ಕಿಮ್ ಜಾಂಗ್ ಉನ್ ಆರೋಗ್ಯದ ಕುರಿತಾದ ಮತ್ತೊಂದು ಸುದ್ದಿಯೂ ಸುಳ್ಳು!
ಸಿಯೋಲ್, ಮೇ 4: ''ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಬ್ರೇನ್ ಡೆಡ್ ಆಗಿದೆ. ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆ'' ಎಂಬ ಸುದ್ದಿಗಳು ಇತ್ತೀಚೆಗೆ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದವು.
Recommended Video
ಆದ್ರೆ, ಇವೆಲ್ಲವೂ ಸುಳ್ಳು ಎಂಬುದು ಮೊನ್ನೆಯಷ್ಟೇ ಸಾಕ್ಷಿ ಸಮೇತ ಸಾಬೀತಾಯಿತು. ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಅಂತೆ-ಕಂತೆಗಳಿಗೂ ಕಿಮ್ ಜಾಂಗ್ ಉನ್ ಫುಲ್ ಸ್ಟಾಪ್ ಇಟ್ಟರು.
ಸತತ 23 ದಿನಗಳ ಬಳಿಕ ರಾಜಧಾನಿ ಪ್ಯೊಂಗ್ಯಾಂಗ್ ಸಮೀಪವಿರುವ ಸಾನ್ ಚೂನ್ ನಲ್ಲಿನ ಕಾರ್ಯಕ್ರಮವೊಂದರಲ್ಲಿ ಕಿಮ್ ಜಾಂಗ್ ಉನ್ ಪ್ರತ್ಯಕ್ಷವಾಗಿ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದರು.
ಇದೀಗ ಕಿಮ್ ಜಾಂಗ್ ಉನ್ ಕುರಿತಾದ ಮತ್ತೊಂದು ಸುದ್ದಿಯೂ ಸುಳ್ಳು ಎಂದು ತಿಳಿದುಬಂದಿದೆ. ಏನದು, ನೀವೇ ಓದಿರಿ

ಶಸ್ತ್ರಚಿಕಿತ್ಸೆಗೆ ಒಳಗಾಗಿರಲಿಲ್ಲ
''ಕಿಮ್ ಜಾಂಗ್ ಉನ್ ಯಾವುದೇ ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ವಿಧಾನಕ್ಕೆ ಒಳಗಾಗಿರಲಿಲ್ಲ'' ಎಂದು ದಕ್ಷಿಣ ಕೊರಿಯಾದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ಬಿಡುಗಡೆ
ಫರ್ಟಿಲೈಝರ್ ಕಾರ್ಖಾನೆಯ ಸಮಾರಂಭದಲ್ಲಿ ಕಿಮ್ ಜಾಂಗ್ ಉನ್ ಕಾಣಿಸಿಕೊಂಡಿದ್ದ ವಿಡಿಯೋವನ್ನು ಉತ್ತರ ಕೊರಿಯಾ ಕಳೆದ ಶನಿವಾರ ಬಿಡುಗಡೆ ಮಾಡಿತ್ತು.

ತಾತನ ಜನ್ಮದಿನಾಚರಣೆಗೆ ಗೈರು
ಏಪ್ರಿಲ್ 15 ರಂದು ಕಿಮ್ ಜಾಂಗ್ ಉನ್ ಅವರ ತಾತ ದಿವಂಗತ ಕಿಮ್ ಇಲ್ ಸುಂಗ್ ಅವರ 108ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಿಮ್ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದವು.

2014 ರಲ್ಲೂ ಹೀಗೇ ಆಗಿತ್ತು
ಕಿಮ್ ಜಾಂಗ್ ಉನ್ ಸಾರ್ವಜನಿಕ ಜೀವನದಿಂದ ನಾಪತ್ತೆಯಾಗಿರುವುದು ಇದೇ ಮೊದಲನೇನಲ್ಲ. 2014 ಸೆಪ್ಟೆಂಬರ್ ನಲ್ಲೂ 40 ದಿನಗಳ ಕಾಲ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿ ಮತ್ತೆ ಕಾಣಿಸಿಕೊಂಡಿದ್ದರು.












Click it and Unblock the Notifications