಂದ ಮುಕ್ತಾಯ... Nuclear Arms Race
ಪರಮಾಣು ಬಾಂಬ್ ಎಂದ ತಕ್ಷಣ ನೆನಪಿಗೆ ಬರುವುದು ಬರೀ ವಿನಾಶ, ಏಕೆಂದರೆ ಮನುಷ್ಯ ಈವರೆಗೂ ಕಂಡುಹಿಡಿದ ಅತ್ಯಂತ ವಿನಾಶಕಾರಿ ವಸ್ತು ಎಂದರೆ ಅದು ಪರಮಾಣು ಬಾಂಬ್. ಹೀಗಾಗಿ ಜಗತ್ತಿನ ಮೂಲೆ ಮೂಲೆಯಲ್ಲೂ ಪರಮಾಣು ಬಾಂಬ್ ಬಗ್ಗೆ ಆತಂಕ ಕಾಡುತ್ತಲೇ ಇರುತ್ತದೆ, ಏಕೆಂದರೆ ಈ ಸಮಯದಲ್ಲಿ ಇಡೀ ಭೂಮಿಯನ್ನೇ ನಾಶ ಮಾಡಬಲ್ಲ ಶಕ್ತಿ ಇರುವ ಶಕ್ತಿಶಾಲಿ ಪರಮಾಣು ಬಾಂಬ್ ಮನುಷ್ಯರ ಬಳಿ ಇದೆ. ಅದರಲ್ಲೂ ಅಮೆರಿಕ ಮತ್ತು ರಷ್ಯಾ ದೇಶಗಳ ಬಳಿಯೇ ಅತಿಹೆಚ್ಚು ನ್ಯೂಕ್ಲಿಯರ್ ಬಾಂಬ್ ಇದ್ದು, ಈ ಇಬ್ಬರಲ್ಲಿ ಯಾರೊಬ್ಬರು ಇದನ್ನು ಬಳಸಿದರೂ ಇಡೀ ಜಗತ್ತು ನಾಶವಾಗುವುದು ಖಚಿತ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ ನಡೆಯುತ್ತಿರುವ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ಆಡಳಿತದಿಂದ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಿ ಶಾಂತಿ ಒಪ್ಪಂದ ಮಾಡಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಒದ್ದಾಡುತ್ತದೆ. ಎರಡೂ ದೇಶಗಳ ನಡುವೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ಈ ಬಗ್ಗೆ ಸಾಲು ಸಾಲು ಮೀಟಿಂಗ್ ನಡೆಯುತ್ತಲೇ ಇದೆ. ಹೀಗಿದ್ದಾಗ ಮತ್ತೊಂದು ಕಡೆ ಪರಮಾಣು ಒಪ್ಪಂದದ ವಿಚಾರದಲ್ಲಿ ಸ್ಫೋಟಕ ವಿಚಾರವು ಆತಂಕ ಹೆಚ್ಚು ಮಾಡುತ್ತಿದೆ. ಹಾಗಾದರೆ ಈಗ ಯಾಕೆ ಪರಮಾಣು ಬಾಂಬ್ ರೇಸ್ ಶುರು ಆಗಬಹುದು? ಅಮೆರಿಕ ಮತ್ತು ರಷ್ಯಾ ನಡುವೆ ಆಗಿದ್ದ ಪರಮಾಣು ಒಪ್ಪಂದ ಎಂತಹದ್ದು?

ಒಬಾಮಾ ಇದ್ದಾಗ ಒಪ್ಪಂದ ಆಗಿತ್ತು
ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಇದ್ದ ಸಮಯದಲ್ಲಿ, ಅಂದರೆ 2010ರ ಸಮಯದಲ್ಲಿ ರಷ್ಯಾ ಜೊತೆಗೆ ಮಹತ್ವದ ಒಪ್ಪಂದ ಒಂದು ನಡೆದಿತ್ತು. ಆಗ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ & ರಷ್ಯಾ ಅಧ್ಯಕ್ಷರಾಗಿದ್ದ ಡಿಮಿಟ್ರಿ ಮೆಡ್ವೆಡೇವ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದಿತ್ತು. ಒಪ್ಪಂದ ಹೇಳುವಂತೆ 700ಕ್ಕೂ ಹೆಚ್ಚು ಕ್ಷಿಪಣಿ & ಬಾಂಬರ್‌ಗಳಲ್ಲಿ ಗರಿಷ್ಠ 1,550 ಪರಮಾಣು ಸಿಡಿತಲೆಗೆ ನಿರ್ಬಂಧ ಹೇರಲಾಗಿತ್ತು. ಈ ಒಪ್ಪಂದ 2021ರ ಹೊತ್ತಿಗೆ ಅಂತ್ಯವಾಗಿತ್ತು, ನಂತರ ಮತ್ತೆ 5 ವರ್ಷಗಳ ಸಮಯಕ್ಕೆ ಅಮೆರಿಕ ಮತ್ತು ರಷ್ಯಾ ನಡುವೆ ಆಗಿದ್ದ ಪರಮಾಣು ಒಪ್ಪಂದ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೆ ಒಪ್ಪಂದ ಅಂತ್ಯವಾಗಿದ್ದು ಜಗತ್ತಿನಾದ್ಯಂತ ಪರಮಾಣು ಬಾಂಬ್ ಆತಂಕ ಹೆಚ್ಚಾಗುತ್ತಿದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications