ಯಾವ ಯಾವ ದೇಶಗಳಲ್ಲಿ ಯೋಗ ದಿನ ಆಚರಿಸಲಾಯಿತು?
ನವದೆಹಲಿ, ಜೂ. 22: ವಿಶ್ವ ಯೋಗ ದಿನವನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಣೆ ಮಾಡಲಾಯಿತು. ದೆಹಲಿ ರಾಜಪಥದಲ್ಲಿ 40 ಸಾವಿರ ಜನ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ಹೊಸ ದಾಖಲೆಯಾಯಿತು.
ಪ್ರಧಾನಿ ನರೇಂದ್ರ ಮೋದಿ, ಬಾಬಾ ರಾಮ್ ದೇವ್, ರಾಜ್ ನಾಥ್ ಸಿಂಗ್, ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ನಾಯಕರು ಯೋಗಾಸನ ಮಾಡಿ ಮಹತ್ವ ಸಾರಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುಟುಂಬ ಸಮೇತ ಪಾಲ್ಗೊಂಡಿದ್ದರು. ಉಳಿದಂತೆ ಸೈನಿಕರು, ಸಾಧುಗಳು ಯೋಗ ಮಾಡಿದರು. ವಿದೇಶಗಳಲ್ಲೂ ಯೋಗ ದಿನಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿತ್ತು.[ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಯೋಗ ಸಾಧನೆ ಪುಟಗಳು]
ಅಮೆರಿಕ, ಜೀನಿವಾದಲ್ಲೂ ಯೋಗ ದಿನ ಆಚರಣೆ ಮಾಡಲಾಯಿತು. ಬಾಲಿವುಡ್ ನಟನಟಿಯರು ಯೋಗ ದಿನದಲ್ಲಿ ಪಾಲ್ಗೊಂಡಿದ್ದರು. ಅವುಗಳ ಎಲ್ಲ ಚಿತ್ರಣವನ್ನು ಇಲ್ಲಿ ಒಟ್ಟುಗೂಡಿಸಿ ನೀಡಲಾಗಿದೆ.(ಪಿಟಿಐ ಚಿತ್ರಗಳು)

ಆರ್ ಎಸ್ ಎಸ್ ಯೋಗ
ಆಗ್ರಾದ ತಾಜ್ ಮಹಲ್ ಸಮೀಪ ಯೋಗದ ವಿವಿಧ ಆಸನಗಳನ್ನು ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು. ಯೋಗ ದಿನದಲ್ಲಿ ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗ್ವತ್ ಸಹ ಭಾಗವಹಿಸಿದ್ದರು.

ಜೀನಿವಾದಲ್ಲೂ ಯೋಗ
ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಜೀನಿವಾದಲ್ಲಿ ಕಂಡು ಬಂದ ದೃಶ್ಯ. ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವೆಡೆ ಯೋಗ ಪ್ರದರ್ಶನ ಮಾಡಲಾಯಿತು.

ಗುರ್ ಗಾಂವ್ ನಲ್ಲಿ ಶಿಸ್ತಿನ ಯೋಗ
ಗುರ್ ಗಾಂವ್ ಯೋಗ ದಿನಾಚರಣೆ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ, ಸಾವಿರಾರು ಜನ ಕಾರ್ಯಕರ್ತರು ಯೋಗ ದಿನದಲ್ಲಿ ಭಾಗವಹಿಸಿದ್ದರು.

ಬಿರುಟ್ ನಲ್ಲಿ ಯೋಗ
ಲೆಬೆನಾನ್ ನ ಬಿರುಟ್ ನಲ್ಲಿ ನಡೆದ ಉಓಗ ಪ್ರದರ್ಶನ. ವಿವಿಧ ದೇಶಗಳಲ್ಲೂ ಹಲವಾರಿ ದಿನದಿಂದ ಯೋಗ ದಿನಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು.

ಸ್ವಾಮೀಜಿಗಳ ಯೋಗ
ಸೂರತ್ ನಲ್ಲಿ ಗುರುಕುಲದ ವಿದ್ಯಾರ್ಥಿಗಳು ಒಂದಾಗಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶನ ಮಾಡಿದರು

ಬಾಲಿವುಡ್ ಯೋಗ
ಬಾಲಿವುಡ್ ನಟಿ ರಾಖಿ ಸಾವಂತ್ ಸಹ ಯೋಗ ದಿನದಲ್ಲಿ ಭಾಗವಹಿಸಿದ್ದರು. ಹಾಸ್ಯ ಕಲಾವಿದ ರಾಜು ಶ್ರೀವಾತ್ಸವ್ ರಾಖಿ ಸಾವಂತ್ ಅವರಿಗೆ ಸಾಥ್ ನೀಡಿದರು.

