ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ತೂಕ ಇಳಿಕೆ: ಆರೋಗ್ಯ ಸಮಸ್ಯೆ ಬಗ್ಗೆ ಊಹಾಪೋಹ
ಉತ್ತರ ಕೊರಿಯಾ, ಜೂ. 10: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಧಿಡೀರ್ ತೆಳ್ಳಗಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕಿಮ್ ಜೊಂಗ್ ಉನ್‌ರ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಊಹಾಪೋಹ ಸೃಷ್ಟಿಗೆ ಎಡೆಮಾಡಿಕೊಟ್ಟಿದೆ. 2020 ರ ಸರ್ವಾಧಿಕಾರಿ ಕಿಮ್ ಫೋಟೋ ಹಾಗೂ ಈಗಿನ ಫೋಟೋವನ್ನು ತುಲನೆ ಮಾಡಲಾಗಿದ್ದು ಕಿಮ್ ಭಾರೀ ತೂಕ ಇಳಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಿದೆ.
ಕಿಮ್‌ನ ದೇಹ ತೂಕ ಭಾರೀ ಕಡಿಮೆಯಾಗಿರುವುದು ಸುಮಾರು ಒಂದು ತಿಂಗಳ ಬಳಿಕ ರಾಜ್ಯ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿದೆ. ಉತ್ತರ ಕೊರಿಯಾದ ಸರ್ವೋಚ್ಚ ನಾಯಕನ ಇತ್ತೀಚಿನ ವ್ಯಕ್ತಿತ್ವದ ವಿವರವಾದ ವಿಶ್ಲೇಷಣೆಯನ್ನು ಎನ್‌ಕೆ ನ್ಯೂಸ್ ಮಾಡಿದೆ. ಈ ವರದಿಯಲ್ಲಿ 2020 ರ ನವೆಂಬರ್‌ನಲ್ಲಿ ಬಿಡುಗಡೆಯಾದ ಕಿಮ್ ಛಾಯಾಚಿತ್ರ ಹಾಗೂ ಪ್ರಸ್ತುತ ಛಾಯಾಚಿತ್ರಗಳನ್ನು ವಿಶ್ಲೇಷಿಸಲಾಗಿದೆ. ವಿಡಿಯೋವೊಂದನ್ನು ಗಮನಿಸಿದಾಗ ಕಿಮ್ ದೇಹದ ತೂಕ ತೆಳ್ಳಗಾಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ಅಷ್ಟಕ್ಕೂ ಕಿಮ್ ತೆಳಗಾಗಿದ್ದಾರೆ ಎಂಬ ಬಗ್ಗೆ ಕಿಮ್‌ನ ವಾಚ್ ಸ್ಪಷ್ಟಪಡಿಸಿದೆ. ''ಇತ್ತೀಚೆಗೆ ಬಿಡುಗಡೆಯಾದ ಕಿಮ್ ಫೋಟೋಗಳಲ್ಲಿ ಕಿಮ್ ತನ್ನ ವಾಚನ್ನು ಬಹಳ ಬಿಗಿಯಾಗಿ ಕಟ್ಟಿರುವಂತೆ ಕಾಣುತ್ತಿದ್ದು ಇದು ಕಿಮ್ ತೆಳ್ಳಗಾಗಿರುವುದರಿಂದ ವಾಚನ್ನು ಇಷ್ಟು ಬಿಗಿಯಾಗಿ ಕಟ್ಟಲಾಗಿದೆ'' ಎಂದು ವರದಿಯಾಗಿದೆ.

ಹಲವು ಸಮಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ಕಿಮ್ ಆರೋಗ್ಯದ ಬಗ್ಗೆ ಹಲವಾರು ಊಹಾಪೋಹಗಳು ಕೇಳಿಬಂದಿದ್ದವು. ಕಿಮ್ ಆರೋಗ್ಯದ ಬಗ್ಗೆ ಹಾಗೂ ಸಾವಿನ ಬಗ್ಗೆಯೂ ವರದಿಗಳು ಆಗಿದ್ದವು. ಆದರೆ ಜೂನ್ 6 ರಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಎಲ್ಲಾ ವದಂತಿಗಳಿಗೆ ತೆರೆ ಎಳೆದಿತ್ತು.
ವರದಿಯ ಪ್ರಕಾರ, ''ಕಿಮ್ ಜೊಂಗ್-ಉನ್ ನವೆಂಬರ್ 2020 ರಲ್ಲಿ ಸುಮಾರು 140 ಕೆಜಿ ತೂಕವಿದ್ದರು. 2011 ರಲ್ಲಿ ತಾನು ಅಧಿಕಾರ ಸ್ವೀಕರಿಸಿದ ದಿನದಿಂದ ನವೆಂಬರ್ 2020 ರವರೆಗೆ ಸುಮಾರು 50 ಕೆಜಿ ತೂಕ ಹೆಚ್ಚಾಗಿತ್ತು. ಕಿಮ್ ತೂಕ ನಷ್ಟವು ಜೀವನಶೈಲಿಯ ಬದಲಾವಣೆ ಅಥವಾ ಆರೋಗ್ಯ ಸಮಸ್ಯೆಯಿಂದ ಆಗಿರಬಹುದು'' ಎಂದು ಊಹಿಸಲಾಗಿದೆ.
ಸುಮಾರು ನಾಲ್ಕು ತಿಂಗಳ ಅಂತರದ ನಂತರ, ಕಿಮ್ ಜೊಂಗ್-ಉನ್ ಜೂನ್ 6 ರಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಉತ್ತರ ಕೊರಿಯಾದ ಮಿಲಿಟರಿ ಕುಟುಂಬಗಳೊಂದಿಗೆ ಫೋಟೋಗೆ ಪೋಸ್ ನೀಡಿದ್ದರು. ಇನ್ನು ಈ ವಾರದ ನಂತರ ಕಿಮ್ ಪಕ್ಷದ ಸಮಗ್ರ ಸಭೆಯನ್ನು ನಡೆಸಲಿದ್ದು ಈ ಚರ್ಚೆಗಳು ಹಲವಾರು ದಿನಗಳವರೆಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು 37 ವರ್ಷದ ಸರ್ವಾಧಿಕಾರಿ ಕಿಮ್ ಸಾರ್ವಜನಿಕವಾಗಿ ಕಣ್ಮರೆಯಾಗುವುದು ಇದೇನು ಮೊದಲಲ್ಲ, 2014 ರಲ್ಲಿ, ಸುಮಾರು ಆರು ವಾರಗಳ ಕಾಲ ಸಾರ್ವಜನಿಕರ ಕಣ್ಣಿಗೆ ಬೀಳದ ಕಿಮ್ ಆರೋಗ್ಯದ ಬಗ್ಗೆ ಆ ಸಂದರ್ಭದಲ್ಲೂ ಊಹಾಪೋಹಗಳು ಸೃಷ್ಟಿಯಾಗಿದ್ದವು. ಹಾಗೆಯೇ ಭಾರೀ ತೂಕವನ್ನು ಹೊಂದಿದ್ದ ಕಿಮ್‌ಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳು ಉತ್ತರ ಕೊರಿಯಾ ಮಾಧ್ಯಮಗಳು ವರದಿ ಮಾಡಿದ್ದವು.
(ಒನ್‌ಇಂಡಿಯಾ ಸುದ್ದಿ)
-
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications