ಕೊರೊನಾ ವೈರಸ್: ಉನ್ನತ ಅಧಿಕಾರಿಯ ಗುಂಡಿಕ್ಕಿ ಬರ್ಭರ ಹತ್ಯೆ

ಪ್ಯೋನ್ ಗ್ಯಾಂಗ್, ಫೆ 14: ಚೀನಾದಲ್ಲಿ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಶುಕ್ರವಾರಕ್ಕೆ (ಫೆ 14) 1500ರ ಗಡಿ ದಾಟಿದೆ. ಈ ನಡುವೆ, ಉತ್ತರ ಕೊರಿಯಾದ ಸರ್ವಾಧಿಕಾರಿ ತನ್ನ ಅಧಿಕಾರಿಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದಾನೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇತ್ತೀಚೆಗೆ ಚೀನಾಗೆ ಉನ್ನತ ಅಧಿಕಾರಿಯೊಬ್ಬರ ಜೊತೆ ಭೇಟಿ ನೀಡಿದ್ದರು. ಚೀನಾದಿಂದ ವಾಪಸ್ ಬಂದ ಮೇಲೆ, ತನ್ನ ಜೊತೆಗೆ ಆಗಮಿಸಿದ್ದ ಅಧಿಕಾರಿಯನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದರು.

ಅದರಂತೇ, ಕೊರಿಯಾ ಸರಕಾರ ಅಧಿಕಾರಿಯನ್ನು ಪ್ರತ್ಯೇಕ ಸ್ಥಳದಲ್ಲಿರಿಸಿ, ಮೂವತ್ತು ದಿನಗಳ ಕಾಲ ಹೊರಗೆ ಬರದಂತೆ ಆದೇಶಿದ್ದರು. ಆದರೆ, ಆ ಅಧಿಕಾರಿ, ಆದೇಶವನ್ನು ಉಲ್ಲಂಘನೆ ಮಾಡಿದ್ದರು.

North Korea Executes Top Official For Leaving Coronavirus Quarantine To Go To Baths

ತನ್ನನ್ನು ಇರಿಸಲಾಗಿದ್ದ ಸ್ಥಳದ ಪಕ್ಕದಲ್ಲಿದ್ದ ಕೆರೆಯಲ್ಲಿ ಸ್ನಾನ ಮಾಡುವುದಕ್ಕೆ ತೆರಳಿದ್ದರು. ಈ ವಿಚಾರ, ಉತ್ತರ ಕೊರಿಯಾದ ಅಧಿಕಾರಿಗಳ ಗಮನಕ್ಕೆ ಬಂದು ಕಿಮ್ ಜಾಂಗ್ ಗಮನಕ್ಕೆ ತಂದಿದ್ದಾರೆ.

ಅಧಿಕಾರಿಯನ್ನು ಗುಂಡಿಕ್ಕಿ ಸಾಯಿಸುವಂತೆ ಸರ್ವಾಧಿಕಾರಿ ಆದೇಶ ನೀಡಿದ ಹಿನ್ನಲೆಯಲ್ಲಿ, ಸರಕಾರ ಚಾಚೂತಪ್ಪದೇ ಆ ಕೆಲಸವನ್ನು ಮಾಡಿ ಮುಗಿಸಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಕೊರಿಯಾದ ರೆಡ್ ಕ್ರಾಸ್ ಸೊಸೈಟಿ ದೇಶದ ವಿವಿಧ ಕಡೆ ವಿಶೇಷ ಕೌಂಟರ್ ಗಳನ್ನು ಹಾಕಿ, ತೀವ್ರ ನಿಗಾಯಿರಿಸಿದೆ. ಇದುವರೆಗೆ, ಆ ದೇಶದಲ್ಲಿ ಕೊರೊನಾದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+