ಇಸ್ರೇಲ್ ಯೋಗ
ಅಂತಾರಾಷ್ಟ್ರೀಯ ಯೋಗ ದಿನವನ್ನು ಇಸ್ರೇಲ್ ನಲ್ಲಿ ಆಚರಿಸಲಾಯಿತು. ಸದಾ ಹಿಂಸಾಚಾರದಿಂದ ನಲುಗುತ್ತಿದ್ದ ಮಧ್ಯ ಪ್ರಾಚ್ಯ ಇತ್ತೀಚೆಗೆ ಶಾಂತವಾಗಿದೆ.

ಮುಸಲ್ಮಾನರಿಂದಲೂ ಬೆಂಬಲ
ಸುರತ್ ನ ಮದರಸಾಗಳಲ್ಲೂ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ಯೋಗ ಪ್ರದರ್ಶನವನ್ನು ನೋಡಿಯೇ ಸವಿಯಬೇಕು.

ಹಾಂಕ್ ಕಾಂಗ್
ಮೇಕ್ ಇನ್ ಇಂಡಿಯಾ ಎಂದು ಚೀನಾದಲ್ಲಿ ಮ್ಯಾಜಿಕ್ ಮಾಡಿ ಬಂದಿದ್ದ ನರೇಂದ್ರ ಮೋದಿ ಅವರ ಕನಸಿನ ಯೋಗ ದಿನಕ್ಕೆ ಚೀನಿಯರ ಬೆಂಬಲ.

ಅಮೆರಿಕನ್ನರ ಯೋಗ ಪ್ರದರ್ಶನ
ವಾಷಿಂಗ್ ಟನ್ ನಲ್ಲಿ ಯೋಗಾಸನಗಳ ವಿವಿಧ ಭಂಗಿ ಪ್ರದರ್ಶಿಸಲಾಯಿತು. ಅಮೆರಿಕದ ವಿವಿಧೆಡೆ ಯೋಗ ದಿನಕ್ಕೆ ಅಭುತಪೂರ್ವ ಬೆಂಬಲ ವ್ಯಕ್ತವಾಗಿತ್ತು.

ಇದು ಜಿಮ್ನಾಸ್ಟಿಕ್ ಅಲ್ಲ
ಬೀಜಿಂಗ್ ನ ಯೋಗ ಪ್ರದರ್ಶನ ಒಂದು ಕ್ಷಣ ಜಿಮ್ನಾಸ್ಟಿಕ್ ನಂತೆ ಕಂಡುಬಂದಿದ್ದರೂ ಆಶ್ಚರ್ಯಪಡಬೇಕಾದ್ದಿಲ್ಲ.

ಶ್ವಾನ ಜಲಯೋಗ
ಸಾಕುಪ್ರಾಣಿಗಳಿಗೂ ಯೋಗ ದಿನದ ಸಂಭ್ರಮ, ಅನುಭವ. ತನ್ನ ತರಬೇತುದಾರನೊಂದಿಗೆ ನೀರಿಗಳಿದು ಯೋಗ ಮಾಡಿದ ಶ್ವಾನಗಳು ಕೋಲ್ಕತ್ತಾದಲ್ಲಿ ಕಂಡಿದ್ದು ಹೀಗೆ.

ಇದಕ್ಕೊಂದು ಸೆಲ್ಯೂಟ್
ಯೋಗ ದಿನದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಪ್ರದರ್ಶನ ನೀಡಿದ ಅಂಗವಿಕಲರಿಗೊಂದು ಸಲಾಂ.

ಸಮಾಗಮ
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಸ್ಪರ ಉಭಯಕುಶಲೋಪರಿ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಉಓಗ ಗುರು ಬಾಬಾ ರಾಮ್ ದೇವ್.

ಬಾಲಿವುಡ್ ಬೆಡಗಿ
ಮುಂಬೈನಲ್ಲಿ ಯೋಗ ಪ್ರದರ್ಶನ ನೀಡಿದ ಬಾಲಿವುಡ್ ಬೆಡಗಿ ಕೀರ್ತಿ ಸನುನ್. ಅನೇಕ ಹಿಂದಿ ಕಿರುತೆರೆ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅರವಿಂದ್ ಕೇಜ್ರಿವಾಲ್
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.

ಲಾಲ್ ಕೃಷ್ಣ ಅಡ್ವಾಣಿ
ಸರ್ವಾಧಿಕಾರದ ಹೇಳಿಕೆ ನೀಡಿ ಗೊಂದಲಕ್ಕೆ ಕಾರಣರಾಗಿದ್ದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.












Click it and Unblock the Notifications