Get Updates
Get notified of breaking news, exclusive insights, and must-see stories!

ಮೊದಲ ಬಾರಿ ಹೊರಜಗತ್ತಿಗೆ ಮುದ್ದು ಮಗಳನ್ನು ಪರಿಚಯಿಸಿದ ಕಿಮ್-ಜಾಂಗ್-ಉನ್

ಸೋಲ್, ನವೆಂಬರ್ 19: ಸೀಕ್ರೆಟ್ ಅಂದರೆ ಕಿಮ್ ಜಾಂಗ್ ಉನ್. ಉತ್ತರ ಕೊರಿಯಾದ ಈ ಸರ್ವಾಧಿಕಾರಿಯ ಪ್ರತಿಯೊಂದು ನಡೆಗಳು ಗುಪ್ತ್ ಗುಪ್ತ್ ಆಗಿಯೇ ನಡೆಯುತ್ತವೆ. ಕಿಮ್ ಜಾಂಗ್ ಉನ್ ಮಾಡುವ ಕ್ಷಿಪಣಿ ಪರೀಕ್ಷೆಗಳು ಯಶಸ್ವಿ ಆಗುವವರೆಗೂ ಹೊರಜಗತ್ತಿಗೆ ತಿಳಿಯುವುದಿಲ್ಲ. ಅಂಥದರಲ್ಲಿ ಮೊದಲ ಬಾರಿಗೆ ಇದೇ ಕಿಮ್ ಜಾಂಗ್ ಉನ್ ತಮ್ಮ ಮಗಳನ್ನು ಹೊರ ಜಗತ್ತಿಗೆ ಪರಿಚಯಿಸಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿಯು ತನ್ನ ಉತ್ತರಾಧಿಕಾರಿ ಆಗಿರುವ ತಮ್ಮ ಮಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಹೊರ ಜಗತ್ತಿಗೆ ತಮ್ಮ ಮಗಳು ಯಾರು, ಹೇಗಿದ್ದಾಳೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ತಂದೆ-ಮಗಳ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಕಿಮ್ ಜಾಂಗ್ ಉನ್ ಮಗಳು ಈಗ ಸುದ್ದಿ ಮಾಡುವುದಕ್ಕೆ ಕಾರಣವೇನು?, ಇದೇ ಮೊದಲ ಬಾರಿಗೆ ಮಗಳ ಜೊತೆಗೆ ಸರ್ವಾಧಿಕಾರಿಯು ಕಾಣಿಸಿಕೊಂಡಿದ್ದು ಏಕೆ?, ಕಿಮ್ ಜಾಂಗ್ ಉನ್ ಮುದ್ದು ಮಗಳು ಹೇಗಿದ್ದಾಳೆ ಎಂಬ ಕುತೂಹಲಕ್ಕೆ ಉತ್ತರವನ್ನು ಮುಂದೆ ಓದಿ ತಿಳಿಯಿರಿ.

 ಕಿಮ್ ಜಾಂಗ್ ಉನ್ ತನ್ನ ಮಗಳನ್ನು ಪರಿಚಯಿಸಿದ್ದು ಯಾವಾಗ?

ಕಿಮ್ ಜಾಂಗ್ ಉನ್ ತನ್ನ ಮಗಳನ್ನು ಪರಿಚಯಿಸಿದ್ದು ಯಾವಾಗ?

