ನ್ಯೂಜಿಲೆಂಡ್ ಹತ್ಯಾಕಾಂಡ: 9 ಭಾರತೀಯರು ನಾಪತ್ತೆ
ನವದೆಹಲಿ, ಮಾರ್ಚ್ 16: ಶುಕ್ರವಾರ ನ್ಯೂಜಿಲೆಂಡಿನ ಎರಡು ಮಸೀದಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 9 ಭಾರತೀಯರು ನಾಪತ್ತೆಯಾಗಿದೆ ಎಂಬ ವರದಿ ಮೂಲಗಳಿಂದ ಲಭ್ಯವಾಗಿದ್ದು, ಈ ಕುರಿತು ಮಾಹಿತಿ ನೀಡುವಂತೆ, ನ್ಯೂಜಿಲೆಂಡಿನ ಭಾರತೀಯ ರಾಯಭಾರಿ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಘಟನೆಯಲ್ಲಿ ಒಟ್ಟು 49 ಮಂದಿ ಮೃತರಾಗಿದ್ದು, ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಪುರುಷರು ಮತ್ತು ಓರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆಯಲ್ಲಿ ಮಸೀದಿಯೊಳಗೆ ಆಗಮಿಸಿದ ಗನ್ ಮ್ಯಾನ್ ಮನಬಂದಂತೆ ಶೂಟ್ ಮಾಡಿದ್ದಾನೆ. ಜನಾಂಗೀಯ ದ್ವೇಷದಿಂದ ಈ ಘಟನೆ ನಡೆಸಿರಬಹುದು ಎನ್ನಲಾಗಿದ್ದು, ಇದನ್ನು ಉಗ್ರದಾಳಿ ಎಂದೇ ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದ ಬಾಂಗ್ಲಾದೇಶದ ಆಟಗಾರರೂ ಆ ಸಂದರ್ಭದಲ್ಲಿ ಅದೇ ಮಸೀದಿಗೆ ಹೊರಟಿದ್ದರು. ಅವರು ಇನ್ನೇನು ಮಸೀದಿ ಪ್ರವೇಶಿಸಬೇಕು ಎಂಬಷ್ಟರಲ್ಲಿ ಗುಂದಿನ ದಾಳಿ ಆರಂಭವಾಗಿದ್ದು, ಅವರನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸಲಾಯಿತು. ಇದರಿಂದಾಗಿ ಅದೃಷ್ಟವಶಾತ್ ಆಟಗಾರರೆಲ್ಲರೂ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.












Click it and Unblock the Notifications