ಸರ್ವಾಧಿಕಾರಿ ಉಪಗ್ರಹ ಹಾಳಾಗಿದ್ದಕ್ಕೆ ಶುರುವಾಯ್ತು ನಡುಕ..!

ಉತ್ತರ ಕೊರಿಯಾ: ಮೊದಲೇ ಅವನು ಮೆಂಟಲ್ ಕೇಸ್. ಸಣ್ಣ ಮ್ಯಾಟರ್‌ಗೂ ಕೊಲೆ ಮಾಡಿಸುವ ಭೂಪ. ಸ್ಥಿತಿ ಹೀಗಿದ್ದಾಗ ಉಪಗ್ರಹ ಹಾಳಾದರೆ ಬಿಡ್ತಾನಾ? ಜಗತ್ತಿನ ತುಂಬಾ ಮಾನ ಹೋಗಿದ್ದಕ್ಕೆ ಈಗ ಸರ್ವಾಧಿಕಾರಿ ಏನು ಮಾಡಬಹುದು ಹೇಳಿ? ಹೌದು ಉತ್ತರ ಕೊರಿಯಾದಲ್ಲಿ ಸೇನಾ ಉಪಗ್ರಹ ಉಡಾವಣೆ ವೇಳೆ ಸಮುದ್ರಕ್ಕೆ ಬಿದ್ದ ನಂತರ ಅಧಿಕಾರಿಗಳಿಗೆ ಜೀವ ಭಯ ಶುರುವಾಗಿದೆ. ಯಾಕೆ ಅನ್ನೋದನ್ನ ಮುಂದೆ ತಿಳಿಯಿರಿ.

ನೆನಪಿರಲಿ ಉತ್ತರ ಕೊರಿಯಾದಲ್ಲಿ ಏನೇ ಮಾಡಿದರೂ ಪ್ರಾಣ ಕಳೆದುಕೊಳ್ಳಲು ಒಂದು ತಪ್ಪು ಸಾಕು. ಅದರಲ್ಲೂ ಕಿಮ್ ಜಾಂಗ್ ಉನ್ ಎದುರಲ್ಲಿ ತಪ್ಪು ಕಂಡರೆ ಹೆಣ ಎತ್ತಿಬಿಡ್ತಾನೆ. ಹೀಗೆ ಚಿಕ್ಕಪ್ಪ ತಾನು ನಡೆಸುತ್ತಿದ್ದ ಸಭೆಯಲ್ಲಿ ನಿದ್ದೆ ಮಾಡಿದ್ದ ಅನ್ನೋ ಕಾರಣಕ್ಕೆ ಆತನನ್ನ ಕೊಲೆ ಮಾಡಿಸಿದ್ದ ಕಿಮ್ ಜಾಂಗ್ ಉನ್. ಹಸಿದ ನಾಯಿಗಳಿಗೆ ತನ್ನ ಚಿಕ್ಕಪ್ಪ ಹಾಗೂ ಉತ್ತರ ಕೊರಿಯಾ ಅಧಿಕಾರಿಯೂ ಆಗಿದ್ದ ವ್ಯಕ್ತಿಯನ್ನ ಬಲಿ ನೀಡಿದ್ದ. ಈಗ ತಾನು ಉಡಾಯಿಸಿದ ಮೊದಲನೇ ಮಿಲಿಟರಿ ಉಪಗ್ರಹ ಹಾಳಾಗಿ ನೀರಿಗೆ ಬಿದ್ದಿದೆ. ಈಗ ಯಾರ ತಲೆ ತೆಗೆಯುತ್ತಾನೋ? ಬನ್ನಿ ತಿಳಿಯೋಣ.

North Korean officers

ವಿಜ್ಞಾನಿಗಳನ್ನ ಕೊಲೆ ಮಾಡಿಸ್ತಾನಾ?

ತನ್ನ ಶತ್ರು ರಾಷ್ಟ್ರಗಳಿಗೆ ಪಾಠ ಕಲಿಸಬೇಕು, ಉತ್ತರ ಕೊರಿಯಾ ಪವರ್ ಏನು ಅನ್ನೋದನ್ನ ಇಡೀ ಜಗತ್ತಿಗೇ ತೋರಿಸಬೇಕು ಅನ್ನೋದು ಕಿಮ್ ಜಾಂಗ್ ಉನ್ ಪ್ಲ್ಯಾನ್ ಆಗಿತ್ತು. ಆದರೆ ಏನ್ ಮಾಡೋದು, ಕಿಮ್ ಜಾಂಗ್ ಉನ್ ಹಲವು ತಿಂಗಳ ಕಾಲ ಕಷ್ಟಪಟ್ಟು ನಿರ್ಮಿಸಿದ್ದ ಉಪಗ್ರಹ ಉಡಾವಣೆ ಆದ ದಿನವೇ ಢಮ್ ಅಂದಿದೆ. ಹೀಗಾಗಿ ಉತ್ತರ ಕೊರಿಯಾ ವಿಜ್ಞಾನಿಗಳಿಗೆ ಭಯ ಶುರುವಾಗಿದೆ. ಕಿಮ್ ಜಾಂಗ್ ಉನ್ ಸಿಟ್ಟಲ್ಲಿ ಯಾವ ಯಾವ ವಿಜ್ಞಾನಿಯ ಹೆಣ ತೆಗೆಯುತ್ತಾನೋ ಗೊತ್ತಿಲ್ಲ ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ರೊಚ್ಚಿಗೆದ್ದು ಕೂಗಾಡಿದ ಕಿಮ್!

ಉತ್ತರ ಕೊರಿಯಾ ತನ್ನ ಮೊದಲ ಮಿಲಿಟರಿ ಉಪಗ್ರಹ ಉಡಾವಣೆಗೆ ಹಲವು ವರ್ಷಗಳಿಂದ ಪ್ರಯತ್ನಪಟ್ಟಿತ್ತು. ಹೀಗಾಗಿ ಸಾಕಷ್ಟು ದಿನದಿಂದ ಉಡಾವಣೆಗೆ ಕಾದು ಕುಳಿತಿತ್ತು. ಇಂದು ಬೆಳಗ್ಗೆ 6.27ಕ್ಕೆ ಉತ್ತರ ಫಿಯೋಂಗನ್ ಪ್ರಾಂತ್ಯ, ಚೋಲ್ಸನ್ ಕೌಂಟಿಯ ಸೋಹೆ ಉಪಗ್ರಹ ಉಡಾವಣಾ ಮೈದಾನದಿಂದ ಉತ್ತರ ಕೊರಿಯಾದ ಮೊದಲ ಸೇನಾ ಉಪಗ್ರಹ ಹೊತ್ತಿದ್ದ ರಾಕೆಟ್ ಉಡಾವಣೆ ಆಗಿತ್ತು. ಆದರೆ ಹೀಗೆ ಲಾಂಚ್ ಮಾಡಿದ ಕೆಲವೇ ನಿಮಿಷದಲ್ಲಿ ಅದು ಸಮುದ್ರಕ್ಕೆ ಬಿದ್ದು ಹೋಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸರ್ವಾಧಿಕಾರಿ ಕಿಮ್ ಎಲ್ಲರ ಮೇಲೆ ಕೂಗಾಡಿದ್ದಾನೆ.

North Korean officers

ರಾಕೆಟ್‌ನಲ್ಲಿ ಸಮಸ್ಯೆ ಕಾಣಿಸಿದ್ದು ಹೇಗೆ?

ಉತ್ತರ ಕೊರಿಯಾ ತಂತ್ರಜ್ಞಾನದ ವಿಚಾರದಲ್ಲಿ ಅಷ್ಟೊಂದು ಮುಂದೆ ಇಲ್ಲ. ಹೀಗಾಗಿಯೇ 2ನೇ ಹಂತದಲ್ಲಿ ಇಂಜಿನ್ ಸಮಸ್ಯೆ ಕಾಣಿಸಿಕೊಂಡಿದ್ದು, ಚೋಲಿಮಾ-1 ರಾಕೆಟ್ ಮೊದಲ ಹಂತದ ಹಾರಾಟವನ್ನ ಸುಲಭವಾಗಿ ಪೂರ್ಣಗೊಳಿಸಿ, ಎರಡನೇ ಹಂತದಲ್ಲಿ ಇಂಜಿನ್ ಕೈಕೊಟ್ಟ ಪರಿಣಾಮ ಸರ್ವಾಧಿಕಾರಿ ಲೆಕ್ಕಾಚಾರ ಉಲ್ಟಾ ಆಗಿದೆ. ಇದೇ ಕಾರಣಕ್ಕೆ ತಕ್ಷಣ ಕಿಮ್ ಜಾಂಗ್ ಉನ್ ನಿರ್ಮಿಸಿದ್ದ ಕನಸಿನ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ. ಕೂಡಲೇ ಅದನ್ನ ಎಳೆದು ತರಲು ಉತ್ತರ ಕೊರಿಯಾ ಸೇನೆ ಮುಂದಾಗಿದೆ. ಇದೇ ಹೊತ್ತಲ್ಲಿ ಸರ್ವಾಧಿಕಾರಿ ಕೂಗಾಡಿದ್ದಾನಂತೆ.