ಉತ್ತರ ಕೊರಿಯಾವು ನವೆಂಬರ್ 18ರ ಶುಕ್ರವಾರದಂದು ಹ್ವಾಸಾಂಗ್-17 ಖಂಡಾಂತರ ಕ್ಷಿಪಣಿ (ICBM) ಪರೀಕ್ಷೆ ನಡೆಸಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ KCNA ಶನಿವಾರ ವರದಿ ಮಾಡಿದೆ. ಈ ಸಂದರ್ಭದಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಜೊತೆಗೆ ಮಗಳು ಸಹ ಪರಮಾಣು ಸಶಸ್ತ್ರ ದೇಶದ ಅತಿದೊಡ್ಡ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯನ್ನು ಪರಿಶೀಲಿಸುತ್ತಿರುವ ಕಂಡು ಬಂದಿದೆ. ಈ ತಂದೆ-ಮಗಳ ಜೋಡಿಯ ಫೋಟೋಗಳೊಂದಿಗೆ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ಜಗತ್ತಿನ ಎದುರಿಗೆ ಕಿಮ್ ಜಾಂಗ್ ಉನ್, ತಮ್ಮ ಮಗಳನ್ನು ಮೊದಲ ಬಾರಿಗೆ ಪರಿಚಯಿಸಿದ್ದಾರೆ.

ಅದಾಗ್ಯೂ, ಕೆಸಿಎನ್‌ಎ ಸಂಸ್ಥೆಯು ಹುಡುಗಿಯನ್ನು ಹೆಸರಿಸಿಲ್ಲ, ಅವರು ಬಿಳಿ ಪಫಿ ಕೋಟ್‌ನಲ್ಲಿ ತಮ್ಮ ತಂದೆಯೊಂದಿಗೆ ಕೈ ಹಿಡಿದುಕೊಂಡು ಬೃಹತ್ ಕ್ಷಿಪಣಿಯನ್ನು ನೋಡುತ್ತಿರುವ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

 ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ಪುತ್ರಿ

ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ಪುತ್ರಿ

"ನಾವು ಸಾರ್ವಜನಿಕ ಸಮಾರಂಭದಲ್ಲಿ ಕಿಮ್ ಜಾಂಗ್ ಉನ್ ಅವರ ಮಗಳನ್ನು ನೋಡಿದ ಮೊದಲ ಸಂದರ್ಭವಾಗಿದೆ," ಎಂದು ಯುಎಸ್ ಮೂಲದ ಸ್ಟಿಮ್ಸನ್ ಸೆಂಟರ್‌ನಲ್ಲಿ ಉತ್ತರ ಕೊರಿಯಾ ನಾಯಕತ್ವ ತಜ್ಞ ಮೈಕೆಲ್ ಮ್ಯಾಡೆನ್ ಹೇಳಿದ್ದಾರೆ. "ಇದು ಹೆಚ್ಚು ಮಹತ್ವದ್ದಾಗಿದ್ದು, ಕಿಮ್ ಜಾಂಗ್ ಉನ್ ಅವರ ಕಡೆಯಿಂದ ಒಂದು ನಿರ್ದಿಷ್ಟ ಮಟ್ಟದ ಸೌಕರ್ಯವನ್ನು ಪ್ರತಿನಿಧಿಸುತ್ತದೆ, ಅವರು ಅಂತಹ ಶೈಲಿಯಲ್ಲಿ ಅವಳನ್ನು ಸಾರ್ವಜನಿಕವಾಗಿ ಹೊರಗೆ ತರುತ್ತಾರೆ," ಎಂದು ಉಲ್ಲೇಖಿಸಿದ್ದಾರೆ.

ಕಿಮ್‌ಗೆ ಮೂವರು ಮಕ್ಕಳಿದ್ದು, ಇಬ್ಬರು ಹುಡುಗಿಯರು ಮತ್ತು ಒಬ್ಬ ಹುಡುಗ ಇದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಕೆಲವು ವೀಕ್ಷಕರು ಆ ಮಕ್ಕಳಲ್ಲಿ ಒಬ್ಬರು ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ರಜಾದಿನದ ಆಚರಣೆಗಳ ತುಣುಕಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಂಬಲಾಗಿತ್ತು.

