ಟ್ರಂಪ್- ನಿಕ್ಕಿ ಹಾಲೆ ಸಂಬಂಧದ ಬಗ್ಗೆ ಕಲರ್ ಕಥೆ ಹೇಳಿದ ವುಲ್ಫ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿ ನಿಕ್ಕಿ ಹಾಲೆಗೆ ಸಂಬಂಧ ಇದೆ ಎಂಬ ಆರೋಪವನ್ನು ಅವರು ಕಟುವಾದ ಶಬ್ದಗಳಿಂದ ನಿರಾಕರಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಿಕ್ಕಿ ಹಾಲೆ ಬಗ್ಗೆ 'ಫೈರ್ ಅಂಡ್ ಫ್ಯೂರಿ' ಪುಸ್ತಕ ಬರೆದಿರುವ ಮೈಕೆಲ್ ವುಲ್ಫ್ ಬಹಿರಂಗ ಪಡಿಸಿರುವ ಸಂಗತಿಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿಕ್ಕಿ ಹಾಲೆ- ಡೊನಾಲ್ಡ್ ಟ್ರಂಪ್ ಮಧ್ಯೆ ಸಂಬಂಧ ಇದೆ ಎಂದು ಹೇಳಿದ್ದಾರೆ.

"ರಾಷ್ಟ್ರಾಧ್ಯಕ್ಷರು ಏರ್ ಫೋರ್ಸ್ ಒನ್ ನಲ್ಲಿ ಹಾಲೆ ಜತೆಗೆ ಸಾಕಷ್ಟು ಸಮಯ ಕಳೆದಿದ್ದಾರೆ. ಅದು ಹಾಲೆ ರಾಜಕೀಯ ಭವಿಷ್ಯ ರೂಪಿಸುವುದಕ್ಕೆ ಇರಬೇಕು" ಎಂದಿದ್ದಾರೆ ವುಲ್ಫ್. "ಇದು ಖಂಡಿತಾ ನಿಜವಲ್ಲ" ಎಂದಿದ್ದಾರೆ ಹಾಲೆ.

Nikki Haley

"ನಾನು ಏರ್ ಫೋರ್ಸ್ ಒನ್ ನಲ್ಲಿ ಇದ್ದದ್ದು ಒಂದೇ ಒಂದು ಸಲ. ಆಗ ಆ ರೂಮಿನಲ್ಲಿ ಹಲವರು ನನ್ನ ಜತೆಗೆ ಇದ್ದರು" ಎಂದು ಹಾಲೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕಳೆದ ಜುಲೈನಲ್ಲಿ ವಾಷಿಂಗ್ಟನ್ ನಿಂದ ಲಾಂಗ್ ಐಲ್ಯಾಂಡ್ ಗೆ ಹೋಗಿದ್ದರು ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಮಾತು.

ವುಲ್ಫ್ ಹೇಳುವ ಪ್ರಕಾರ ನಾನು ಅಧ್ಯಕ್ಷರ ಜತೆಗೆ ಸಾಕಷ್ಟು ಮಾತನಾಡಿದೆ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದೆ. ಆದರೆ ಈ ವರೆಗೆ ಅಧ್ಯಕ್ಷರ ಜತೆಗೆ ಯಾವತ್ತೂ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿಲ್ಲ ಮತ್ತು ಅವರೊಂದಿಗೆ ಒಬ್ಬಳೇ ಇದ್ದದ್ದು ಸಹ ಇಲ್ಲ" ಎಂದು ಹಾಲೆ ಹೇಳಿದ್ದಾರೆ. ಆ ಮೂಲಕ ಲೇಖಕ ಮೈಕೆಲ್ ವುಲ್ಫ್ ನ ಎಲ್ಲ ಆರೋಪ ಅಲ್ಲಗಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+