Kim Jong Un: ಹುಚ್ಚರ ಹುಚ್ಚ ಮಹಾ ಹುಚ್ಚನಿಂದ ಮತ್ತೊಂದು ಅವಾಂತರ!
ಕಿಮ್ ಜಾಂಗ್ ಉನ್... ಈ ಹೆಸರು ಕೇಳುತ್ತಿದ್ದಂತೆ ಕೆಲವರಿಗೆ ಭಯವಾದರೆ, ಇನ್ನೂ ಹಲವರು ಬಿದ್ದೂ ಬಿದ್ದೂ ನಗುತ್ತಾರೆ. ಯಾಕಂದ್ರೆ ಕಿಮ್ ಜಾಂಗ್ ಉನ್ ಅನ್ನೋ ಸರ್ವಾಧಿಕಾರಿ ಮಾಡುವ ಅವಾಂತರಗಳೇ ಆ ರೀತಿ ಇರುತ್ತವೆ. ಮನಸ್ಸಿಗೆ ಬಂದಂತೆ ರೂಲ್ಸ್ ತರುವುದು, ಏನೇನೋ ನಿಯಮ ಹೇರಿಕೆ ಮಾಡುತ್ತಾ, ತನ್ನದೇ ದೇಶದ ಜನರಿಗೆ ಟಾರ್ಚರ್ ಕೊಡುವುದು. ಹೀಗೆ ನಾನಾ ರೀತಿಯಲ್ಲಿ ಟ್ರೋಲ್ ಆಗುವ ಇದೇ ಕಿಮ್ಮಣ್ಣ ಅಂದ್ರೆ ಉತ್ತರ ಕೊರಿಯಾ ಸರ್ವಾಧಿಕಾರಿ ಈಗ ಮತ್ತೆ ಸೌಂಡ್ ಮಾಡುತ್ತಿದ್ದಾನೆ.
ನಿಮಗೆಲ್ಲಾ ಗೊತ್ತಿರುವಂತೆ ಉತ್ತರ ಕೊರಿಯಾ ಅಂದ್ರೆ ಒಂದು ರೀತಿ ಓಪನ್ ಜೈಲು ಇದ್ದಂತೆ. ಅಲ್ಲಿ ಜನ ಏನೇ ಮಾಡಬೇಕು ಅಂದ್ರೂ ಹುಚ್ಚು ದೊರೆ & ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಪರ್ಮಿಷನ್ ತಗೊಂಡೇ ಮಾಡಬೇಕು. ಹಿಂಗೆ ನಾನು ಹಾಕಿದ್ದೇ ರೂಲ್ಸ್ ಅಂತಾ ತೊಡೆ ತಟ್ಟುವ ಕಿಮ್, ಪದೇ ಪದೇ ಜಾಗತಿಕ ಮಟ್ಟದಲ್ಲೂ ನಗೆಪಾಟಲಿಗೆ ಈಡಾಗಿದ್ದಾನೆ. ಇಂತಹ ಕಿಮ್ ಜಾಂಗ್ ಉನ್ ಇದೀಗ ತನ್ನ ದೇಶದಲ್ಲಿ ಸಮುದ್ರ ತೀರದಲ್ಲೇ ಭರ್ಜರಿ ರೆಸಾರ್ಟ್ ಕಟ್ಟಿಸಿದ್ದಾನೆ. ಆದರೆ ಅಸಲಿ ವಿಷಯ ಇದಲ್ಲ, ಈ ರೆಸಾರ್ಟ್‌ಗೆ ಹೋಗಬೇಕು ಅಂದ್ರೆ ಅವನು ಹಾಕಿರುವ ರೂಲ್ಸ್ ಕೇಳಿದ್ರೆ ಶಾಕ್ ಆಗುತ್ತೆ.

ಕಿಮ್ ಜಾಂಗ್ ಉನ್ ರೆಸಾರ್ಟ್!
ಅಂದಹಾಗೆ ಉತ್ತರ ಕೊರಿಯಾದ ಕರಾವಳಿ ನಗರ ವೊನ್ಸಾನ್-ಕಲ್ಮಾ ಬಳಿ ಇದೀಗ ಹೊಸ ಬೀಚ್ ರೆಸಾರ್ಟ್ ತೆರೆದಿದ್ದಾನೆ. ತನ್ನ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು, ಆ ಮೂಲಕ ಪ್ರವಾಸಿಗರನ್ನು ಸೆಳೆಯಬೇಕು ಎಂಬ ಡಿಮ್ಯಾಂಡ್ ಕಿಮ್ ಜಾಂಗ್ ಉನ್ ಪಡೆಯದ್ದು. ಇದೇ ಕಾರಣಕ್ಕೆ ಸತತ 7 ವರ್ಷಗಳ ಕಾಲ ಪರದಾಡಿ ಪರದಾಡಿ ಇದೀಗ ಸಮುದ್ರದ ಬಳಿಯೇ ರೆಸಾರ್ಟ್ ಕಟ್ಟಿಸಿದ್ದಾನೆ. ಹೀಗಂತಾ ಎಲ್ಲರಿಗೂ ಈ ರೆಸಾರ್ಟ್ ಒಳಗೆ ಪ್ರವೇಶ ಸಿಗುವುದಿಲ್ಲ. ಯಾಕೆ ಗೊತ್ತಾ? ಮುಂದೆ ಓದಿ.
20,000 ಅತಿಥಿಗಳಿಗೆ ಜಾಗ ಸಿಗಲಿದೆ!
ವೊನ್ಸಾನ್-ಕಲ್ಮಾ ಬೀಚ್ ರೆಸಾರ್ಟ್ ಒಳಗೆ ನೂರಾರು ಹೋಟೆಲ್ ರೂಂ ಸೇರಿದಂತೆ, ಮೂವಿ ಥಿಯೇಟರ್ ಮತ್ತು ಪಬ್‌ಗಳು ಕೂಡ ಇರಲಿವೆ. ಇದರ ಜೊತೆ ಬಿಯರ್ ಪಬ್ ವ್ಯವಸ್ಥೆ ಕೂಡ ವೊನ್ಸಾನ್-ಕಲ್ಮಾ ಬೀಚ್ ರೆಸಾರ್ಟ್ ಒಳಗೆ ಮಾಡಲಾಗಿದೆ. ಹಾಗೇ ಸುಮಾರು 20,000 ಅತಿಥಿಗಳು ಇಲ್ಲಿ ಒಂದೇ ಬಾರಿಗೆ ಸೇರುವ & ಪಾರ್ಟಿ ಮಾಡುವ ಅವಕಾಶ ಕೂಡ ಇದೆ. ಹೀಗೆ ನೂರಾರು ಹೊಸ ಹೊಸ ಸೌಲಭ್ಯಗಳನ್ನು ಅಳವಡಿಸಿರುವ ಈ ರೆಸಾರ್ಟ್ ಜಗತ್ತಿನ ಗಮನ ಸೆಳೆಯುತ್ತಿದೆ.
ಆದರೆ ಈ ಹೊಸ ರೆಸಾರ್ಟ್‌ಗೆ ಉತ್ತರ ಕೊರಿಯಾದ ಸಾಮಾನ್ಯ ಜನರಿಗೆ ಪ್ರವೇಶವೇ ಇಲ್ಲವಂತೆ. ಯಾಕಂದ್ರೆ ಇದು ಉ.ಕೊರಿಯಾದ ಉನ್ನತ ಅಧಿಕಾರಿಗಳು, ವಿದೇಶಿ ಗಣ್ಯರಿಗೆ ಮಾತ್ರ ಮೀಸಲು ಎನ್ನಲಾಗಿದೆ. ಹಾಗೇ ವಿದೇಶಿ ಪ್ರವಾಸಿಗರು ಕೂಡ ಈ ಹೊಸ ರೆಸಾರ್ಟ್ ಬಳಸಲು ಅವಕಾಶ ಇನ್ನು ನೀಡಿಲ್ಲ, ಆದ್ರೆ ಶೀಘ್ರದಲ್ಲೇ ರಷ್ಯಾ ಪ್ರವಾಸಿಗರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಈ ಮೂಲಕ ರೆಸಾರ್ಟ್ ಕಟ್ಟಿದ್ದರೂ ನೂರಾರು ರೂಲ್ಸ್ ಇಟ್ಟಿರುವ ಕಿಮ್ ಜಾಂಗ್ ಉನ್ ಬಗ್ಗೆ ಆಕ್ರೋಶ ಬಲು ಜೋರಾಗಿದೆ.












Click it and Unblock the Notifications