 ಡೆನ್ನಿಸ್ ರಾಡ್‌ಮನ್ ಉಲ್ಲೇಖಿಸಿದ್ದ ಕಿಮ್ ಜಾಂಗ್ ಉನ್ ಪುತ್ರಿ

ಡೆನ್ನಿಸ್ ರಾಡ್‌ಮನ್ ಉಲ್ಲೇಖಿಸಿದ್ದ ಕಿಮ್ ಜಾಂಗ್ ಉನ್ ಪುತ್ರಿ

ಕಳೆದ 2013ರಲ್ಲಿ ನಿವೃತ್ತ ಅಮೇರಿಕನ್ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್, ಕಿಮ್‌ಗೆ ಜು ಏ ಎಂಬ ಮಗಳು ಇದ್ದಳು ಎಂದು ಹೇಳಿದ್ದರು. ಅದೇ ವರ್ಷ ಉತ್ತರ ಕೊರಿಯಾ ಪ್ರವಾಸದ ನಂತರ ಈ ಕುರಿತು ಮಾತನಾಡಿದ್ದ ರಾಡ್‌ಮನ್, ಕಿಮ್ ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದರು. ಈ ಸಮಯದಲ್ಲಿ ಕಿಮ್ ಜಾಂಗ್ ಉನ್ ಪುತ್ರಿ ಜು ಎಗೆ ಸುಮಾರು 12-13 ವರ್ಷ ವಯಸ್ಸಾಗಿತ್ತು ಎಂದು ಅಂದಾಜಿಸಲಾಗಿದೆ. ಅಂದರೆ ಸುಮಾರು ನಾಲ್ಕರಿಂದ ಐದು ವರ್ಷಗಳಲ್ಲಿ ಅವರು ವಿಶ್ವವಿದ್ಯಾನಿಲಯಕ್ಕೆ ಹಾಜರಾಗಲು ಅಥವಾ ಮಿಲಿಟರಿ ಸೇವೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು.

 ಕಿಮ್ ಜೊತೆಗೆ ಪುತ್ರಿಯಷ್ಟೇ ಅಲ್ಲದೇ ಪತ್ನಿಯೂ ಹಾಜರ್

ಕಿಮ್ ಜೊತೆಗೆ ಪುತ್ರಿಯಷ್ಟೇ ಅಲ್ಲದೇ ಪತ್ನಿಯೂ ಹಾಜರ್

ಕೆಸಿಎನ್‌ಎ ವರದಿಯ ಪ್ರಕಾರ, ಶುಕ್ರವಾರದ ಉಡಾವಣೆಯ ಸಂದರ್ಭದಲ್ಲಿ ಕಿಮ್ ಜಾಂಗ್ ಉನ್ ಅವರ ಪತ್ನಿ ರಿ ಸೋಲ್ ಜು ಕೂಡ ಅಪರೂಪವಾಗಿ ಕಾಣಿಸಿಕೊಂಡರು. "ರಿ ಸೋಲ್ ಜು ಕಾಣಿಸಿಕೊಂಡಿರುವುದರ ಹಿಂದೆ ವಿಶಿಷ್ಟ ಕಾರ್ಯತಂತ್ರ ಅಡಗಿದೆ. ಸಾಮಾನ್ಯವಾಗಿ ಉದ್ವಿಗ್ನತೆಯನ್ನು ತಗ್ಗಿಸಲು, ಇತರ ಆಕ್ರಮಣಕಾರಿ ಸಂದೇಶಗಳನ್ನು ಎದುರಿಸಲು (ಪರೀಕ್ಷೆಗಳಂತೆ) ಅಥವಾ ಆಂತರಿಕ ತೊಂದರೆಗಳ ಸಮಯದಲ್ಲಿ ಕಿಮ್ ಕುಟುಂಬದ ಒಗ್ಗಟ್ಟನ್ನು ಈ ರೀತಿ ಪ್ರದರ್ಶಿಸುತ್ತಾರೆ ಎಂದು ಉತ್ತರ ಕೊರಿಯಾದ ನಾಯಕತ್ವ ತಜ್ಞ ಕೆನ್ ಗೌಸ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+