ಸಮುದ್ರಕ್ಕೆ ಬಿದ್ದು ಸತ್ತುಹೋದ ಉಪಗ್ರಹ!

ಅಷ್ಟಕ್ಕೂ ಮೇ 31ರಿಂದ ಜೂನ್ 11 ರ ನಡುವೆ ಉತ್ತರ ಕೊರಿಯಾ ಮಿಲಿಟರಿ ಉಪಗ್ರಹ ಉಡಾವಣೆ ಮಾಡುವ ಬಗ್ಗೆ ಕಿಮ್ ಜಾಂಗ್ ಉನ್ ತಿಳಿಸಿದ್ದ. ಹೀಗಾಗಿ ಹೆಚ್ಚು ಟೆನ್ಷನ್ ಮಾಡಿಕೊಂಡಿದ್ದ ಜಪಾನ್, ತನ್ನ ಖಂಡಾಂತರ ಕ್ಷಿಪಣಿ ವ್ಯವಸ್ಥೆ ಅಲರ್ಟ್ ಮಾಡಿತ್ತು. ಅಕಸ್ಮಾತ್ ಉತ್ತರ ಕೊರಿಯಾ ಉಪಗ್ರಹ ವಾಯುಗಡಿ ಒಳಗೆ ಬಂದರೆ, ಅಲ್ಲೇ ಛಿದ್ರ ಮಾಡುವುದಾಗಿ ವಾರ್ನಿಂಗ್ ಕೊಟ್ಟಿತ್ತು ಜಪಾನ್. ಆದರೆ ಇವತ್ತು ಆ ರೀತಿಯ ಯಾವುದೇ ಸೀನ್ ನಡೆದಿಲ್ಲ. ಉತ್ತರ ಕೊರಿಯಾದ ಉಪಗ್ರಹ ನೇರವಾಗಿ ಸಮುದ್ರಕ್ಕೆ ಬಿದ್ದು ಸತ್ತು ಹೋಗಿದೆ.

North Korean officers

ಒಟ್ನಲ್ಲಿ ಹಿಟ್ಲರ್ ಸಂತಾನ ಕಿಮ್ ಜಾಂಗ್ ಉನ್ ಕೈಯಲ್ಲಿ ಸಿಲುಕಿರುವ ಉತ್ತರ ಕೊರಿಯಾ ಕ್ಷಣಕ್ಷಣಕ್ಕೂ ನರಳುತ್ತಿದೆ. ತಪ್ಪು ಮಾಡೋದು ಮನುಷ್ಯನ ಸಹಜ ಗುಣ, ಆದರೆ ಸರ್ವಾಧಿಕಾರಿ ಮತ್ತು ನರರೂಪಿ ರಾಕ್ಷಸ ಕಿಮ್ ಕಣ್ಣಿಗೆ ಸಣ್ಣ ಸಣ್ಣ ತಪ್ಪು ಕೂಡ ಹೆಣ ತೆಗೆಯುವಷ್ಟು ಭೀಕರ. ಹೀಗಾಗಿಯೇ ಕೋಟ್ಯಂತರ ಉತ್ತರ ಕೊರಿಯಾ ಪ್ರಜೆಗಳು ಕಿಮ್ ಜಾಂಗ್ ಉನ್ ವಿರುದ್ಧ ಹಿಡಿಶಾಪ ಹಾಕುತ್ತಿರೋದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+