2 ಸೆಂಮೀ ಗಿಂತ ಉದ್ದದ ತಲೆ ಕೂದಲಿದ್ರೆ ತಲೆದಂಡ!
ಸಿಯೋಲ್. ನ.28: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಮತ್ತೊಂದು ವಿಚಿತ್ರ ಆಜ್ಞೆ ಹೊರಡಿಸಿದ್ದಾರೆ. ದೇಶದ ಪುರುಷರೆಲ್ಲರೂ ಕಿಮ್ ಜೊಂಗ್ ನಂತೆ ಹೇರ್ ಸ್ಟೈಲ್ ಮಾಡಿಸಿಕೊಳ್ಳಬೇಕು ಎಂದು ಕಟ್ಟಪ್ಪಣೆ ಹೊರ ಬಿದ್ದಿದೆ.
ಪುರುಷರು ಮುಖವನ್ನು ಸಂಪೂರ್ಣವಾಗಿ ತನ್ನಂತೆ ಶೇವ್ ಮಾಡಿರಬೇಕು. ಕಿವಿಯ ಎಡ ಮತ್ತು ಬಲ ಭಾಗದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕೂದಲಿರಬಾರದು.ಜೊತೆಗೆ 2 ಸೆಂಟಿ ಮೀಟರ್ ಗಿಂತಲೂ ಹೆಚ್ಚು ಉದ್ದದ ಕೂದಲು ಬಿಡಬಾರದು ಎಂದು ಆದೇಶ ನೀಡಲಾಗಿದೆ. ಇನ್ನು ದೇಶದ ಮಹಿಳೆಯರು ಕಿಮ್ ಜೊಂಗ್ ಪತ್ನಿ ರಿ ಸೊಲ್-ಜು ನಂತೆ ಬಾಬ್ ಕಟ್ ಮಾಡಿಸಿಕೊಳ್ಳಬೇಕೆಂಬ ಆದೇಶ ಪ್ರಕಟಿಸಲಾಗಿದೆ.

ಸರ್ವಾದಿಕಾರಿಯ ಆದೇಶ ಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ಸಲೂನ್ ಗಳ ಮುಂದೆ ಪುರುಷರು ತಲೆ ಉಳಿಸಿಕೊಳ್ಳಲು ತಲೆ ಕೂದಲು ಕತ್ತರಿಸಲು ಕ್ಯೂ ನಿಂತುಕೊಂಡಿದ್ದಾರೆ.
ಕಿಮ್ ಜೊಂಗ್ ನಂತೆ ಆದೇಶ ಪಾಲಿಸದ ಜನರನ್ನು ಗುರುತಿಸಿ ಸರ್ಕಾರಕ್ಕೆ ತಿಳಿಸುವಂತೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಧಿಕಾರ ನೀಡಲಾಗಿದೆ. ಉದ್ದದ ತಲೆಕೂದಲು ಬಿಟ್ಟಿದ್ದರೆ ನಡು ರಸ್ತೆಯಲ್ಲಿ ವ್ಯಕ್ತಿಯ ತಲೆ ಕೂದಲನ್ನು ವಿದ್ಯಾರ್ಥಿಗಳು ಕತ್ತರಿಸುತ್ತಿದ್ದಾರೆ.
ಈ ಹಿಂದೆ ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನುವ ಕಾರಣಕ್ಕೆ ಕಳೆದ ವರ್ಷ ತನ್ನ ಸ್ವಂತ ಮಾವನನ್ನೆ ನಗ್ನಗೊಳಿಸಿ ಹಸಿದ ನಾಯಿಗಳಿಗೆ ಆಹಾರವಾಗಿ ನೀಡಿದ್ದ. ಈ ವರ್ಷದ ಮೇ ತಿಂಗಳಿನಲ್ಲಿ ಸಭೆಯಲ್ಲಿ ನಿದ್ದೆ ಮಾಡಿ ಮತ್ತು ಅದನ್ನು ಪ್ರಶ್ನಿಸಿದ್ದಕ್ಕೆ ತಿರುಗುತ್ತರ ನೀಡಿದ್ದಕ್ಕೆ ದೇಶದ ರಕ್ಷಣಾ ಸಚಿವನನ್ನೇ ಗುಂಡಿಟ್ಟು ಕೊಲ್ಲಿಸಿದ್ದ. 2011ರಲ್ಲಿ ಅಧಿಕಾರದ ಗದ್ದುಗೆ ಏರಿದ ಕಿಮ್ ಜೊಂಗ್ ಇಲ್ಲಿಯವರೆಗೆ 70ಕ್ಕೂ ಹೆಚ್ಚು ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿಯಿದೆ.











Click it and Unblock the Notifications