3ನೇ ಮಹಾಯುದ್ಧ: ಮುಂದೈತೆ ಶತ್ರುಗಳಿಗೆ ಮಾರಿಹಬ್ಬ!

ಉ.ಕೊರಿಯಾ: ಉತ್ತರ ಕೊರಿಯಾ ಸರ್ವಾಧಿಕಾರಿ ಈಗ ಅಕ್ಷರಶಃ ರೊಚ್ಚಿಗೆದ್ದಿದ್ದಾನೆ. ತನ್ನ ಶತ್ರುಗಳ ಸರ್ವನಾಶಕ್ಕೆ ಸಿದ್ಧನಾಗಿದ್ದಾನೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಆಟಕ್ಕೆ ಬೆಂಕಿ ಹಚ್ಚಲು ಕಿಮ್ ಜಾಂಗ್ ಉನ್ (kim jong un) ಕರೆ ನೀಡಿದ್ದು, ಉತ್ತರ ಕೊರಿಯಾ (north korea) ತನ್ನ ಮೊಟ್ಟ ಮೊದಲ ಗುಪ್ತಚರ ಉಪಗ್ರಹ ಉಡಾವಣೆ ಮಾಡಲು ತಯಾರಿ ನಡೆಸಿದೆ.

ಈ ಕುರಿತು ಖುದ್ದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾಹಿತಿ ನೀಡಿದ್ದು, ನಮ್ಮ ದೇಶ ಮೊಟ್ಟ ಮೊದಲ ಗುಪ್ತಚರ ಉಪಗ್ರಹವನ್ನು ಸಿದ್ಧಪಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದನ್ನು ಉಡಾಯಿಸಲಾಗುವುದು ಎಂದಿದ್ದಾನೆ. ಈಗಾಗಲೇ ಪರಮಾಣು ಕ್ಷಿಪಣಿಗಳ ಮೂಲಕ ಹೆಸರು ಮಾಡಿರುವ ಕಿಮ್ ಜಾಂಗ್ ಉನ್, ಈಗ ಗುಪ್ತಚರ ಉಪಗ್ರಹದ ಮೂಲಕ ಶತ್ರುಗಳ ಎದೆ ನಡುಗಿಸಲು ಸಜ್ಜಾಗಿದ್ದಾನೆ. ಈ ಮಾಹಿತಿ ಸಿಗುತ್ತಿದ್ದಂತೆ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬೆಚ್ಚಿಬಿದ್ದಿದೆ.

North Korea finished building military spy satellite

ಕಳೆದ ವಾರ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡೆಸುತ್ತಿರುವ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಕಂಡು ಬೆಚ್ಚಿಬಿದ್ದ ದಕ್ಷಿಣ ಕೊರಿಯಾ (south korea), ತನ್ನ ಪರಮಾಪ್ತ ಸ್ನೇಹಿತ ಅಮೆರಿಕ ಮತ್ತು ಜಪಾನ್ ಜೊತೆ ಸೇರಿ ಸಮರಾಭ್ಯಾಸ ಆರಂಭಿಸಿತ್ತು. ಈ ಸಂದರ್ಭದಲ್ಲಿ ಕಿಮ್ ಮಹತ್ವದ ಘೋಷಣೆ ಹೊರಡಿಸಿದ್ದಾನೆ. ಯುದ್ಧಕ್ಕೆ ತಾನು ಸಿದ್ಧ, ನೀವು ಅಖಾಡಕ್ಕೆ ಬನ್ನಿ ಎಂದು ರಣವೀಳ್ಯ ನೀಡಿದ್ದಾನೆ. ಅದರಲ್ಲೂ ಅಮೆರಿಕ ಕೂಡ ಕಿಮ್ ಧೈರ್ಯಕ್ಕೆ ಬೆಚ್ಚಿಬಿದ್ದಿದೆ.

ಕಳೆದ ವಾರವೂ ಇಂತಹದ್ದೇ ಶಾಕ್!

ಕಳೆದ ವಾರವಷ್ಟೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗದ ಮತ್ತು ಶತ್ರುಗಳ ನೆಲವನ್ನ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ಸಿಕ್ಕಿತ್ತು. ಈ ಹೊತ್ತಲ್ಲೇ ಶತ್ರುಗಳ ಎದೆ ನಡುಗಿಸಲು ಗುಪ್ತಚರ ಉಪಗ್ರಹ ಕೂಡ ಉಡಾಯಿಸುತ್ತಿದ್ದಾನೆ ಕಿಮ್.

North Korea finished building military spy satellite

ಜಂಟಿ ಸಮರಭ್ಯಾಸ ತಂದ ಕಂಟಕ?

ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಜಂಟಿಯಾಗಿ ದಕ್ಷಿಣ ಕೊರಿಯಾ ಕಡಲ ತೀರದಲ್ಲಿ ಕ್ಷಿಪಣಿ ನಿಗ್ರಹ ಸಮರಾಭ್ಯಾಸ ನಡೆಸಿವೆ. ಸಮರಾಭ್ಯಾಸದಲ್ಲಿ ಸುಮಾರು 110 ಯುದ್ಧ ವಿಮಾನಗಳ ಭಾಗಿಯಾಗಿವೆ. ಏಪ್ರಿಲ್ 28ರ ವರೆಗೂ ಈ ಜಂಟಿ ಸಮರಭ್ಯಾಸ ನಡೆಸಲು ಅಮೆರಿಕ, ದಕ್ಷಿಣ ಕೊರಿಯಾ ನಿರ್ಧಾರ ಮಾಡಿವೆ. ಈ ಹೊತ್ತಲ್ಲೇ ಕಿಮ್ ಜಾಂಗ್ ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ನಾಯಕರಿಗೆ ಖಡಕ್ ಮೆಸೇಜ್ ಕೊಟ್ಟು ಬೆಚ್ಚಿಬೀಳುವಂತೆ ಮಾಡಿದ್ದಾನೆ.

ಉ.ಕೊರಿಯಾ ಜೊತೆ ಚೀನಾ

ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಅದೇ ಕಿತಾಪತಿ ಮಾಡುತ್ತಿದೆ. ಪದೇಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೊತ್ತಲ್ಲೇ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಇದೇ ತಂತ್ರ ಅನುಸರಿಸುತ್ತಿರುವುದು ಚೀನಾ ಗಮನಕ್ಕೆ ಬಂದಿದೆ. ಹೀಗಾಗಿ ನಮ್ಮ ಜೊತೆ ಮತ್ತಷ್ಟು ಹತ್ತಿರವಾಗಿ, ಶತ್ರುಗಳನ್ನು ಸದೆಬಡಿಯೋಣ ಎಂಬ ಸಂದೇಶ ಚೀನಾ ನೆಲದಿಂದ ಉತ್ತರ ಕೊರಿಯಾಗೆ ತಲುಪಿದೆ.

North Korea finished building military spy satellite

100ಕ್ಕೂ ಹೆಚ್ಚು ಕ್ಷಿಪಣಿ ಪ್ರಯೋಗ

ಈಗ ಹೊಸ ಉಪಗ್ರಹ ಉಡಾವಣೆಗೆ ಸಜ್ಜಾಗಿರುವ ಕಿಮ್ ಜಾಂಗ್ ಉನ್ ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಅದೆಷ್ಟು ರೊಚ್ಚಿಗೆದ್ದಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದ್ದಾನೆ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸುತ್ತಿದ್ದಾನೆ. ಇದಕ್ಕೂ ಬಗ್ಗದ ಶತ್ರುಪಡೆಗೆ ಗುಪ್ತಚರ ಉಪಗ್ರಹದ ಶಾಕ್ ಟ್ರೀಟ್‌ಮೆಂಟ್ ಕೊಡಲು ಮುಂದಾಗಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+